ಮುಂಬೈ: ಐಟಂ ಸಾಂಗ್ ನಟಿ ಮಲ್ಲಿಕಾ ಶೆರಾವತ್ ಮತ್ತೆ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಕ್ಟೋಬರ್ 11ರಂದು ಬಿಡುಗಡೆಯಾದ “ವಿಕ್ಕಿ ವಿದ್ಯಾ ಕಾ ವೋ” ಸಿನಿಮಾದಲ್ಲಿ ಅವರು ಹೆಜ್ಜೆ ಹಾಕಿದ್ದಾರೆ. ಈ ಸಿನಿಮಾದಲ್ಲಿ ರಾಜ್‌ಕುಮಾರ್ ರಾವ್ ಮತ್ತು ತೃಪ್ತಿ ಡಿಮ್ರಿ ಮುಖ್ಯಪಾತ್ರದಲ್ಲಿ ಮಿಂಚಿದ್ದಾರೆ. ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಇರುವ ಮಲ್ಲಿಕಾ ಶೆರಾವತ್, ತಮ್ಮ ಹಳೆ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಟಾಲಿವುಡ್ ಡೈರೆಕ್ಟರ್ ಒಬ್ಬರು ಮಲ್ಲಿಕಾ ಶೆರಾವತ್ ಅವರಿಂದ ಏನು ಬಯಸಿದ್ರು ಎಂಬುದನ್ನು ನಟಿ ಹೇಳಿದ್ದಾರೆ. ಮಲ್ಲಿಕಾ ಶೆರಾವತ್ ಹೆಚ್ಚಿನ ಎಲ್ಲಾ ಭಾಷೆಗಳಲ್ಲಿ ನಟಿಸಿರುವ ನಟಿ. ಐಟಂ ಸಾಂಗ್ ಎಂದಾಗ ನೆನೆಪಾಗುವ ಕೆಲ ನಟಿಯರಲ್ಲಿ ಮಲ್ಲಿಕಾ ಸೇರಿದ್ದಾರೆ. ಶೂಟಿಂಗ್ ವೇಳೆ ನಟ-ನಟಿಯರಿಗೆ ಚಿತ್ರವಿಚಿತ್ರ ಅನುಭವವಾಗುತ್ತದೆ. ಕೆಲವೊಂದು ಕೆಟ್ಟದಾಗಿದ್ದಾರೆ ಮತ್ತೆ ಕೆಲವು ತಮಾಷೆಯಿಂದ ಕೂಡಿರುತ್ತವೆ. ಮಲ್ಲಿಕಾ ಟಾಲಿವುಡ್‌ನ ತಮ್ಮ ವಿಚಿತ್ರ ಅನುಭವದ ಬಗ್ಗೆ ಹೇಳಿದ್ದಾರೆ.
ಪ್ರೇಕ್ಷಕರನ್ನು ಸೆಳೆಯಲು ನಿರ್ದೇಶಕರು ಏನೇನೋ ಕಸರತ್ತು ಮಾಡ್ತಾರೆ. ಅದರಲ್ಲೂ ಐಟಂ ಸಾಂಗ್ ಎಂದಾಗ ಇಂಥಹ ಪ್ರಯೋಗ ಹೆಚ್ಚಾಗುತ್ತದೆ. ಮಲ್ಲಿಕಾ ಶೆರಾವತ್ ಪ್ರಕಾರ, ಟಾಲಿವುಡ್ ಸಿನಿಮಾ ಒಂದರ ಸಾಂಗ್ ಶೂಟಿಂಗ್ ನಡೆಯುತ್ತಿತ್ತು. ಸಾಂಗ್ ಮಾಮೂಲಿಯಾಗಿರುತ್ತದೆ ಎಂದು ಭಾವಿಸಿದ್ದ ಮಲ್ಲಿಕಾ, ಶೂಟಿಂಗ್‌ಗೆ ಒಪ್ಪಿದ್ದರು. ಆದ್ರೆ ಅಲ್ಲಿ ನಡೆದಿದ್ದೇ ಬೇರೆ. ಮಲ್ಲಿಕಾ ಶೆರಾವತ್ ಬಳಿ ಬಂದ ನಿರ್ದೇಶಕರು, ಮೇಡಂ, ನೀವು ಎಷ್ಟು ಹಾಟ್ ಆಗಿದ್ದೀರಿ ಎಂದು ತೋರಿಸಲು ನಾವು ಬಯಸುತ್ತೇವೆ. ಈ ದೃಶ್ಯದಲ್ಲಿ ನಾಯಕ ನಿಮ್ಮ ಹೊಟ್ಟೆ ಮೇಲೆ ರೊಟ್ಟಿ ಬೇಯಿಸುತ್ತಾರೆ ಎಂದಿದ್ದರಂತೆ. ಇದನ್ನು ಕೇಳಿ ಶಾಕ್ ಆದ ಮಲ್ಲಿಕಾ, ಶೂಟಿಂಗ್ ಗೆ ಗುಡ್ ಬೈ ಹೇಳಿದ್ದರು. ಮಲ್ಲಿಕಾ ಶೆರಾವತ್, ಯಾವ ಸಿನಿಮಾ, ಯಾವ ನಿರ್ದೇಶಕರು ಎಂಬುದನ್ನು ಹೇಳಿಲ್ಲ.
