ಬೆಂಗಳೂರು : ಭಾರಿ ಮಳೆಯ ಹಿನ್ನಲೆ ನಗರದ ಶಾಲೆಗಳಿಗೆ ರಜೆ ಘೋಷಿಸಿದ್ದಿ, ಇದೀಗ ಕಡಿತಗೊಂಡ ತರಗತಿ ಸರಿದೂಗಿಸುವ ಯತ್ನ ಖಾಸಗಿ ಶಾಲಾ ಆಡಳಿತ ಮಂಡಳಿ ನಡೆಸಲು ಮುಂದಾಗಿದೆ.
ಕೆಲವು ವಾರಗಳ ಕಾಲ ಶನಿವಾರ ಮತ್ತು ಭಾನುವಾರ ಇಡೀದಿನ ತರಗತಿ ನಡೆಸಲು ಬೆಂಗಳೂರಿನ ಖಾಸಗಿ ಶಾಲಾ ಆಡಳಿತ ಮಂಡಳಿ ನಿರ್ಧರಿಸಿದೆ. ಮಳೆಯ ಕಾರಣ ಕಳೆದ ವಾರ ಎರಡು ಮೂರುದಿನ ಸೇರಿ ಕೆಲ ದಿನಗಳಂದು ಇಡೀ ಜಿಲ್ಲೆಯ ಎಲ್ಲಾ ಮಾದರಿ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. 20 ದಿನಗಳ ದಸರಾ ರಜೆ ಹಿನ್ನೆಲೆ ಇದೀಗ ಮಳೆಯಿಂದ ರಜೆ ನೀಡಿ,ದ್ದು ಮಕ್ಕಳಿಗೆ ತರಗತಿಗಳು ಈಗಾಗಲೇ ನಷ್ಟವಾಗಿದೆ. ಇನ್ನು ಮುಂದೆ ದೀಪಾವಳಿ, ಕ್ರಿಸ್ಮಸ್ ಹೇಗೆ ಸಾಕಷ್ಟು ರಜೆ ದಿನಗಳಿದ್ದು, ಉಳಿಕೆ ಪಟಗಳ ಬೋಧನೆ ಪೂರ್ಣಗೊಳಿಸಲು ಸಮಯ ಸಾಲುವುದಿಲ್ಲ.
ಹಾಗಾಗಿ ಅಕ್ಟೋಬರ್ ತಿಂಗಳ ಕೊನೆಯ ಶನಿವಾರ ಹಾಗೂ ಭಾನುವಾರ ಜೊತ್ತೆಗೆ ನವೆಂಬರ್ ತಿಂಗಳಲ್ಲಿ ಒಂದೆರಡು ವರ ಶಾಲೆಗಳು ಓಪನ್ ಇದ್ದು, ಚಟುವಟಿಕೆ ನಡೆಸಲು ತೀರ್ಮಾನಿಸಿರುವುದಾಗಿ ನಗರದ ಶಾಲಾ ಮುಖ್ಯಾಪಾಧ್ಯಯರು ತಿಳಿಸಿದ್ದಾರೆ.