ನಮಸ್ಕಾರ ಬಂಧುಗಳೇ….. ಬಾರಿಯ ದೀಪಾವಳಿ ಮಾದಿಗ ರ ಮನೆಗಳಲ್ಲಿ ಬೆಳಕು ಹರ್ಷ ತುಂಬಿದ ಹಬ್ಬವಾಗಬಹುದು ಎಂದು ಆಶಿಸಿದ್ದೇವು.
ಕಾರಣ ಆಗಷ್ಟ 1 ನೇ ತಾರೀಖು ಸುಪ್ರೀಂ ಕೋರ್ಟ್ ತೀರ್ಪಿನಂತೆ ಒಳ ಮೀಸಲಾತಿ ಜಾರಿಗೊಳ್ಳುತ್ತದೆ ಕರ್ನಾಟಕ ರಾಜ್ಯ ಸರ್ಕಾರ ರಾಷ್ಟ್ರದಲ್ಲಿಯೆ ಮುಂಚೂಣಿಯಲ್ಲಿ ಇರುವುದು ಎಂದು ಶೋಷಿತ ಸಮುದಾಯಗಳು ಎಣಿಸಿದ್ದವು.
ಆದರೆ ಆಗಿದ್ದೇ ಬೇರೆ ಸತತ 45 ದಿನಗಳ ಹೋರಾಟ ನಗರ ಹಳ್ಳಿಗಳಿಂದ ಪಾದಯಾತ್ರೆ ಧರಣಿ, ಘೇರಾವ್, ಮನವಿ ನೀಡುವುದು ಹೀಗೆ ಸಂಘಟನೆಯ ಕಾರ್ಯಕರ್ತರು ಮುಖಂಡರು ಮಾದಿಗ ಸಮುದಾಯ ದ ಸಾಮಾನ್ಯರು ರಾಜ್ಯಾದ್ಯಂತ ಹೋರಾಟ ಕ್ಕೆ ಇಳಿದ ಪರಿಣಾಮ ಸರ್ಕಾರ ದ ಕಣ್ಣು ಕಿವಿ ತೆರದವು.
ಎಚ್ಚೆತ್ತ ಸರಕಾರ ಕೊನೆಗೂ ಮೌನ ಮುರಿದು ಒಳ ಮೀಸಲಾತಿ ಜಾರಿಗೊಳಿಸಲು ಬದ್ದ ಎಂದು ಸಚಿವ ಸಂಪುಟ ದ ನಿರ್ಣಯ ಅಂಗೀಕರಿಸಿತು ಮೂರು ತಿಂಗಳ ಅವಧಿಯಲ್ಲಿ ನಿವೃತ್ತ ಹೈಕೋರ್ಟ್ ನ್ಯಾಯಾಧೀಶ ರ ಏಕ ಸದಸ್ಯ ಆಯೋಗ ರಚನೆ ಮಾಡಿ ವರದಿ ಸಿದ್ಧಪಡಿಸಿ ವೈಜ್ಞಾನಿಕವಾಗಿ ಜಾರಿಗೊಳಿಸುತ್ತೇವೆ ಎಂದು ಸ್ವತಃಹ ಮುಖ್ಯ ಮಂತ್ರಿಗಳೆ ಪ್ರಕಟಣೆ ಯ ಮೂಲಕ ತಿಳಿಸಿದ್ದಾರೆ.
ಈ ಮಧ್ಯೆದಲ್ಲಿ ಕಾಂಗ್ರೆಸ್ಸಿನ ಪ್ರಮುಖ ನಾಯಕರು ಬೆಂಗಳೂರಿನ ಪತ್ರಿಕಾ ಗೋಷ್ಠಿ ಯಲ್ಲಿ ಹೋರಾಟಗಾರರಿಗೆ ಬೆದರಿಕೆ ರೂಪದಲ್ಲಿ ಎಚ್ಚರಿಕೆ ನೀಡಿದ್ದಾರೆ ಇದು ಮಾದಿಗ ಸಮುದಾಯ ದ ಹೋರಾಟಗಾರರಿಗೆ ಸಾಮಾನ್ಯರಿಗೆ ಮಾಡಿದ ಅವಮಾನ.
ಒಳ ಮೀಸಲಾತಿ ಜಾರಿಗೊಳ್ಳುವುದಕ್ಕು ಮುನ್ನ ಅಭಿನಂದನೆಗಳು ಸಂಭ್ರಮಾಚರಣೆ ಮಾಡುವುದು ಎಷ್ಟು ಸರಿ . ಬೀದಿ ಹೋರಾಟ ಮಾಡಿದ್ದರಿಂದಲೇ ಆಯೋಗ ರಚನೆ ಮಾಡಲು ಸಾಧ್ಯವಾಯಿತು. ಸಮುದಾಯದ ಸಾಮಾನ್ಯರು ಎಚ್ಚೆತ್ತಿದ್ದಾರೆ ಯಾವುದೇ ಪಕ್ಷದ ಗುಲಾಮರಲ್ಲ ನೀವುಗಳು ಪಕ್ಷದ ನಾಯಕರು ಸಮುದಾಯದ ನಾಯಕರಲ್ಲ ಎಂಬುದು ನೆನಪಿರಲಿ.
ಮಾದಿಗ ಬಂಧುಗಳೇ ಸಹನೆಗೂ ಒಂದು ಮೀತಿ ಇದೆ ಹೋರಾಟಗಾರರಿಗೆ ಸಮುದಾಯದ ಸಾಮಾನ್ಯರಿಗೆ ಗೌರವ ಕೃತಜ್ಞತೆ ಸಲ್ಲಿಸದ ಯಾರೆ ಆಗಿರಲಿ ಅಂತವರನ್ನು ಖಂಡಿಸಿ……ಜೈ ಭೀಮ್.
ಎಂ.ಆರ್.ಶಿವರಾಜ್
ಒಳ ಮೀಸಲಾತಿ ಹೋರಾಟಗಾರ
ಚಿತ್ರದುರ್ಗ.