ದೀಪಾವಳಿ ಹಬ್ಬದಲ್ಲಿ ಸಿಹಿ ತಿಂಡಿಯಿಲ್ಲದೆ ಇದ್ದರೆ ಆ ಹಬ್ಬ ಅಪೂರ್ಣ.. ಇದನ್ನೇ ಬಂಡವಾಳವನ್ನಾಗಿಸಿಕೊಂಡ ಕೆಲ ಡೈರಿಗಳು ರುಚಿ ಹಾಗೂ ಬಣ್ಣಕ್ಕಾಗಿ ಸಿಹಿ ತಿಂಡಿಗಳಿಗೆ ಸಿಂಥೆಟಿಕ್ ಬಣ್ಣ ಹಾಗೂ ರಾಸಾಯನಿಕಗಳನ್ನು ಬಳಸಲಾಗುತ್ತಿದೆ.
ಈ ಕಲಬೆರಕೆ ಸಿಹಿ ತಿಂಡಿಗಳನ್ನು ತಿಂದು ಹಲವಾರು ಜನ ಆರೋಗ್ಯ ಸಮಸ್ಯೆಯ ಜೊತೆ ಕ್ಯಾನ್ಸರ್ ನಂತಹ ಮಾರಕ ರೋಗಗಳು ಕಾಣಿಸಿಕೊಂಡಿದೆ. ಈ ಹಿನ್ನಲೆ ಸ್ವೀಟ್ ನ ಗುಣಮಟ್ಟವನ್ನು ಹೆಚ್ಚಿಸಲು ಎಫ್ ಎಸ್ ಎಸ್ ಎ ಐ ಸಿಹಿ ತಿಂಡಿಗಳಲ್ಲಿ ಕಲಬೆರಕೆ ಪರೀಕ್ಷಿಸಲು ಹೊಸ ತಂತ್ರವನ್ನು ತಿಳಿಸಿದೆ. ಒಂದು ಚಮಚದ ಮೇಲೆ ಸ್ವಲ್ಪ ಫಾಯಿಲ್ ಅನ್ನು ಬಿಸಿ ಮಾಡಿ, ಈ ವೇಳೆ ಶುದ್ಧ ಸಿಲ್ವರ್ ಫಾಯಿಲ್ ಸಂಪೂರ್ಣವಾಗಿ ಸುಟ್ಟು ಹೋಗುತ್ತದೆ. ಬಳಿಕ ಅಲ್ಯೂಮಿನಿಯಂ ಕಲಬೆರಕೆಯು ಬೂದು ಬೂದಿಯನ್ನು ಬಿಡುವಾಗ ಹೊಳೆಯುವ ಚೆಂಡುಗಳನ್ನು ಬಿಡುತ್ತದೆ.
ಬಳಿಕ ಖೋಯಾ ಮತ್ತು ಚೆನ್ನಾದಲ್ಲಿನ ಪಿಷ್ಟವನ್ನು ಪತ್ತೆಹಚ್ಚಲು, ಕೆಲವು ಮಾದರಿಯನ್ನು ನೀರಿನಿಂದ ಕುದಿಸಿ ಮತ್ತು ಅಯೋಡಿನ್ನ 2-3 ಹನಿಗಳ ಟಿಂಚರ್ ಸೇರಿಸಿ. ನೀಲಿ ಬಣ್ಣ ರಚನೆಯು ಕಲಬೆರಕೆಯನ್ನು ಸೂಚಿಸುತ್ತದೆ. ಒಂದು ವೇಳೆ ಸಿಹಿತಿಂಡಿಗಳಲ್ಲಿ ಕಲಬೆರಕೆಯಾಗಿದ್ದರೆ ಬೇರೆ ಬಣ್ಣಕ್ಕೆ ತಿರುಗುತ್ತದೆ. ಹೀಗಾಗಿ ಸ್ವೀಟ್ ಅನ್ನು ಖರೀದಿಸುವವರು ರುಚಿ ಮತ್ತು ವಾಸನೆಯನ್ನು ನೋಡಿ ಬಳಿಕ ಖರೀದಿಸುವುದು ಉತ್ತಮ.