ಬೆಂಗಳೂರು: ತಂತ್ರಜ್ಞಾನ ಬೆಳೆದಂತೆ ದುರ್ಬಳಕೆ ಮಾಡಿಕೊಳ್ಳುವವರ ಸಂಖ್ಯೆ ಅಧಿಕವಾಗುತ್ತಿದೆ. ಸಿನಿಮಾ ನಟ-ನಟಿಯರ ಡೀಫ್ ಪೇಕ್ ಪೋಟೊ ಅಥವಾ ವಿಡಿಯೊ ಸೃಷ್ಟಿಸಿ ವಂಚಿಸುತ್ತಿದ್ದ ಸೈಬರ್ ಖದೀಮರು ಇದೀಗ ಪ್ರತಿಷ್ಠಿತ ವ್ಯಕ್ತಿಗಳನ್ನ ಹೆಸರಿನಲ್ಲಿ ಆನ್ ಲೈನ್ ಟ್ರೇಡಿಂಗ್ ಸೋಗಿನಲ್ಲಿ ಲಕ್ಷ-ಲಕ್ಷ ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ. ಇನ್ಫೋಸಿಸ್ ಸಂಸ್ಥಾಪಕ ನಾರಾಣಯಣಮೂರ್ತಿ ಹಾಗೂ ರಿಲಾಯನ್ಸ್ ಇಂಡಸ್ಟ್ರಿಸ್ ಮಾಲೀಕ ಮುಖೇಶ್ ಅಂಬಾನಿ ಹೆಸರಿನಲ್ಲಿ ಡೀಫ್ ಪೇಕ್ ಫೋಟೊ ಬಳಸಿ ಟ್ರೇಡಿಂಗ್ ನಲ್ಲಿ ಹೂಡಿಕೆ ಸೋಗಿನಲ್ಲಿ ಪ್ರತ್ಯೇಕ ಎರಡು ಎರಡು ವಂಚನೆ ಪ್ರಕರಣಗಳಲ್ಲಿ ಸೈಬರ್ ಚೋರರು 86 ಲಕ್ಷ ವಂಚಿಸಿದ್ದಾರೆ. ಲಾಭಾಂಶ ನೀಡುವುದಾಗಿ 67 ಲಕ್ಷ ವಂಚನೆ ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಮಾತನಾಡಿದಂತೆ ಡೀಪ್ ಫೇಕ್ ವಿಡಿಯೊ ಸೃಷ್ಟಿಸಿ ಎಫ್ ಎಕ್ಸ್ ರೋಡ್ ಫ್ಲಾಟ್ ಫಾರ್ಮ್ ಟ್ರೇಡಿಂಗ್ ಬಗ್ಗೆ ಮಾಹಿತಿ ನೀಡಿದಂತೆ ಮಹಿಳಾ ದೂರುದಾರರಾದ ವೀಣಾ ಎಂಬುವರಿಗೆ ಅಪರಿಚಿತರು ಈ-ಮೇಲ್ ಮಾಡಿದ್ದಾರೆ. ಟ್ರೇಡಿಂಗ್ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಆಕೆಯಿಂದ 1.39 ಲಕ್ಷ ಪಾವತಿಸಿಕೊಂಡಿದ್ದರು. ಇದಕ್ಕೆ ಪ್ರತಿಯಾಗಿ 8 ಸಾವಿರ ಲಾಭ ನೀಡಿದ್ದರು. ಇದೇ ರೀತಿ ಹಂತ-ಹಂತವಾಗಿ ಮಹಿಳೆಯಿಂದ ಆಕೆಯಿಂದ 6.71 ಲಕ್ಷ ಹಣ ಪಾವತಿಸಿಕೊಂಡು ಖದೀಮರು ವಂಚಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದಾದ ಕೆಲ ದಿನಗಳ ಬಳಿಕ ವರ್ಕ್ ಫ್ರಮ್ ಹೋಮ್ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಬಂದಿದ್ದ ಲಿಂಕ್ ಒತ್ತಿದ ಮಹಿಳೆಗೆ ಟೆಲಿಗ್ರಾಮ್ ಮೂಲಕ ಸಂಪರ್ಕಿಸಿದ ಅಪರಿಚಿತರು ಎಎಸ್ ಓಎಸ್ ಪ್ಲಾಟ್ ಫಾರ್ಮ್ ನ ಪ್ರಾಡೆಕ್ಟ್ ಗಳಿಗೆ ರೇಟಿಂಗ್ ನೀಡಿ ಹಣ ಸಂಪಾದಿಸಬಹುದೆಂದು ಹೇಳಿ ಆರಂಭದಲ್ಲಿ ಲಾಭಾಂಶ ಹಣ ನೀಡಿ ಬಳಿಕ ಮಹಿಳೆಯನ್ನ ನಂಬಿಸಿ 57 ಲಕ್ಷ ಹಣವನ್ನ ಹೂಡಿಸಿ ವಂಚಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೋರಿ ಸೆನ್ ಠಾಣೆಯಲ್ಲಿ ಮಹಿಳೆ ದೂರು ದಾಖಲಿಸಿದ್ದಾರೆ. ಅಂಬಾನಿ ಹೆಸರಿನಲ್ಲಿಯೂ ಡೀಫ್ ಪೇಕ್ ವಿಡಿಯೊ ಸೃಷ್ಟಿ ನಾರಾಯಣಮೂರ್ತಿವಲ್ಲದೆ ಮುಖೇಶ್ ಅಂಬಾನಿ ಹೆಸರಿನಲ್ಲಿ ಡೀಫ್ ಪೋಟೊ ಸೃಷ್ಟಿಸಿ ಖದೀಮರು ಫೇಸ್ ಬುಕ್ ಮೂಲಕ ಲಿಂಕ್ ಕಳುಹಿಸಿ ಹೂಡಿಕೆ ಮಾಡುವಂತೆ ಹೇಳಿ ಅಶೋಕ್ ಕುಮಾರ್ ಎಂಬುವರಿಂದ ಸೈಬರ್ ಚೋರರು 19 ಲಕ್ಷ ಹಣ ಕಟ್ಟಿಸಿಕೊಂಡು ವಂಚಿಸಿದ್ದಾರೆ. ಈ ಸಂಬಂಧ ಬೆಂಗಳೂರು ಗ್ರಾಮಾಂತರ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆನ್ ಲೈನ್ ಟ್ರೇಡಿಂಗ್ ನಲ್ಲಿ ಹಣ ಹೂಡಿದರೆ ಹೆಚ್ಚಿನ ಹಣ ನೀಡುವುದಾಗಿ ನಂಬಿಸಿದ ವಂಚಕರಿಗೆ ಹಂತ-ಹಂತವಾಗಿ 19 ಲಕ್ಷ ಹಣವನ್ನ ಅಶೋಕ್ ಅವರು ಬ್ಯಾಂಕ್ ಮೂಲಕ ವರ್ಗಾವಣೆ ಮಾಡಿದ್ದರು. ಪಾವತಿಸಿದ ಹಣಕ್ಕೆ ಕಮೀಷನ್ ನೀಡದೆ ವಂಚಿಸಲಾಗಿದೆ ಎಂದು ದೂರಿನಲ್ಲಿ ಅಶೋಕ್ ಉಲ್ಲೇಖಿಸಿದ್ದಾರೆ.