ಬಿಳಿ ಎಕ್ಕ ಗಿಡದ ಪ್ರಯೋಜನ..!

ಸಾಮಾನ್ಯವಾಗಿ ಬಿಳಿ ಎಕ್ಕ ಗಿಡ ಪ್ರತಿಯೊಬ್ಬರಿಗೂ ಪರಿಚಯವಿರುತ್ತದೆ. ಮನೆಯ ವಾಸ್ತು ದೋಷವನ್ನು ನಿವಾರಿಸುವ ಜೊತೆಗೆ ಹಲವು ದೈಹಿಕ, ಆರೋಗ್ಯ ಸಮಸ್ಯೆಗೂ ಪರಿಹಾರವನ್ನು ಒದಗಿಸುತ್ತದೆ ಈ ಬಿಳಿ ಎಕ್ಕ.

ಪೂರ್ವಜರು ಹೇಳುವ ಹಾಗೆ ಬಿಳಿ ಎಕ್ಕದ ಗಿಡವೊಂದು ಮನೆಯಲ್ಲಿ ಇದ್ದರೆ ಸಕಲ ಐಶ್ವರ್ಯ, ಆರೋಗ್ಯ ಮತ್ತು ಅಂತಸ್ತು ವೃದ್ಧಿಯಾಗುತ್ತದೆ, ಹಣಕಾಸಿನ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ. ಮನೆಯಲ್ಲಿ ಶಾಂತಿ, ನೆಮ್ಮದಿ, ಹಣಕಾಸಿನ ವ್ಯವಹಾರಗಳು ಇಂಥ ಎಲ್ಲಾ ತೊಂದರೆಗಳಿಗೆ ಬಿಳಿ ಎಕ್ಕದ ಗಿಡ ರಾಮಬಾಣ ಎಂದೇ ಹೇಳಬಹುದು.

ಆನೇಕ ಜನರು ತಮ್ಮ ವ್ಯವಹಾರ, ವಹಿವಾಟುಗಳಲ್ಲಿ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿರುತ್ತಾರೆ. ಜೊತೆಗೆ ಹಣಕಾಸಿನ ವಿಚಾರಗಳಲ್ಲಿ ಹಿನ್ನಡೆಯನ್ನು ಅನುಭವಿಸುತ್ತ ಸಾಲಭಾದೆಯಲ್ಲಿ ಸಿಲುಕಿ ಕಷ್ಟದ ಪರಿಸ್ಥಿತಿಯಲ್ಲಿ ಇರುತ್ತಾರೆ. ಅಂಥವರಿಗೆ ಈ ಬಿಳಿ ಎಕ್ಕದ ಗಿಡ ಅದೃಷ್ಟ ತರಲಿದೆ. ಬಿಳಿ ಎಕ್ಕದ ಗಿಡ ನಮಗೆ ಸುಲಭವಾಗಿ ಸಿಗುತ್ತದೆ. ಎಲ್ಲಾ ಪ್ರದೇಶಗಳಲ್ಲಿಯೂ ಲಭಿಸುವಂತ ಗಿಡ. ಬಿಳಿ ಎಕ್ಕದ ಗಿಡ 5 ರಿಂದ 6 ಅಡಿ ಎತ್ತರಕ್ಕೆ ಬೆಳೆಯುತ್ತದೆ ಹಾಗೂ ಬಿಳಿ, ನೀಲಿ ಮಿಶ್ರಿತವಾದ ಬಣ್ಣದಲ್ಲಿ ಹೂವನ್ನು ಅರಳಿಸುತ್ತದೆ.

