ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ನಟ ದರ್ಶನ್ ಅವರಿಗೆ ಕರ್ನಾಟಕ ಹೈಕೋರ್ಟ್ ಇಂದು 6 ವಾರಗಳ ಮಧ್ಯಂತರ ಜಾಮೀನನ್ನು ನೀಡಿದೆ. ಕೋರ್ಟ್ ಈ ಜಾಮೀನನ್ನು ಕೆಲ ಷರತ್ತು ವಿಧಿಸಿ ಮಂಜೂರು ಮಾಡಿದೆ.
ದರ್ಶನ್ ಅವರು ಅನಾರೋಗ್ಯದ ಕಾರಣ ನೀಡಿ ಜಾಮೀನು ಪಡೆದಿದ್ದಾರೆ. ದರ್ಶನ್‌ಗೆ ವೈದ್ಯಕೀಯ ವರದಿ ಆಧರಿಸಿಯೇ ಮಧ್ಯಂತರ ಜಾಮೀನು ನೀಡಲಾಗಿದೆ. ಹೀಗಾಗಿ, ದರ್ಶನ್ ಅವರು ಮಂಜೂರಾಗಿರುವ 6 ವಾರಗಳ ಜಾಮೀನನ್ನು ಸಂಪೂರ್ಣವಾಗಿ ಚಿಕಿತ್ಸೆಗೆ ಮಾತ್ರ ಬಳಕೆ ಮಾಡಿಕೊಳ್ಳಬೇಕು.
ದರ್ಶನ್ ಅವರಿಗೆ ಜಾಮೀನು ಮಂಜೂರು ಮಾಡಿದ ನಂತರ ಕೆಲ ಷರತ್ತುಗಳನ್ನು ಕೋರ್ಟ್ ಹಾಕಿದೆ. ಅದರಂತೆ ದರ್ಶನ್ ಇಷ್ಟಪಟ್ಟ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯಬಹುದು. ಅಲ್ಲದೆ, ಒಂದು ವಾರಗಳಲ್ಲಿ ಚಿಕಿತ್ಸೆಯ ವಿವರವನ್ನು ಕೋರ್ಟ್ಗೆ ಸಲ್ಲಿಸಬೇಕು. ಪಾಸ್‌ಪೋರ್ಟ್ ಅನ್ನು ಕೋರ್ಟ್ಗೆ ಸರೆಂಡರ್ ಮಾಡಬೇಕು. ಜೊತೆಗೆ ಶೂಂಟಿಂಗ್ ಮಾಡುವಂತಿಲ್ಲ ಎಂದು ದರ್ಶನ್‌ಗೆ ಸೂಚನೆ ನೀಡಿದೆ.