ಮಾತು ಮುಂದುವರೆಸಿದ ಮಲ್ಲಿಕಾ ಶೆರಾವತ್, ಹೆಣ್ಣಿನ ಚೆಲುವನ್ನು ಬಿಂಬಿಸುವ ಅವರ ಕಲ್ಪನೆ ಕೇಳಿ ಆಶ್ಚರ್ಯವಾಯಿತು. ನನಗೆ ಇದು ಇಷ್ಟವಾಗ್ಲಿಲ್ಲ. ಕೆಲಸ ಬಿಟ್ಟು ಬಂದೆ ಎಂದಿದ್ದಾರೆ. ಅದೇ ಸಂದರ್ಶನದಲ್ಲಿ ಮಲ್ಲಿಕಾ ಶೆರಾವತ್, ಚಲನಚಿತ್ರಗಳಲ್ಲಿನ ಮಹಿಳೆಯರ ಸೌಂದರ್ಯವನ್ನು ಹೇಗೆ ಬಳಸಿಕೊಳ್ಳಲಾಗುತ್ತದೆ ಎಂಬುದನ್ನು ಹೇಳಿದ್ದಾರೆ. ಚಿತ್ರರಂಗವು ಮಹಿಳೆಯರ ಲೈಂಗಿಕತೆಯನ್ನು ದಶಕಗಳಿಂದ ಬಳಸಿಕೊಳ್ಳುತ್ತಿದೆ. ಮಹಿಳೆಯರನ್ನು ಕಾರು, ಸಾಬೂನು, ತೊಳೆಯುವ ಯಂತ್ರ ಮತ್ತು ಟೂತ್‌ಪೇಸ್ಟ್ ಸೇರಿದಂತೆ ಎಲ್ಲ ವಸ್ತುಗಳ ಮಾರಾಟ ಮಾಡಲು ಬಳಸಲಾಗುತ್ತದೆ ಎಂದಿದ್ದಾರೆ.
2022ರಲ್ಲಿ ರಜತ್ ಕಪೂರ್ ಅವರ RK/RKayನಲ್ಲಿ ಮಲ್ಲಿಕಾ ಕಾಣಿಸಿಕೊಂಡಿದ್ರು. ನಂತ್ರ ಬ್ರೇಕ್ ತೆಗೆದುಕೊಂಡಿದ್ದ ಮಲ್ಲಿಕಾ ಮತ್ತೆ ಬಂದಿದ್ದಾರೆ. ಸಂದರ್ಶನದಲ್ಲಿ ಮಲ್ಲಿಕಾ, ತಮ್ಮ ಬಾಲ್ಯ ಸೇರಿದಂತೆ ಅನೇಕ ವಿಷ್ಯಗಳ ಬಗ್ಗೆ ಮಾತನಾಡಿದ್ದಾರೆ. ಬಾಲ್ಯದಿಂದಲೂ ಒಬ್ಬಂಟಿಯಾಗಿ ಹೋರಾಡಿದರು ಮಲ್ಲಿಕಾ ಶೆರಾವತ್. ಅವರಿಗೆ ತಂದೆಯಾಗ್ಲಿ, ತಾಯಿಯಾಗ್ಲಿ ಬೆಂಬಲ ನೀಡಿರಲಿಲ್ಲ. ಹರ್ಯಾಣದಲ್ಲಿ ಪಿತೃಪ್ರಧಾನ ಸಮಾಜ ಕಠೋರವಾಗಿದೆ. ಪುರುಷರು ಮಹಿಳೆಯರನ್ನು ತುಳಿಯೋದು ಮಾಮೂಲಿ. ಆದ್ರೆ ಮಹಿಳೆಯರು ಕೂಡ ಮಹಿಳೆಯರನ್ನು ಬೆಳೆಯಲು ಬಿಡೋದಿಲ್ಲ. ಪಿತೃಪ್ರಧಾನ ಸಮಾಜದ ಕಪಿಮುಷ್ಠಿಯಲ್ಲಿ ಅವರನ್ನು ಬಚ್ಚಿಡುವ ಪ್ರಯತ್ನ ಮಾಡ್ತಾರೆ ಎಂದು ಮಲ್ಲಿಕಾ ಖಂಡಿಸಿದ್ದಾರೆ. ನನ್ನ ಮನೆಯಲ್ಲೇ ನನ್ನ ಹಾಗೂ ನನ್ನ ಸಹೋದರನ ಮಧ್ಯೆ ತುಂಬಾ ತಾರತಮ್ಯ ನಡೆದಿದೆ. ನಾನು ಹುಟ್ಟಿದ ಮೇಲೆ ನನ್ನ ತಾಯಿ ಖಿನ್ನತೆಗೆ ಒಳಗಾಗಿದ್ದರು ಎಂದು ಮಲ್ಲಿಕಾ ಮನಸ್ಸು ಬಿಚ್ಚಿ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.