Advertisement

ಬಿಳಿ ಎಕ್ಕದ ಗಿಡ – ಧಾರ್ಮಿಕ ಪ್ರಯೋಜನಗಳು

ಬಿಳಿ ಎಕ್ಕವನ್ನು ಭಕ್ತಿಯಿಂದ ಶಿವ ಲಿಂಗಕ್ಕೆ ಅರ್ಪಿಸಿದರೆ ಶಿವನು ಸಂತುಷ್ಟನಾಗಿ ನಿಮಗೆ ಸಮೃದ್ಧಿಯ ಆಶೀರ್ವಾದವನ್ನು ನೀಡುತ್ತಾನೆ.ಬಿಳಿ ಎಕ್ಕದ ಗಿಡದ ಮುಂದೆ ಸೂರ್ಯ ದೇವರಿಗೆ ನಮಸ್ಕರಿಸಿ ಅದರ ಎಲೆಯಿಂದ ರವಿ ಗ್ರಹಕ್ಕೆ ಭಕ್ತಿಯಿಂದ ಪೂಜೆ ಸಲ್ಲಿಸಿದರೆ ಸೂರ್ಯ ದೋಷಗಳು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ.ಪೂಜೆಯಲ್ಲಿ ಗಣಪತಿ, ಈಶ್ವರ ಆಂಜನೇಯ ದೇವರಿಗೆ ಬಿಳಿ ಎಕ್ಕದ ಹೂವನ್ನು ಇಟ್ಟು ಪೂಜೆ ಸಲ್ಲಿಸಿದರೆ ಹಲವು ದೋಷಗಳಿಂದ ಮುಕ್ತರಾಗುತ್ತೀರಿ.ಶನಿ ದೋಷವಿದ್ದರೆ ಪ್ರತಿ ಮಂಗಳವಾರ ಮತ್ತು ಶನಿವಾರ ಬಿಳಿ ಎಕ್ಕದ ಹೂವಿನಿಂದ ಹಾರವನ್ನು ತಯಾರಿಸಿ ಅದನ್ನು ಆಂಜನೇಯ ಅಥವಾ ಶನಿದೇವರಿಗೆ ಅರ್ಪಿಸಿ, ಇದು ಬಹಳ ಒಳ್ಳೆಯದು.ಬಿಳಿ ಎಕ್ಕದ ಗಿಡ ವಿನಾಯಕ ದೇವರಿಗೆ ಬಹಳ ಪ್ರಿಯವಾದದ್ದು. ಗಣಪತಿಗೆ‌ ಬಿಳಿಯ ಎಕ್ಕದ ಹೂವನ್ನು ಮಾಲೆ ಮಾಡಿ ಅದರ ಅರ್ಪಿಸಿದರೆ, ನಮ್ಮ ಕಾರ್ಯಗಳಲ್ಲಿ ಬರುವ ವಿಘ್ನಗಳನ್ನು ನಿವಾರಣೆ ಪಡೆಯಬಹುದು.ಎಕ್ಕದ ಗಿಡವನ್ನು ನಿಮ್ಮ ಮನೆಯಲ್ಲಿ ಬೆಳೆಸಿದರೆ ಯಾವುದೇ ರೀತಿಯ ಮಾಟ, ಮಂತ್ರ, ತಂತ್ರಗಳು ಸುಳಿಯುವುದಿಲ್ಲ. ಅದರಲ್ಲೂ ಮನೆಯ ಬಲ ಭಾಗದಲ್ಲಿ ಬೆಳೆಸಿದರೆ ವಾಸ್ತು ದೋಷ ನಿವಾರಣೆಯಾಗುತ್ತದೆ.ಬಿಳಿ ಎಕ್ಕದ ಗಿಡವನ್ನು ನಿಮ್ಮ ಮನೆಯಲ್ಲಿ ಇಟ್ಟು ಪೂಜೆ ಮಾಡುವುದರಿಂದ ಹಲವು ದೋಷಗಳು ನಿವಾರಣೆಯಾಗಿ ಮನೆಯಲ್ಲಿ ಹಣಕಾಸಿನ ಸಮಸ್ಯೆಗಳು ಸರಿಯಾಗುತ್ತದೆ.ಎಕ್ಕದ ಹೂವನ್ನು ಮನೆಯ ಬಾಗಿಲಿಗೆ ಅಥವಾ ದೇವರ ಮನೆ ಬಾಗಿಲಿಗೆ ತೋರಣ ಕಟ್ಟಿದರೆ ವಾಸ್ತು ದೋಷ ನಿವಾರಣೆಯಾಗುತ್ತದೆ.ಆರ್ಥಿಕ ಸಮಸ್ಯೆಗಳು, ಸಾಲ ಬಾಧೆಗಳು, ಕೈಯಲ್ಲಿ ಹಣ ನಿಲ್ಲದೆ ಇರುವುದು – ಇಂತಹ ಸಮಸ್ಯೆಗಳನ್ನು ಅನುಭವಿಸುತ್ತಿರುವವರು, ಪ್ರತಿದಿನ ಎಕ್ಕದ ಗಿಡದ ಬುಡದಲ್ಲಿ ತಾಮ್ರದ ತಂಬಿಗೆಯಲ್ಲಿ ನೀರನ್ನು ಹಾಕಿ, 108 ಪ್ರದಕ್ಷಿಣೆ ಮಾಡಿ, ನಂತರ ಋಣಹರ್ತಾ ಗಣಪತಿ ಮಂತ್ರ ವನ್ನು ಉಪದೇಶ ಪಡೆದು ಶಕ್ತ್ಯಾನುಸಾರ ಎಷ್ಟು ಮಾಲೆ ಸಾಧ್ಯವೋ ಅಷ್ಟು ಜಪಿಸಿ.

