ಬೆಳಗಾವಿ : ತಾಕತ್ತಿದ್ರೆ ನನ್ನ ಅಕ್ರಮದ ದಾಖಲೆ ಬಿಡುಗಡೆಗೊಳಿಸಿ ಎಂದು ಸಚಿವ ಬೈರತಿ ಸುರೇಶ್ ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸವಾಲೆಸೆಗಿದ್ದಾರೆ.
ಬೆಳಗಾವಿಯಲ್ಲಿ ಶೋಭಾ ಕರಂದ್ಲಾಜೆ ಅವರು ಭ್ರಷ್ಟಾಚಾರ ಮಾಡಿದ್ದಾರೆ. 15 ದಿನ ಬಿಟ್ಟು ಅವರ ಭ್ರಷ್ಟಾಚಾರದ ದಾಖಲೆ ಬಿಡುಗಡೆ ಮಾಡುತ್ತೇವೆ ಎಂಬ ಬೈರತಿ ಸುರೇಶ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಶೋಭಾ ಅವರು, ಬೈರತಿ ಸುರೇಶ್ ಮುಡಾದ ಸಾವಿರಾರು ಫೈಲ್ಸ್ ತಂದು ಸುಟ್ಟು ಹಾಕಿದ್ರು. ಅದರ ಬಗ್ಗೆ ನಾನು ಧ್ವನಿ ಎತ್ತಿದೆ. ಧ್ವನಿ ಎತ್ತಿದ ತಕ್ಷಣ ನನ್ನ ಬಗ್ಗೆ ಬೇರೆ ಬೇರೆ ಆರೋಪ ಮಾಡುತ್ತಿದ್ದಾರೆ. ಶೋಭಾ ಕರಂದ್ಲಾಜೆ ಯಾವುದೇ ಭ್ರಷ್ಟಾಚಾರ ಮಾಡಿಲ್ಲ, ಮಾಡೋದು ಇಲ್ಲ. ನನ್ನ ವಿರುದ್ಧ ದಾಖಲೆ ಬಹಿರಂಗಕ್ಕೆ ಪೊನ್ನಣ್ಣನಿಗೆ ನೇಮಕ ಮಾಡಲಿದೆ. ಪೊನ್ನಣ್ಣನಿಗೆ ವಿದ್ಯುತ್ ಇಲಾಖೆ ಏನು ಸಂಬಂಧ? ಅಂದರೇ ಏನ್ ಮಾಡಲು ಹೊರಟ್ಟಿದ್ದೀರಿ ನೀವು? ಫೆಕ್ ಫೈಲ್ ಕ್ರಿಯೆಟ್ ಮಾಡಲು ಪೊನ್ನಣ್ಣನಿಗೆ ಜವಾಬ್ದಾರಿ ಕೊಟ್ಟಿದ್ದೀರಿ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊನ್ನಣ್ಣ ಇರೋದು ಸಿಎಂ ಕಾನೂನು ಸಲಹೆಗಾರರಾಗಿರಲು. ಅದರಲ್ಲೂ ಭ್ರಷ್ಟಾಚಾರ ಮಾಡಲು ಹೋರಟ್ಟಿದ್ದೀರಿ. ನಿಮ್ಮ ಬಳಿ ಇರೋ ದಾಖಲೆ ತಕ್ಷಣ ಹೊರಗೆ ಹಾಕಿ. ನಿಮ್ಮಗೆ ಈಗ ಸಂಕಷ್ಟ ಶುರುರುವಾಗಿದೆ. ಮೈಸೂರು ನಿಂದ ಫೈಲ್ ತಂದಿದ್ದು ಸತ್ಯ, ಸುಟ್ಟು ಹಾಕಿದ್ದು ಸತ್ಯ. ಮುಡಾ ಬಗ್ಗೆ ತನಿಖೆ ಆರಂಭವಾಗಿದೆ. ತನಿಖೆಗೆ ಕೇಂದ್ರದ ಸಂಸ್ಥೆಗಳು ಎಂಟ್ರಿ ಆಗಿವೆ. ಈ ಭಯದಿಂದ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದರು.
ಇನ್ನು ರಾಜ್ಯದಲ್ಲಿ ನಡೆಯುತ್ತಿರುವ 3 ಕ್ಷೇತ್ರಗಳ ವಿಧಾನಸಭಾ ಉಪಚುನಾವಣೆ ಕುರಿತು ಮಾತನಾಡಿದ ಅವರು, 3 ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯುತ್ತಿದೆ. 3 ಕ್ಷೇತ್ರದಲ್ಲಿ ಎನ್ ಡಿಐ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ನಮ್ಮ ಶಕ್ತಿ ಇರೋದ ಬೂತ್ ಮಟ್ಟದಲ್ಲಿ, ನಮ್ಮ ಮತ ಇರೋದು ಬೂತ್ ಗಳಲ್ಲಿ, ಬೂತ್ ಮಟ್ಟದಲ್ಲಿ ವಾತಾವರಣ ಚನ್ನಾಗಿದೆ. ನಾವು 3 ಕ್ಷೇತ್ರದಲ್ಲಿ ಗೆದ್ದೆ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.