ಆಹಾರ ತಜ್ಞರು ಡ್ರೈ ಫ್ರೂಟ್ಸ್ಗಳನ್ನು ನೀರಿನಲ್ಲಿ ನೆನೆಸಿಟ್ಟು ತಿನ್ನಬೇಕು ಎಂದು ಹೇಳುತ್ತಾರೆ. ಏಕೆಂದರೆ ಡ್ರೈ ಫ್ರೂಟ್ಸ್ಗಳನ್ನು ಹಾಗೆ ತಿನ್ನುವುದಕ್ಕಿಂತ ನೆನೆಸಿ ತಿನ್ನುವುದು ಉತ್ತಮ. ಆದರೆ ಬಹಳಷ್ಟು ಮಂದಿಗೆ ಡ್ರೈ ಫ್ರೂಟ್ಸ್ಗಳನ್ನು ಎಷ್ಟು ಗಂಟೆಗಳ ತನಕ ನೆನಸಿಡಬೇಕು ಎಂದು ಗೊತ್ತಿರುವುದಿಲ್ಲ.
ಡ್ರೈ ಫ್ರೂಟ್ಸ್ಗಳನ್ನು ಇಷ್ಟು ಹೊತ್ತು ನೆನೆಸಿಡಬೇಕು :
ವಾಲ್ನಟ್ಸ್ : 4-6 ಗಂಟೆ
ಬಾದಾಮಿ : 8-12 ಗಂಟೆ
ಒಣದ್ರಾಕ್ಷಿ : 2-3 ಗಂಟೆ
ಗೋಡಂಬಿ : 4-6 ಗಂಟೆ
ಡ್ರೈ ಫ್ರೂಟ್ಸ್ಗಳನ್ನು ಪ್ರತಿದಿನ ನೆನೆಸಿ ಸೇವಿಸುವುದರಿಂದ ತೂಕ ನಿಯಂತ್ರಣಕ್ಕೆ ಬರುತ್ತದೆ. ಅಧಿಕ ತೂಕ ಹೊಂದಿದವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ನೆನೆಸಿದ ಡ್ರೈ ಫ್ರೂಟ್ಸ್ ತಿನ್ನಬಹುದು. ಡ್ರೈ ಫ್ರೂಟ್ಸ್ ಗಂಟೆಗಟ್ಟಲೆ ನೆನೆಸುವುದರಿಂದ ನೀರನ್ನು ಹೀರಿಕೊಳ್ಳುತ್ತವೆ. ಇದರಿಂದ ದೇಹವನ್ನು ಹೈಡ್ರೇಟ್ ಆಗಿ ಇಡಬಹುದು. ಹೃದ್ರೋಗಿಗಳು ನೆನೆಸಿದ ಡ್ರೈ ಫ್ರೂಟ್ಸ್ ಅನ್ನು ತಿನ್ನುವುದರಿಂದ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಜೀರ್ಣಕ್ರಿಯೆ ಸಮಸ್ಯೆಯಿಂದ ಪರದಾಡುತ್ತಿರುವವರಿಗೆ ಪ್ರಯೋಜನಕಾರಿಯಾಗಿದೆ. ಡ್ರೈ ಫ್ರೂಟ್ಸ್ ಅನ್ನು ನೆನೆಸಿ ತಿನ್ನುವುದರಿಂದ ರೋಗಗಳನ್ನು ತಡೆಯಬಹುದು, ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ನಾವು ಡ್ರೈ ಫ್ರೂಟ್ಸ್ ತಿನ್ನುವುದರಿಂದ ದೇಹಕ್ಕೆ ಅಗತ್ಯವಾದ ಶಕ್ತಿ ದೊರೆಯುತ್ತದೆ ಹಾಗೂ ದೀರ್ಘಕಾಲದವರೆಗೆ ಹೊಟ್ಟೆಯು ತುಂಬಿರುತ್ತದೆ.