ಬೆಳೆ ವಿಮೆ ಕಟ್ಟಿರುವಂತಹ ರೈತರಿಗೆ ತಕ್ಷಣಕ್ಕೆ ಸ್ಥಳ ಸಮೀಕ್ಷೆ ಮಾಡಿ: ರೈತಸಂಘ ಆಗ್ರಹ.!

WhatsApp
Telegram
Facebook
Twitter
LinkedIn

 

ಚಿತ್ರದುರ್ಗ: ಬೆಳೆ ವಿಮೆ ಕಟ್ಟಿರುವಂತಹ ರೈತರಿಗೆ ತಕ್ಷಣಕ್ಕೆ ಸ್ಥಳ ಸಮೀಕ್ಷೆ ಮಾಡಿ ವರದಿಯನ್ನು ತಯಾರಿಸಿ ಕಾಲಮಿತಿ ಒಳಗೆ ಬೆಳೆ ವಿಮೆಯನ್ನು ಕಡ್ಡಾಯವಾಗಿ ತಲುಪುವಂತೆ ಮಾಡಬೇಕು.ಮೊದಲನೇ ಬೆಳೆಯಿಂದ ಒಂದು ಪೈಸನೂ ಸಹ ಬಂಡವಾಳ ಬಂದಿಲ್ಲ.ಎರಡನೇ ಬೆಳೆಗೆ ಬಂಡವಾಳ ಹೂಡಿಕೆ ಮಾಡಲು ಆದಾಯವಿಲ್ಲ ತಕ್ಷಣ ಸಮೀಕ್ಷೆ ಮಾಡಿ ಎಂದು (ನಂಜುಂಡಸ್ವಾಮಿಬಣ) ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಈಚಘಟ್ಟ ಸಿದ್ದವೀರಪ್ಪ ಆಗ್ರಹಿಸಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಅತ್ಯಂತ ತೀವ್ರವಾದ ಬರಗಾಲವನ್ನು ಎದುರಿಸಿದ್ದೇವೆ… ಈ ವರ್ಷ ಆರಂಭದಲ್ಲಿ ಬೆಳೆಗೆ ಪೂರಕವಾದ ಮಳೆಯಾಯಿತು ನಂತರ ಮಳೆ ಕೈಕೊಟ್ಟಿತು.

ಆದರೆ ಕೊನೆಯಲ್ಲಿ ಅತಿ ಮಳೆ ಹೆಚ್ಚು ಮಳೆ ಸುರಿದಿದೆ. ಅತಿ ಹೆಚ್ಚು ಮಳೆಯಿಂದ ಸಾಕಷ್ಟು ಬೆಳೆ ನಷ್ಟವಾಗಿದೆ. ಚಿಕ್ಕ ಚಿಕ್ಕ ಬೆಳೆಗಳು ಸಹ ನಾಶವಾಗಿವೆ.ಮುಂಗಾರಿನಲ್ಲಿ ಬಿತ್ತನೆ ಮಾಡಿದ್ದ ಮೆಕ್ಕೆಜೋಳ, ರಾಗಿ, ಶೇಂಗಾ, ಈರುಳ್ಳಿ ಬೆಳೆಗಳು ಮಳೆಯಿಂದ ಸಂಪೂರ್ಣ ನಷ್ಟವಾಗಿವೆ. ೨ನೇ ಅವಧಿಯಲ್ಲಿ ಬೆಳೆಗಳನ್ನು ಬೆಳೆಯಲು ಪೂರಕವಾದ ವಾತಾವರಣವಿಲ್ಲ ಇಲ್ಲ ಎಂದು ತಿಳಿಸಿದರು.

ರೈತರಿಗೆ ಒಂದು ಎಕರೆಗೆ ಬೆತ್ತನೆ ಕಾರ್ಯಕ್ಕೆ ೧೦ ಸಾವಿರ ಬೇಕಾಗುತ್ತದೆ.. ಆದ್ದರಿಂದ ಸರ್ಕಾರ ಕನಿಷ್ಠ ವೆಚ್ಚದ ಹಣವನ್ನು ನೀಡಬೇಕು,ಎಲ್ಲಿ ಹೆಚ್ಚು ಮಳೆಯಾಗಿರುವ ಪ್ರದೇಶದಲ್ಲಿ ಕೆರೆ ಅಚ್ಚುಕಟ್ಟು ಪ್ರದೇಶಗಳನ್ನು ಸುಸ್ಥಿತಿಯಲ್ಲಿಡಲು ಕ್ರಮ ಕೈಗೊಳ್ಳಬೇಕು.ಜಿಲ್ಲೆಯಲ್ಲಿ ಈರುಳ್ಳಿ ಬೆಳೆ ಸಂಪೂರ್ಣ ನಾಶವಾಗಿದೆ ಈರುಳ್ಳಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ.. ಅದೇ ರೀತಿ ಶೇಂಗಾ ಬೆಳೆಗಾರರು, ಮೆಕ್ಕೆಜೋಳ ಬೆಳೆಗಾರರು, ಸಿರಿಧಾನ್ಯ ಬೆಳೆಗಾರರು ಅತಿ ಮಳೆಯಿಂದ ನಷ್ಟವನ್ನು ಅನುಭವಿಸಿದ್ದಾರೆ. ಎಲ್ಲೆಲ್ಲಿ ಬೆಳೆ ನಷ್ಟವಾಗಿದೆ ಎಂಬುದನ್ನು ಜಿಲ್ಲಾಡಳಿತ, ತಾಲ್ಲೂಕು ಆಡಳಿತ, ಕೃಷಿ ಇಲಾಖೆ ಸಮೀಕ್ಷೆ ನಡೆಸಿ ವರದಿ ನೀಡಿ ಬೆಳೆ ವಿಮೆ ನೀಡಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಯಿತು.

ಇತ್ತೀಚಿಗೆ ಸುರಿದ ಭಾರಿ ಮಳೆಯಿಂದ ತೋಟಗಾರಿಕೆ ಬೆಳೆಗಳಾದ ಈರುಳ್ಳಿ ಟಮೋಟೊ ದಾಳಿಂಬ್ರೆ ಪಪ್ಪಾಯಿ ಮತ್ತು ಖುಷ್ಕಿ ಬೆಳೆಗಳಾದ ಶೇಂಗಾ ರಾಗಿ ಮೆಕ್ಕೆಜೋಳ  ಇನ್ನೂ ಮುಂತಾದ ಬೆಳೆಗಳು ಅತಿವೃಷ್ಟಿಯಿಂದ ಹಾನಿಯಾಗಿದ್ದು ಇದರಿಂದ ರೈತರಿಗೆ ಆರ್ಥಿಕವಾಗಿ ಬಹಳ ತೊಂದರೆ ಆಗಿದ್ದು ತಕ್ಷಣ ರಾಜ್ಯ ಸರ್ಕಾರ ಬೆಳೆ ಪರಿಹಾರ ಬಿಡುಗಡೆ ಮಾಡಬೇಕೆಂದು ಮತ್ತು ವಿಮೆಗೆ ಒಳಪಟ್ಟ ಬೆಳೆಗಳಿಗೆ ತಕ್ಷಣ ಬೆಳೆ ವಿಮೆ ರೈತರ ಖಾತೆಗೆ ಜಮಾ ಮಾಡಬೇಕು ಇಲ್ಲವಾದರೆ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕೆಂದು ಎಂದು ಒತ್ತಾಯಿಸಿ ಇದರ ಬಗ್ಗೆ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಗಮನಕ್ಕೆ ತರಬೇಕಿದೆ ಇಲ್ಲವಾದಲ್ಲಿ ಜಿಲ್ಲಾಡಳಿತದ ಮತ್ತು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ತೀರ್ಮಾನ ಮಾಡಬೆಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು.

ಚಿತ್ರದುರ್ಗ ಜಿಲ್ಲಾಧ್ಯಕ್ಷ ಡಿ.ಎಸ್ ಹಳ್ಳಿ ಮಲ್ಲಿಕಾರ್ಜುನ್, ಪ್ರಧಾನ ಕಾರ್ಯದರ್ಶಿನಿಜಲಿಂಗಪ್ಪ ಹಿರಿಯೂರು ತಾ.ಅಧ್ಯಕ್ಷ ತಿಪ್ಪೇಸ್ವಾಮಿ ಕಾರ್ಯದರ್ಶಿ ಸಿದ್ದರಾಮಣ್ಣ ಹೊಳಲ್ಕೆರೆ ರಂಗಸ್ವಾಮಿ, ಚಿತ್ರದುರ್ಗ ತಾ. ಅಧ್ಯಕ್ಷಮಂಜುನಾಥ್,

 

 

 

BC Suddi   About Us
For Feedback - [email protected]

Related News

LATEST Post

WhatsApp Icon Telegram Icon