ನಾಳೆ ಈ ಹಳ್ಳಿಗಳಲ್ಲಿ ಅ.29ರಂದು ಕರೆಂಟ್ ಇರಲ್ಲ.!

 

ಚಿತ್ರದುರ್ಗ: 220 ಕೆ.ವಿ.ಎ ಎಸ್.ಆರ್.ಎಸ್, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಿಂದ ಚಿತ್ರದುರ್ಗ ವಿಭಾಗ ವ್ಯಾಪ್ತಿಯಲ್ಲಿರುವ 66/11 ಕೆ.ವಿ ಚಿತ್ರದುರ್ಗದಲ್ಲಿ ಕೇಬಲ್ ಡಕ್ಟ್ ಮತ್ತು ಕೇಬಲ್ ಮರು ವ್ಯವಸ್ಥೆಯ ರಚನೆ ಕಾರ್ಯ, 66/11 ಕೆ.ವಿ ಪಂಡರಹಳ್ಳಿ ವಿ.ವಿ ಕೇಂದ್ರದಲ್ಲಿ ಕಂಡಕ್ಟರ್ ಬದಲಿ ಕೆಲಸ, 220/66/11 ಕೆ.ವಿ ಚಿತ್ರದುರ್ಗದಲ್ಲಿ 220 ಕೆ.ವಿ ಬಸ್ ಹತ್ತಿರ ಹಾಟ್ ಸ್ಪಾಟ್ ವೀಕ್ಷಣೆಯ ಕಾರ್ಯಕ್ಕಾಗಿ ವಿ.ವಿ ಕೇಂದ್ರಗಳಿಗೆ ಮಾರ್ಗ ಮುಕ್ತತೆ ನೀಡಬೇಕಾಗಿರುವುದರಿಂದ ಇದೇ ಅ.29ರಂದು ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಈ ವಿದ್ಯುತ್ ವಿತರಣಾ ಕೇಂದ್ರದಿAದ ಹೊರ ಹೊಮ್ಮುವ 66/11 ಕೆ.ವಿ ಮಾರ್ಗಗಳಾದ ಚಿತ್ರದುರ್ಗ, ಪಂಡರಹಳ್ಳಿ, ಹಿರೆಗುಂಟನೂರು, ವಿಜಾಪುರ, ಭರಮಸಾಗರ, ಸಿರಿಗೆರೆ, ಮಾದನಾಯಕನಹಳ್ಳಿ, ತುರುವನೂರು, ಹೆಚ್.ಡಿ.ಪುರ, ಚಿತ್ರಹಳ್ಳಿ, ಬಾಲೇನಹಳ್ಳಿ, ಹೊಳಲ್ಕೆರೆ, ಜೆ.ಎನ್.ಕೋಟೆ ವಿ.ವಿ ಕೇಂದ್ರದಿAದ ವಿದ್ಯುತ್ ಸರಬರಾಜಾಗುವ ಎಲ್ಲಾ 11 ಕೆ.ವಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

Advertisement

ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು : ಚಿತ್ರದುರ್ಗ ನಗರ, ಕೆಳಕೋಟೆ, ಬ್ಯಾಂಕ್ ಕಾಲೋನಿ, ಗೋನೂರು, ಬೆಳಘಟ್ಟ, ಜಿ.ಆರ್ ಹಳ್ಳಿ, ವಿದ್ಯಾನಗರ, ಸೀಬಾರ, ಸಿ.ಜಿ.ಹಳ್ಳಿ, ಜೆ.ಸಿ.ಆರ್ ಬಡಾವಣೆ, ಚಂದ್ರವಳ್ಳಿ, ಪಿ.ಕೆ.ಹಳ್ಳಿ, ಮಿಲ್ಲ್ ಏರಿಯಾ, ಕೆ.ಡ್ಲೂ.ಎಸ್.ಎಸ್.ಬಿ, ಯೂನಿವರ್ಸಿಟಿ, ಕಾಪರ್ ಮೈನ್, ಕ್ಯಾದಿಗೆರೆ, ಜೆ.ಎನ್.ಕೋಟೆ, ಕಸವರಹಟ್ಟಿ, ಪಲ್ಲವಗೆರೆ, ಇಂಡಸ್ರಿಯಲ್ ಏರಿಯಾ, ಕೋಟೆ, ಜಿಲ್ಲಾ ಪಂಚಾಯತ್ , ಸಜ್ಜನಕೆರೆ, ದಂಡಿನಕುರುಬರಹಟ್ಟಿ, ಕೆನ್ನೆಡಲು ,ಅನ್ನೆಹಾಳು, ಹುಲ್ಲೂರು, ಪಂಡರಹಳ್ಳಿ, ಜಾನುಕೊಂಡ, ಸಿದ್ದಾಪುರ, ಗೊಡಬನಾಳು, ಸೊಂಡೆಕೊಳ, ಸೋಲ್ಲಾಪುರ, ಕುರುಬರಹಳ್ಳಿ, ಬೆಟ್ಟದನಾಗೇನಹಳ್ಳಿ, ಮಹದೇವನಕಟ್ಟೆ, ಸಿಂಗಾಪುರ, ಕಕ್ಕೆರು, ಹಿರೆಗುಂಟನೂರು, ಭೀಮಸಮುದ್ರ, ವಿಜಾಪುರ, ಭರಮಸಾಗರ, ಸಿರಿಗೆರೆ, ಮಾದನಾಯಕನಹಳ್ಳಿ, ತುರುವನೂರು, ಹೆಚ್.ಡಿ.ಪುರ, ಚಿತ್ರಹಳ್ಳಿ, ಬಾಲೇನಹಳ್ಳಿ, ಹೊಳಲ್ಕೆರೆ, ಜೆ.ಎನ್.ಕೋಟೆ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಜಿ.ತಿಮ್ಮರಾಯ ತಿಳಿಸಿದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement