ಬೆಂಗಳೂರು; ಮಹಿಳೆಯೊಬ್ಬಳು ತನ್ನ ಸ್ನೇಹಿತನ ಮೇಲೆ ನಂಬಿಕೆಯಿಟ್ಟು ಮೊಬೈಲ್ ಕೊಟ್ಟಿದ್ದಕ್ಕೆ, ಆಕೆಯ ಮೊಬೈಲ್‌ನಿಂದಲೇ ಬೆತ್ತಲೆ ವೀಡಿಯೋ ರೆಕಾರ್ಡ್ ಮಾಡಿ, ಬ್ಲ್ಯಾಕ್ ಮೇಲ್ ಮಾಡಿರುವ ಘಟನೆ ಬೆಂಗಳೂರಿನ ಆರ್.ಆರ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆರೋಪಿ ಸಂಜಯ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿ ಸಂಜಯ್ ಆಕೆಗೆ ಗೊತ್ತಾಗದಂತೆ ಮೊಬೈಲ್ ನಲ್ಲಿ ಆ್ಯಪ್‌ವೊಂದನ್ನ ಡೌನ್‌ಲೋಡ್ ಮಾಡಿಟ್ಟಿದ್ದ. ಅದನ್ನ ತನ್ನ ಮೊಬೈಲ್ ನಿಂದ ಆಪರೇಟ್ ಮಾಡುತ್ತಿದ್ದ ಎನ್ನುವುದು ಬೆಳಕಿಗೆ ಬಂದಿದೆ.