ನವದೆಹಲಿ : ಅನುಕರಣೀಯ ಸೇವೆ ಗುರುತಿಸಿ, ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಮತ್ತು ಕೇಂದ್ರ ಪೊಲೀಸ್ ಸಂಸ್ಥೆಗಳ 463 ಸಿಬ್ಬಂದಿಗೆ ಕೇಂದ್ರೀಯ ಗೃಹಮಂತ್ರಿ ದಕ್ಷತಾ ಪದಕ’ ಪ್ರಶಸ್ತಿ ಘೋಷಿಸಲಾಗಿದೆ.
ವಿವಿಧ ಭದ್ರತಾ ಪಡೆಗಳಲ್ಲಿರುವ ಪೊಲೀಸ್ ಅಧಿಕಾರಿಗಳ ಅತ್ಯುತ್ತಮ ಸೇವೆ, ಕೊಡುಗೆಗಳನ್ನು ಗುರುತಿಸಲು, ವೃತ್ತಿಪರ ಗುಣಮಟ್ಟವನ್ನು ಉತ್ತೇಜಿಸುವ ಉದ್ದೇಶದಿಂದ ನೀಡುವ ಪ್ರತಿಷ್ಠಿತ ಪದಕ ಇದಾಗಿದೆ. ದೇಶದ ವಿವಿಧ ಭದ್ರತಾ ಪಡೆಗಳಲ್ಲಿರುವ ಪೊಲೀಸ್ ಅಧಿಕಾರಿಗಳಿಗೆ ಪ್ರಶಸ್ತಿ ನೀಡಲಾಗಿದೆ. ಈ ಪೈಕಿ ಕರ್ನಾಟಕದ 6 ಪೊಲೀಸ್ ಅಧಿಕಾರಿಗಳು ಹಾಗೂ ಓರ್ವ ಎಫ್‌ಎಸ್‌ಎಲ್ ಅಧಿಕಾರಿಗೂ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ಕರ್ನಾಟಕದ ಅಧಿಕಾರಿಗಳಾದ ಡಿವೈಎಸ್ಪಿ, ಐಎಸ್ಡಿ ಬಸವರಾಜ್, ಬೆಂಗಳೂರು ನಗರ ಎಸಿಪಿ ರಮೇಶ್ ವಿ.ಎಲ್, ರಾಯಚೂರು ಜಿಲ್ಲೆ ಇನ್ಸ್ಪೆಕ್ಟರ್ ಉಮೇಶ್ ಕಾಂಬ್ಲೇ, ಸಿಐಡಿ ಇನ್ಸ್ಪೆಕ್ಟರ್ ನರೇಂದ್ರ ಬಾಬು, ಹಾಸಜನ ಜಿಲ್ಲೆ ಇನ್ಸ್ಪೆಕ್ಟರ್ ವಸಂತ ಕೆ.ಎಂ, ಉತ್ತರಕನ್ನಡ ಜಿಲ್ಲೆಯ ಇನ್ಸ್ಪೆಕ್ಟರ್ ರಮೇಶ್ ಹೆಚ್ ಹನಾಪುರ್, ಬೆಳಗಾವಿ ಜಿಲ್ಲೆಯ ಡಾ.ಪ್ರವೀಣ್ ಸಂಗ್ನಲ್ ಮಠ್ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ನೀಡಲಾಗುತ್ತಿದೆ.