ರೋಹಿಣಿ ಸಿಂಧೂರಿ VS ಡಿ.ರೂಪಾ ಕೇಸ್‌ಗೆ ಮತ್ತೆ ಟ್ವಿಸ್ಟ್‌ : ಮಾನನಷ್ಟ ಕೇಸ್ ರದ್ದುಗೊಳಿಸುವಂತೆ ಸಲ್ಲಿಸಿದ್ದ ಅರ್ಜಿ ವಾಪಸ್

WhatsApp
Telegram
Facebook
Twitter
LinkedIn

ನವದೆಹಲಿ: ರೋಹಿಣಿ ಸಿಂಧೂರಿಯವರ ಆಕ್ಷೇಪಾರ್ಹ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಐಪಿಎಸ್ ಅಧಿಕಾರಿ ಡಿ.ರೂಪಾ ದೊಡ್ಡ ಕಿಚ್ಚನ್ನು ಹೊತ್ತಿಸಿದ್ದರು. ಇಬ್ಬರ ಜಗಳ ನ್ಯಾಯಾಲಯದಲ್ಲಿ ಮಾನನಷ್ಟ ಕೇಸ್ ದಾಖಲಿಸಲಾಗಿತ್ತು. ರೋಹಿಣಿ ಸಿಂಧೂರಿ, ಡಿ.ರೂಪಾ ಅವರ ಈ ಕೇಸ್‌ಗೆ ಈಗ ಬಿಗ್ ಟ್ವಿಸ್ಟ್‌ ಸಿಕ್ಕಿದೆ. ಸುಪ್ರೀಂ ಕೋರ್ಟ್‌ನಲ್ಲಿ ನಿನ್ನೆ ನಡೆದ ವಿಚಾರಣೆ ವೇಳೆ ಮಾನನಷ್ಟ ಕೇಸ್ ಅನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ರೋಹಿಣಿ ಸಿಂಧೂರಿ ಅವರು ನಿರಾಕರಿಸಿದ್ದಾರೆ. ಐಪಿಎಸ್ ಅಧಿಕಾರಿ ಡಿ.ರೂಪಾ ವಿರುದ್ಧದ ಕೇಸ್‌ ಅನ್ನು ಮೆರಿಟ್ ಮೇಲೆ ಕೇಸ್‌ ಮುಂದುವರಿಸುವುದಾಗಿ ಹೇಳಿದ್ದಾರೆ.

ಮಾನನಷ್ಟ ಕೇಸ್ ರದ್ದುಪಡಿಸಲು ಕೋರಿ ಐಪಿಎಸ್ ಅಧಿಕಾರಿ ಡಿ.ರೂಪಾ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಇಬ್ಬರ ನಡುವೆ ಮಾತುಕತೆಗೆ ಸಮಯ ಕೊಡಲಾಗಿದೆ. ಆದರೆ ರೋಹಿಣಿ ಸಿಂಧೂರಿ ಅವರು ಮಾತುಕತೆಗೆ ಆಸಕ್ತಿ ತೋರಿಲ್ಲ. ರೂಪಾ ಪರ ವಕೀಲ ಆದಿತ್ಯ ಸೋಂಧಿರಿಂದ ಮಧ್ಯಸ್ಥಿಕೆದಾರರನ್ನು ನೇಮಿಸಲು ಮನವಿ ಮಾಡಲಾಗಿತ್ತು. ಆದರೆ ಇದನ್ನು ಒಪ್ಪದ ಐಎಎಸ್ ಅಧಿಕಾರಿ, ಎಲ್ಲವನ್ನೂ ಸಾರ್ವಜನಿಕ ಅವಗಾಹನೆಯಲ್ಲಿಟ್ಟು, ಮಾತುಕತೆಯ ಮಾತುಗಳನಾಡುತ್ತೀದ್ದೀರಿ.

ಕೇಸ್ ಅನ್ನು ಮಧ್ಯಸ್ಥಿಕೆ ಮೂಲಕ ಬಗೆಹರಿಸಿಕೊಳ್ಳಲು ಆಸಕ್ತಿ ಇಲ್ಲ. ಮೆರಿಟ್ ಮೇಲೆ ಕೇಸ್ ವಿಚಾರಣೆ ನಡೆಯಲಿ ಎಂದು ತಿಳಿಸಿದ್ದಾರೆ. ರೋಹಿಣಿ ಸಿಂಧೂರಿ ಅವರ ಈ ನಡೆಯಿಂದ ಇದರಿಂದಾಗಿ ಸುಪ್ರೀಂಕೋರ್ಟ್‌ಗೆ ಕೇಸ್ ರದ್ದುಪಡಿಸಲು ಕೋರಿದ್ದ ಅರ್ಜಿಯನ್ನು ರೂಪಾ ಅವರು ವಾಪಸ್ ಪಡೆದಿದ್ದಾರೆ. ಇದೀಗ ಮತ್ತೆ ಕೇಸ್ ವಿಚಾರಣೆ ಮುಂದುವರಿಯಲಿದೆ. ಈ ಜಟಾಪಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಈ ಹಿಂದೆಯೇ​ ಬುದ್ಧಿವಾದ ಹೇಳಿತ್ತು. ಕೇಸ್ ಇತ್ಯರ್ಥ ಮಾಡಿಕೊಳ್ಳುವಂತೆ ಸಲಹೆಯನ್ನು ನೀಡಿತ್ತು. ಮತ್ತೊಮ್ಮೆ ಸುಪ್ರೀಂಕೋರ್ಟ್‌ ಮಾನನಷ್ಟ ಕೇಸ್ ಮುಂದುವರಿಕೆಯಿಂದ ಇಬ್ಬರ ಕೆರಿಯರ್‌ಗೂ ತೊಂದರೆಯಾಗಲಿದೆ.

BC Suddi   About Us
For Feedback - [email protected]

Related News

LATEST Post

WhatsApp Icon Telegram Icon