ಚಿಕ್ಕಮ್ಮನ ರೀಲ್ಸ್​ ಹುಚ್ಚಿಗೆ ನಾಲ್ಕು ವರ್ಷದ ಮಗು ಬಲಿ..!

WhatsApp
Telegram
Facebook
Twitter
LinkedIn

ಉತ್ತರ ಪ್ರದೇಶ: ಇತ್ತೀಚೆಗೆ ಕೆಲವರಿಗೆ ಸಿಕ್ಕಾಪಟ್ಟೆ ರೀಲ್ಸ್ ಹಚ್ಚು, ಇನ್ನು ಕೆಲವರು ರೀಲ್ಸ್‌ನಿಂದಲೇ ಜೀವನ ಕೂಡ ಕಟ್ಟಿಕೊಂಡಿದ್ದಾರೆ, ತಿಂಗಳಿಗೆ ಲಕ್ಷ-ಲಕ್ಷಗಟ್ಟಲೆ ದುಡಿಯುತ್ತಿದ್ದಾರೆ, ಇಂದು ಯೂಟ್ಯೂಬ್‌ ವೀಡಿಯೋ ಹಾಕದವರು, ರೀಲ್ಸ್ ಮಾಡದವರು ಬೆರಳಣಿಕೆಯಷ್ಟೇ ಸಿಗುತ್ತಾರೆ. ಮಕ್ಕಳಿಂದ ಹಿಡಿದು- ಅಜ್ಜ-ಅಜ್ಜಿಯರಿಗೂ ಈ ರೀಲ್ಸ್ ಹುಚ್ಚು.

ಹಾಯ್‌ ಫ್ರೆಂಡ್ಸ್ ಇವತ್ತು ನಾನು ತರಕಾರಿ ತರೋಕೆ ಬಂದಿದ್ದೇನೆ, ಹಾಯ್‌ ಫ್ರೆಂಡ್‌ ಇವತ್ತು ನಮ್ಮ ಮನೆಯಲ್ಲಿ ಪಲಾವ್ ಮಾಡ್ತಾ ಇದ್ದೀನಿ ಹೀಗೆ ಉಂಡದ್ದು, ತೇಗಿದ್ದು ಎಲ್ಲಾ ವೀಡಿಯೋ ಮಾಡುತ್ತಾರೆ, ರೀಲ್ಸ್ ಮಾಡುತ್ತಾರೆ, ಅವರು ಹೇಳುವುದನ್ನು ಕೇಳಿದಾಗ ಎಲ್ಲರ ಜೀವನದ ಸಾಮಾನ್ಯ ವಿಷಯವನ್ನು ಕೂಡ ಬ್ಲಾಗ್ ಮಾಡಿ ಹಾಕುತ್ತಿದ್ದಾರೆ.

ಲೆಕ್ಕವಿಲ್ಲದಷ್ಟು ಸೆಲ್ಫಿ ತೆಗೆಯುವುದು, ರೀಲ್ಸ್ ಮಾಡುವುದು ಇತ್ತೀಚೆಗೆ ಹೆಚ್ಚಾಗಿದೆ. ರೀಲ್ಸ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿರುವ ಅದೆಷ್ಟೋ ಉದಾಹರಣೆಗಳಿದ್ದರೂ ಜನರ ಬಳಿ ಅದಕ್ಕೆ ಕಿಮ್ಮತ್ತಿಲ್ಲ. ಇಂತಹ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ರೀಲ್ ಹುಚ್ಚಿನಿಂದ ನಾಲ್ಕು ವರ್ಷದ ಕಂದಮ್ಮನ ಪ್ರಾಣಪಕ್ಷಿ ಹಾರಿಹೋಗಿದೆ.

