ಸ್ವತಂತ್ರ ಲಿಂಗಾಯತ ಧರ್ಮದ ವಿಚಾರಗಳನ್ನು ಇಟ್ಟುಕೊಂಡು ರಾಜಕಾರಣಿಗಳನ್ನು ಬಿಟ್ಟು, ಶರಣರ ತತ್ವಗಳನ್ನು ನಡೆ-ನುಡಿಯಲ್ಲಿ ಪಾಲಿಸುವ ಸ್ವಾಮೀಜಿಯವರನ್ನು ಒಳಗೊಂಡಂತೆ, ಸ್ವತಂತ್ರ ಲಿಂಗಾಯತ ಧರ್ಮ ಕಟ್ಟುವಲ್ಲಿ ತಮ್ಮಗಳ ಅಭಿಪ್ರಾಯಗಳನ್ನು ಸೇರಿಸಿ ಒಂದು ವೇದಿಕೆ. ಹಾಗೂ ಚರ್ಚೆ ಪ್ರಾರಂಭಿಸ ಬಹುದೆಂಬ ಸದಾಶಯ.
https://chat.whatsapp.com/LQ14M5ZLA9qI1OgBARElbD ಈ ಲಿಂಕ್ ನಲ್ಲಿ ನಿಮ್ಮಗಳ ಚರ್ಚೆ ಅಭಿಪ್ರಾಯ ಹಂಚಿಕೊಳ್ಳಿ.
ವಚನ:
ಕುರುಡನ ಮುಂಡಕ್ಕೆ ಹೆಳವನ ಶಿರಸ್ಸು ಸ್ಥಾಪ್ಯವ ಮಾಡಿದರಯ್ಯಾ.
ಅದಕ್ಕೆ ಮೋಟನು ಪರಿಚಾರಕ ನೋಡಾ.
ಮೂಗ ಹೇಳುವ ಮಾತನು ಬಧಿರ ಕೇಳಿ,
ಅತ್ತೆಯನಳಿಯ ಮದುವೆಯಾಗಿ,
ಅವರಿಬ್ಬರ ಸಂಗದಿಂದ ಹುಟ್ಟಿತೊಂದು ಮಗು.
ಮೊರೆಗೆಟ್ಟು ತಂದೆ ಮಗಳ ಮದುವೆಯಾಗಿ,
ತ್ರಿಪುರದ ಮಧ್ಯದೊಳಗೆ ಕ್ರೀಗಳ ದೇಗುಲ ನಿಂದಿತ್ತು.
ದೇವರ ನೋಡಹೋದಡೆ ದೇವರು ದೇಗುಲದ ನುಂಗಿದರು.ಇದ ಕಂಡು ಆನು ಬೆರಗಾದೆನು, ನಿಜಗುರು ಭೋಗೇಶ್ವರನಲ್ಲಿ.
-ಭೋಗಣ್ಣ