ಸೈಬರ್ ಭದ್ರತೆಗೆ ಧಕ್ಕೆ ಒದಗಿಸುವ ದೇಶಗಳ ಪಟ್ಟಿಗೆ ಭಾರತವನ್ನ ಸೇರಿಸಿದ ಕೆನಡಾ..!

WhatsApp
Telegram
Facebook
Twitter
LinkedIn

ಟೊರಾಂಟೋ: ಭಾರತ ಮತ್ತು ಕೆನಡಾ ನಡುವಿನ ಭಿನ್ನಾಭಿಪ್ರಾಯ ಮತ್ತೊಂದು ಹಂತಕ್ಕೆ ತಲುಪಿದೆ. ಇದೀಗ ಕೆನಡಾದ ಸೈಬರ್ ಭದ್ರತೆಗೆ ಧಕ್ಕೆ ಒದಗಿಸುವ ದೇಶಗಳ ಪಟ್ಟಿಗೆ ಭಾರತವನ್ನು ಸೇರಿಸಿದೆ.

ಸೈಬರ್ ಭದ್ರತೆಗೆ ಧಕ್ಕೆ ಒದಗಿಸುವ ದೇಶಗಳ ಪಟ್ಟಿಗೆ ಉತ್ತರಕೊರಿಯಾ, ಇರಾನ್, ಚೀನಾ, ರಷ್ಯಾ ದೇಶಗಳ ಜೊತೆಗೆ ಕೆನಡಾವು ಭಾರತವನ್ನು ಸೇರಿಸಿದೆ. ಕೆನಡಾದ ಸೈಬರ್ ಸೆಕ್ಯೂರಿಟಿ ಸೆಂಟರ್‌ನ ವಾರ್ಷಿಕ ವರದಿಯೊಂದರಲ್ಲಿ ಈ ಪಟ್ಟಿ ನೀಡಲಾಗಿದ್ದು ಇದರಲ್ಲಿ ಭಾರತದ ಹೆಸರು ಮೊದಲ ಬಾರಿಗೆ ನಮೂದಿಸಿರುವುದು ತಿಳಿದುಬಂದಿದೆ. ಈ ವರದಿಯು 2025-26ರ ವರ್ಷದಲ್ಲಿ ಯಾವ್ಯಾವ ದೇಶಗಳು ಕೆನಡಾ ಭದ್ರತೆಗೆ ಅಪಾಯ ತರಬಹುದು ಎಂಬುದನ್ನು ತಿಳಿಸಿದೆ.

ಬೇಹುಗಾರಿಕೆ ಉದ್ದೇಶದಲ್ಲಿ ಭಾರತದ ಸರ್ಕಾರಿ ಪ್ರಾಯೋಜಿತವಾಗಿ ಕೆನಡಾ ಸರ್ಕಾರದ ಜಾಲಗಳ ವಿರುದ್ಧ ಸೈಬರ್ ಅಪಾಯ ಎದುರಾಗಬಹುದು ಎಂಬುದು ತಮ್ಮ ಅಂದಾಜು. ಕೆನಡಾ ಮತ್ತು ಭಾರತದ ನಡುವೆ ಇರುವ ಅಧಿಕೃತ ದ್ವಿಪಕ್ಷೀಯ ಸಂಬಂಧವು ಈ ಸೈಬರ್ ಅಪಾಯಕಾರಿ ಚಟುವಟಿಕೆಯನ್ನು ಹೆಚ್ಚಿಸಬಹುದು ಎಂದೂ ಈ ವರದಿ ಎಚ್ಚರಿಕೆ ನೀಡಿದೆ.

ಜಾಗತಿಕ ವ್ಯವಸ್ಥೆಯೊಳಗೆ ಹೊಸ ಪವರ್ ಸೆಂಟರ್‌ಗಳಾಗಲು ಬಯಸುವ ಭಾರತದಂತಹ ದೇಶಗಳು ಕೆನಡಾಗೆ ವಿವಿಧ ಸ್ತರಗಳಲ್ಲಿ ಅಪಾಯ ತರಬಲ್ಲ ಸೈಬರ್ ಯೋಜನೆಗಳನ್ನು ನಿರ್ಮಿಸುತ್ತಿವೆ ಎಂದು ವರದಿ ಹೇಳಿದೆ.

BC Suddi   About Us
For Feedback - [email protected]

Related News

LATEST Post

WhatsApp Icon Telegram Icon