ಕೋಚಿಂಗ್ ಇಲ್ಲದೆ IPS ಅಧಿಕಾರಿಯಾದ ಇಂಜಿನಿಯರ್ ಅಂಶಿಕಾ ವರ್ಮಾ

WhatsApp
Telegram
Facebook
Twitter
LinkedIn

ಉತ್ತರಪ್ರದೇಶ : ಕೆಲವು ವ್ಯಕ್ತಿಗಳೇ ಹಾಗೆ ಮತ್ತಷ್ಟು ಅದೇನನ್ನೋ ಸಾಧಿಸುವ ಹಂಬಲ. ತಮ್ಮ ಅಧ್ಯಯನ ಕ್ಷೇತ್ರದ ಹೊರತಾಗಿ ಮತ್ಯಾವುದೋ ವಲಯದೆಡೆಗೆ ಮನಸ್ಸು ಹಾತೊರೆಯುತ್ತದೆ. ಇದೇ ರೀತಿ ಓರ್ವ ಇಂಜಿನಿಯರ್ ಯುಪಿಎಸ್‌ಸಿ ಪಾಸ್ ಮಾಡಿದ ಬಗೆಗಿನ ಸ್ಪೂರ್ತಿದಾಯಕ ಕಥಾನಕ ಇಲ್ಲಿದೆ.

ಯಾವುದೇ ಕೋಚಿಂಗ್ ಇಲ್ಲದೆ ಯುಪಿಎಸ್‌ಸಿ ಪರೀಕ್ಷೆ ತೇರ್ಗಡೆಯಾದ ಇಂಜಿನಿಯರ್ ಅಂಶಿಕಾ ವರ್ಮಾ ಅವರು ಉತ್ತರ ಪ್ರದೇಶದ ಪ್ರಯಾಗ್ರಾಜ್ ಮೂಲದವರು. ಅಂಶಿಕಾ ವರ್ಮಾ ತನ್ನ ಪ್ರಾಥಮಿಕ ಶಿಕ್ಷಣವನ್ನು ನೋಯ್ಡಾದಲ್ಲಿ ಪೂರ್ಣಗೊಳಿಸಿದರು.

ನಂತರ ಅವರು ನೋಯ್ಡಾದ ಗಲ್ಗೋಟಿಯಾ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಪದವಿಯನ್ನು ಪಡೆದರು. 2018 ರಲ್ಲಿ ಪದವಿ ಪಡೆದು, ನಂತರ ಸಿವಿಲ್ ಸರ್ವೀಸಸ್ ಪರೀಕ್ಷೆಯತ್ತ ತನ್ನ ಚಿತ್ತ ನೆಟ್ಟರು.

ಅಂಶಿಕಾ 2019 ರಲ್ಲಿ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ಆರಂಭಿಸಿದರು. ಯಾವುದೇ ತರಬೇತಿ ಇಲ್ಲದೆ ಪ್ರಯಾಗರಾಜ್‌ನಲ್ಲಿ ಸ್ವಯಂ-ಅಧ್ಯಯನಕ್ಕೆ ತನ್ನ ಸಮಯವನ್ನು ಮೀಸಲಿಟ್ಟರು. ದೃಢಸಂಕಲ್ಪ ಮತ್ತು ಪರಿಶ್ರಮದಿಂದ 2020 ರಲ್ಲಿ ತನ್ನ ಎರಡನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಅನ್ನು ಭೇದಿಸಿದ ಅಂಶಿಕಾ, 136 ನೇ ರ‍್ಯಾಂಕ್ ಪಡೆದರು.

ಅಂಶಿಕಾ ತಂದೆ ಉತ್ತರ ಪ್ರದೇಶ ಎಲೆಕ್ಟ್ರಿಸಿಟಿ ಕಾರ್ಪೊರೇಷನ್ ಲಿಮಿಟೆಡ್‌ನ (ಯುಪಿಇಎಲ್) ನಿವೃತ್ತ ಉದ್ಯೋಗಿಯಾಗಿದ್ದರು. ತಾಯಿ ಗೃಹಣಿಯಾಗಿದ್ದರು. ತನ್ನ ಯಶಸ್ಸಿಗೆ ಹೆತ್ತವರು ಕೂಡಾ ಕಾರಣ ಎಂಬುವುದಾಗಿ ಅಂಶಿಕಾ ಹೇಳುತ್ತಾರೆ.

ಅವರ ವೃತ್ತಿಪರ ಸಾಧನೆಗಳ ಜೊತೆಗೆ, ಅಂಶಿಕಾ ಅವರು ಸಾಮಾಜಿಕ ಮಾಧ್ಯಮದ ತಾರೆಯಾಗಿದ್ದಾರೆ,ಇನ್ಸ್ಟ್ರಾಗ್ರಾಂನಲ್ಲಿ ಸುಮಾರು 257,000 ಫಾಲೋವರ್ಸ್‌ನ್ನು ಹೊಂದಿದ್ದಾರೆ.

 

BC Suddi   About Us
For Feedback - [email protected]

Related News

LATEST Post

WhatsApp Icon Telegram Icon