ಹೊಸ Ration Card ಅರ್ಜಿ ಸಲ್ಲಿಕೆ ಪ್ರಾರಂಭ.!

ಬೆಂಗಳೂರು : ಬಡ ಕುಟುಂಬದವರು ಸರ್ಕಾರಿ ಸೌಲಭ್ಯ (government facility) ಪಡೆಯಲು ರೇಷನ್ ಕಾರ್ಡ್ ಬೇಕೆಬೇಕು. ಇಷ್ಟು ದಿನ ಸರ್ವರ್‌ ಸಮಸ್ಯೆ (server problem) ