ಬಳ್ಳಾರಿ: ಬಳ್ಳಾರಿ ಜೈಲಿನಲ್ಲಿ ಇರುವ ನಟ ದರ್ಶನ್ ಇಂದೇ ಜೈಲಿನಿಂದ ಬಿಡುಗಡೆಯಾಗೋ ಸಾಧ್ಯತೆ ಇದೆ. ಆದೇಶ ಪ್ರತಿಗಾಗಿ ಜೈಲಾಧಿಕಾರಿಗಳು ಕಾಯುತ್ತಿದ್ದಾರೆ. ಆದೇಶ ಪ್ರತಿ ಬಂದ ಬಳಿಕ ದರ್ಶನ್ ಬಿಡುಗಡೆಗೆ ತಯಾರಿ ಮಾಡಲಿದ್ದಾರೆ. ದರ್ಶನ್ ಪರ ವಕೀಲರು ಜೈಲಾಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದಾರೆ. ಸಂಜೆ 6-30 ರ ಒಳಗಾಗಿ ಆದೇಶದ ಪ್ರತಿ ಮೇಲ್ ಮೂಲಕ ಬರೋದಾಗಿ ವಕೀಲರು ಹೇಳಿದ್ದಾರೆ. ಆದೇಶ ಪ್ರತಿ ಕೈ ಸೇರಿದ ಬಳಿಕ ರಿಜಿಸ್ಟರ್ ಪುಸ್ತಕದಲ್ಲಿ ದರ್ಶನ್ ಸಹಿ ಪಡೆದು ರಿಲೀಸ್ ಮಾಡಲಿದ್ದಾರೆ. ಸಂಜೆ 6 ಗಂಟೆ ನಂತರ ಬಳ್ಳಾರಿ ಜೈಲಿಂದ ದರ್ಶನ್ ಹೊರಬರುವ ನಿರೀಕ್ಷೆ ಇದೆ.