ರೆಡ್ ಹ್ಯಾಂಡ್ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಉಪ ತಹಶೀಲ್ದಾರ.!

WhatsApp
Telegram
Facebook
Twitter
LinkedIn

ದಾವಣಗೆರೆ : ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರಿನ ಉಪ ತಹಶೀಲ್ದಾರ್ ಮಂಗಳವಾರ (ಅ.15) ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.

ಲೋಕಾಯುಕ್ತ ಬಲೆಗೆ ಬಿದ್ದವರು ಸಂತೇಬೆನೂರು ಉಪ ತಹಶೀಲ್ದಾರ್ ಸುಧಾ ಮೂಡಲಗಿರಿಯಪ್ಪ ಎಂದು ತಿಳಿದು ಬಂದಿದೆ.

ಇವರು ಬೋನಾಪೈಡ್ ಪ್ರಮಾಣಪತ್ರಕ್ಕಾಗಿ 2 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎಂದು ತಿಳಿದು ಬಂದಿದೆ.

ಚನ್ನಗಿರಿ ತಾಲೂಕಿನ ಹಿರೇಗಂಗೂರು ಗ್ರಾಮದ ಎಸ್. ಆರ್. ಕುಮಾರ್ ಎಂಬುವರು ಸಹೋದರ ಗಿರೀಶ್ ಅವರೊಂದಿಗೆ ಸೆ.26 ರಂದು ಬೋನಾಪೈಡ್ ಪ್ರಮಾಣಪತ್ರಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಎಲ್ಲ ದಾಖಲೆಗಳು ಸರಿ ಇದ್ದರೂ ಗುರುತಿನ ಚೀಟಿ ನೀಡಿಲ್ಲ ಅಂತ ಹಿಂಬರಹದೊಂದಿಗೆ ಅರ್ಜಿಯನ್ನು ತಿರಸ್ಕರಿಸಲಾಗಿತ್ತು.

ಅ. 10 ರಂದು ಮತ್ತೊಮ್ಮೆ ಬೋನಾಪೈಡ್ ಪ್ರಮಾಣಪತ್ರಕ್ಕಾಗಿ ಆನ್‌ಲೈನ್‌ ನಲ್ಲಿ ಅರ್ಜಿ ಸಲ್ಲಿಸಿದ್ದ ಕುಮಾರ್, ಯಾಕೆ ನಮ್ಮ ಕೆಲಸ ಆಗುತ್ತಿಲ್ಲ ಎಂದು ಉಪ ತಹಶಿಲ್ದಾರ ಅವರನ್ನು ಕೇಳಿದ್ದಾರೆ. ಆಗ ಉಪ ತಹಶೀಲ್ದಾರ ಎರಡು ಸಾವಿರ ರೂ. ಕೊಟ್ರೆ ಪ್ರಮಾಣಪತ್ರ ಮಾಡಿಕೊಡುವುದಾಗಿ ತಿಳಿಸಿದ್ದರು. ಅದರಂತೆ ಕುಮಾರ್ ಮುಂಗಡವಾಗಿ 500 ರೂ. ನೀಡಿದ್ದರು.

ಅಲ್ಲದೇ ಲಂಚ ಬೇಡಿಕೆಯ ಬಗ್ಗೆ ಲೋಕಾಯುಕ್ತರ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಮಂಗಳವಾರ ಇನ್ನುಳಿದ ಹಣವನ್ನು ಪಡೆಯುತ್ತಿರುವಾಗ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ತಹಶೀಲ್ದಾರ್ ಸುಧಾ ಮೂಡಲಗಿರಿಯಪ್ಪ ಅವರನ್ನು ರೆಡ್ ಹ್ಯಾಂಡ್ಆಗಿ ಹಿಡಿದಿದ್ದಾರೆ.

BC Suddi   About Us
For Feedback - [email protected]

Related News

LATEST Post

WhatsApp Icon Telegram Icon