ಉತ್ತರ ಪ್ರದೇಶದ ಗಾಜಿಪುರದಲ್ಲಿ ಈ ದುರ್ಘಟನೆ ನಡೆದಿದ್ದು, ನಾಲ್ಕು ವರ್ಷದ ಮುಗ್ದ ಬಾಲಕಿ ಹೆತ್ತ ತಾಯಿಯ ಕಣ್ಣೆದುರೇ ಗಂಗಾ ನದಿಯಲ್ಲಿ ಮುಳುಗಿ ಹಸುನೀಗಿದ್ದಾಳೆ. ತನ್ನ ಕುಟುಂಬದವರ ಜೊತೆ ಗಂಗಾ ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ಮುಳುಗಿ ಸಾವನ್ನಪ್ಪಿದ್ದು, ಮಗುವಿನ ಚಿಕ್ಕಮ್ಮ ಇನ್​ಸ್ಟಾಗ್ರಾಂ ರೀಲ್ಸ್​ನಲ್ಲಿ ಮಾಡುವುದರಲ್ಲಿ ಮೈಮರೆತಿದ್ದು, ಮೃತ್ಯು ಬಾಯಿಗೆ ಸಿಲುಕಿ ಬಾಲಕಿ ಕೊಚ್ಚಿ ಹೋಗಿದ್ದಾಳೆ. ರೀಲ್ಸ್​ನಲ್ಲಿ ಕಂದಮ್ಮ ಕೊಚ್ಚಿ ಮುಳುಗುತ್ತಿರುವ ಮನಕಲುಕುವ ದೃಶ್ಯ ಸೆರೆಯಾಗಿದ್ದು, ಚಿಕ್ಕಮ್ಮ ರೀಲ್ಸ್​ನ ಚಟದಿಂದ ಮಗು ಬಲಿಯಾಗಿದೆ.
ಸಾವನ್ನಪ್ಪಿದ ಬಾಲಕಿಯನ್ನು ಎಂದು ಗುರುತಿಸಲಾಗಿದ್ದು, ದೀಪಾವಳಿ ಹಬ್ಬದ ಆಚರಣೆಗಾಗಿ ತಾನ್ಯಾ ತನ್ನ ತಾಯಿ ಅಂಕಿತಾ ಪಾಂಡೆಯೊಂದಿಗೆ ಸೈದ್​ಪುರಕ್ಕೆ ಭೇಟಿ ನೀಡಿದ್ದಳು. ಈ ವೇಳೆ ಕುಟುಂಬ ಸಮೇತ ಗಂಗಾ ನದಿಯ ಬಳಿ ತೆರಳಿ ಸ್ನಾನ ಮಾಡಲು ಮುಂದಾಗಿದ್ದು, ತಾನ್ಯಾ ತನ್ನ ಅಜ್ಜಿ, ತಾಯಿ, ಚಿಕ್ಕಮ್ಮ ಸ್ಮೃತಿ ಜೊತೆಗೆ ಸ್ನಾನಘಟ್ಟದ ಬಳಿ ತೆರಳಿದ್ದಾಳೆ. ಅಮ್ಮ, ಅಜ್ಜಿ ಜೊತೆಗೆ ಸ್ನಾನ ಮಾಡುವಾಗ ತಾನ್ಯಾ ಕಣ್ಮರೆಯಾಗಿದ್ದಾಳೆ. ಆದರೆ ಚಿಕ್ಕಮ್ಮ ಸ್ಮೃತಿ ಈ ವೇಳೆ ರೀಲ್ಸ್​ ಮಾಡೋದರಲ್ಲಿ ತಲೀನರಾಗಿದ್ದು, ಆಕೆಯ ಸ್ಮಾರ್ಟ್​ಫೋನ್​ನಲ್ಲಿ ತಾನ್ಯಾ ನದಿಯಲ್ಲಿ ತೇಲಿ ಹೋಗುವ ದೃಶ್ಯ ಸೆರೆಯಾಗಿದೆ.

ಇಷ್ಟಾದರೂ ಮಗು ಬಗ್ಗೆ ಯೋಚಿಸದೇ ಮೋಜಿನಲ್ಲಿ ಮುಳುಗಿದ್ದ ಕುಟುಂಬಕ್ಕೆ ಏಕಾಏಕಿ ತಾನ್ಯಾ ನಾಪತ್ತೆಯಾಗಿರುವುದು ಗೋಚರವಾಗಿದ್ದು, ಕಾಣೆಯಾದ ಬಾಲಕಿಗಾಗಿ ಕುಟುಂಬದವರೊಂದಿಗೆ ಅಲ್ಲಿ ನೆರೆದಿದ್ದವರು ಸೇರಿ ಹುಡುಕಲು ಆರಂಭಿಸಿದ್ದಾರೆ. ಕೊನೆಗೆ ಚಿಕ್ಕಮ್ಮನ ಮೊಬೈಲ್​ ಪರಿಶೀಲಿಸಿದಾಗ ತಾನ್ಯಾ ನದಿ ನೀರಿನಲ್ಲಿ ತೇಲಿ ಹೋಗೋದು ಬೆಳಕಿಗೆ ಬಂದಿದ್ದು, ಕುಟುಂಬಕ್ಕೆ ಬರ ಸಿಡಿಲು ಬಡಿದಂತಾಗಿದೆ. ವಿಷಯ ತಿಳಿದ ಕೂಡಲೇ ತಾನ್ಯಾಳನ್ನು ಹುಡುಕಾಡಿದ್ದು, ಸುಮಾರು 50 ಮೀಟರ್​ ಕೆಳಗೆ ತಾನ್ಯಾಳ ಮೃತದೇಹ ಪತ್ತೆಯಾಗಿದೆ.

BC Suddi   About Us
For Feedback - [email protected]

Related News

LATEST Post

WhatsApp Icon Telegram Icon