ಬ್ರಿಜಿಲ್ನ ಕೊರಿಯ್ ಪಿಂಟೋದಲ್ಲಿ ಎಂಟು ತಿಂಗಳ ಮಗುವೊಂದು ತೀರಿ ಹೋಗಿತ್ತು. ಮಗುವಿನ ಅಂತ್ಯ ಸಂಸ್ಕಾರಕ್ಕೆ ಎಂದು ಸ್ಮಶಾನಕ್ಕೆ ಕುಟುಂಬ ಹಾಗೂ ಸಂಬಂಧಿಕರು ಹೋಗಿದ್ದಾರೆ. ಕೈರಾ ಶವಪೆಟ್ಟಿಗೆಯಲ್ಲಿದ್ದಾಗ ಅವಳ ಕೈಯನ್ನು ಸಂಬಂಧಿಕರೊಬ್ಬರು ಹಿಡಿದಿದ್ದಾರೆ. ಕೂಡಲೇ ಮಗುವು ಕೂಡ ಅವರ ಕೈಯನ್ನು ಗಟ್ಟಿಯಾಗಿ ಹಿಡಿದಾಗ ಎಲ್ಲರಲ್ಲೂ ಏನೋ ಸಂತಸ, ಭರವಸೆಯ ಭಾವಗಳು ಜಿಣುಗಿವೆ. ಮಗು ಜೀವಂತವಾಗಿರುವದನ್ನು ಅರಿತ ಕುಟುಂಬಸ್ಥರು ಕೂಡಲೇ ಆಸ್ಪತ್ರೆಗೆ ದೌಡಾಯಿಸಿದ್ದಾರೆ.
ಆದ್ರೆ ಆರಂಭದಲ್ಲಿ ಮಗು ಬದುಕಿಲ್ಲ ಎಂದು ಹೇಳಿದ ವೈದ್ಯರು. ಪರೀಕ್ಷೆಗೆ ಒಳಪಡಿಸಿದಾಗ.ಮಗುವಿನ ಪಲ್ಸ್ ಹಾಗೂ ಆಕ್ಸಿಜನ್ 84 ಪರ್ಸೆಂಟ್ ಇರುವುದು ಖಾತ್ರಿಯಾಗಿದೆ. ಕೂಡಲೇ ಐಸಿಯುಗೆ ಮಗುವನ್ನು ಸೇರಿಸಲಾಗಿದೆ. ಕ್ರಿಟಿಕಲ್ ಕಂಡಿಷನ್ನಲ್ಲಿದ್ದ ಮಗುವನ್ನು ಉಳಿಸಲು ವೈದ್ಯರು ತಮ್ಮ ಎಲ್ಲ ಶ್ರಮವನ್ನೂ ಪಣಕ್ಕಿಟ್ಟು ಹೋರಾಡಿದ್ದಾರೆ. ಆದ್ರೆ ಸಾವು ಬದುಕಿನ ನಡುವಿನ ಹೋರಾಟದಲ್ಲಿ ಎಂಟು ತಿಂಗಳಿನ ಕಂದಮ್ಮ ಸೋತು ಹೋಗಿದೆ. ಕೊನೆಗೆ ವಿಧಿಯೇ ಗೆದ್ದಿದೆ.
ಮೊದಲೇ ಕುಸಿದು ಹೋಗಿದ್ದ ಕೈರಾ ತಂದೆಗೆ ಮಗು ಮರಳಿ ಮೃತಪಟ್ಟಿದೆ ಎಂದು ತಿಳಿದಾಗ ಸಿಡಿಲು ಬಡಿದಂತೆಯೇ ಆಗಿದೆ.