ಕನ್ನಡದ ಕಲರ್ಸ್, ಸೂಪರ್ ಸೇರಿ ಏಳು ಚಾನಲ್​ಗಳನ್ನು ಮಾರಬೇಕಿರುವ ಅಂಬಾನಿ

WhatsApp
Telegram
Facebook
Twitter
LinkedIn

ಮುಂಬೈ: ಸ್ಟಾರ್ ಇಂಡಿಯಾದ ಬಿಸಿನೆಸ್ ಅನ್ನು ಖರೀದಿಸಲು ರಿಲಾಯನ್ಸ್ ಗ್ರೂಪ್ ಸಂಸ್ಥೆ ಡಿಸ್ನಿ ಜೊತೆ ನಡೆಸುತ್ತಿರುವ ಮಾತುಕತೆ ಬಹುತೇಕ ಅಂತಿಮ ಹಂತಕ್ಕೆ ಬಂದಿದೆ. ಇದೇ ವೇಳೆ, ಭಾರತೀಯ ಸ್ಪರ್ಧಾ ಆಯೋಗವು ಈ ಒಪ್ಪಂದಕ್ಕೆ ಒಪ್ಪಿಗೆ ನೀಡಿದೆಯಾದರೂ, ಒಂದು ಪ್ರಮುಖ ಷರತ್ತನ್ನೂ ಮುಂದಿಟ್ಟಿದೆ.

ಹೌದು. ರಿಲಾಯನ್ಸ್ ಗ್ರೂಪ್ ತನ್ನ ಕೆಲ ಟಿವಿ ಚಾನಲ್‌ಗಳನ್ನು ಮಾರಬೇಕು ಎಂಬುದು ಆ ಷರತ್ತು. ಈ ಮೂಲಕ ಮಾಧ್ಯಮಕ್ಷೇತ್ರದಲ್ಲಿ ಸ್ಪರ್ಧಾತ್ಮಕತೆ ಉಳಿಸುವ ಉದ್ದೇಶದಿಂದ ಸಿಸಿಐ ಒಂದು ಷರತ್ತು ಹಾಕಿದೆ. ರಿಲಾಯನ್ಸ್ ಗ್ರೂಪ್ ತನ್ನ ಹಂಗಾಮ, ಸೂಪರ್ ಹಂಗಾಮ, ಸ್ಟಾರ್ ಜಲ್ಟಾ ಮೂವೀಸ್, ಕಲರ್ಸ್ ಮರಾಠಿ ಸೇರಿದಂತೆ ಏಳು ಚಾನಲ್‌ಗಳನ್ನು ರಿಲಾಯನ್ಸ್ ಮಾರಬೇಕಾಗುತ್ತದೆ.

ಇದರಲ್ಲಿ ಕನ್ನಡದ ಕಲರ್ಸ್ ಸೂಪರ್ ಕೂಡ ಒಳಗೊಂಡಿದೆ. ಉದ್ಯಮದಲ್ಲಿ ಸ್ಪರ್ಧಾತ್ಮಕತೆ ನೆಲಸುವಂತೆ ನೋಡಿಕೊಳ್ಳುವ ಜವಾಬ್ದಾರಿ ಕಾಂಪಿಟೇಶನ್ ಕಮಿಷನ್‌ನ ಜವಾಬ್ದಾರಿಯಾಗಿರುತ್ತದೆ. ಹೀಗಾಗಿ, ಗೂಗಲ್ ಮೊದಲಾದ ಸಂಸ್ಥೆಗಳಿಗೆ ಸಿಸಿಐ ಆಗಾಗ್ಗೆ ಮೂಗುದಾರ ಹಾಕಲು ನೋಡುತ್ತಿರುತ್ತದೆ. ಐಪಿಎಲ್, ಐಸಿಸಿ ಕ್ರಿಕೆಟ್ ಟೂರ್ನಿಗಳು, ಬಿಸಿಸಿಐ ಕ್ರಿಕೆಟ್, ವಿಂಬಲ್ಡನ್, ಪ್ರೋಕಬಡ್ಡಿ ಇತ್ಯಾದಿ ಕ್ರೀಡಾ ಪ್ರಸಾರದ ಹಕ್ಕುಗಳು ಸ್ಟಾರ್-ರಿಲಾಯನ್ಸ್ ಗುಂಪಿಗೆ ಹೋಗುತ್ತವೆ.

ಹೀಗಾದರೆ ಜಾಹೀರಾತಿ ದರಕ್ಕೆ ಕಡಿವಾಣ ಇಲ್ಲದಂತಾಗುತ್ತದೆ. ಕೇಳಿದಷ್ಟು ದರಕ್ಕೆ ಜಾಹೀರಾತು ನೀಡಬೇಕಾಗುತ್ತದೆ ಎಂಬುದು ಅಡ್ವರ್ಟೈಸ್ಮೆಂಟ್ ಉದ್ಯಮದ ಅಳಲಾಗಿದೆ. ಆದರೆ ರಿಲಾಯನ್ಸ್ ಗ್ರೂಪ್ ಮತ್ತು ಡಿಸ್ನಿ ಎರಡೂ ಸಂಸ್ಥೆಗಳು ತಾವು ಜಾಹೀರಾತು ದರಗಳನ್ನು ಅಸಹಜವಾಗಿ ಏರಿಸುವುದಿಲ್ಲ ಎಂದು ಸ್ಪಷ್ಟಪಡಿಸಿವೆ.

BC Suddi   About Us
For Feedback - [email protected]

Related News

LATEST Post

WhatsApp Icon Telegram Icon