ಬಿಳಿ ಎಕ್ಕದ ಗಿಡ -ಆರೋಗ್ಯ ಪ್ರಯೋಜನಗಳುಬಿಳಿ ಎಕ್ಕದ ಗಿಡದ ಪ್ರತಿಯೊಂದು ಭಾಗವೂ ಔಷಧ ಗುಣಗಳನ್ನು ಹೊಂದಿದೆ. ಬಿಳಿ ಎಕ್ಕದ ಗಿಡದ ಹಾಲು ವಿಷಪೂರಿತವಾದದ್ದು, ಅದನ್ನು ಹೊರತು ಪಡಿಸಿದರೆ ಎಕ್ಕದ ಗಿಡ ಸರಿ ಸುಮಾರು 64 ಔಷಧೀಯ ಗುಣಗಳನ್ನು ಒಳಗೊಂಡಿರುತ್ತದೆ.ಎಕ್ಕದ ಬೇರನ್ನು ಅರಿಶಿಣದಲ್ಲಿ ತೇಯ್ದು ನೀರಿನಲ್ಲಿ ಸೇವಿಸಿದರೆ ದೇಹದಲ್ಲಿ ಇರುವ ವಿಷದ ಅಂಶ ನಿರ್ಮೂಲನೆಗೊಳ್ಳುವುದು.ಕಾಲುಗಳಲ್ಲಿ ಮುಳ್ಳು ಚುಚ್ಚಿದ್ದರೆ ಮುಳ್ಳು ಒಳಭಾಗದಲ್ಲಿದ್ದು ವಿಪರೀತ ನೋವನ್ನು ಕೊಡುತ್ತಿದ್ದರೆ, ಇದರ ಹಾಲನ್ನು ಆ ಜಾಗಕ್ಕೆ ಹಾಕಿದರೆ ನೆಟ್ಟಿರುವಂತ ಮುಳ್ಳು ಮೇಲಕ್ಕೆ ಬಂದು ನೋವು ಕಡಿಮೆಯಾಗುತ್ತದೆ.ಅತಿಯಾಗಿ ಬೆನ್ನು ನೋವು ಅಥವಾ ಮಂಡಿ ನೋವು ಸಮಸ್ಯೆ ಕಾಡುತ್ತಿದ್ದರೆ, ಎಕ್ಕ ಗಿಡದ ಎಲೆಗಳನ್ನು ಬೆಂಕಿ ಕೆಂಡ ಸೋಕಿಸಿ ನೋವು ಇರುವ ಜಾಗಕ್ಕೆ ಶಾಖ ಕೊಟ್ಟರೆ ಕೆಲವೇ ದಿನಗಳಲ್ಲಿ ನೋವು ಇಲ್ಲದಂತಾಗುವುದು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement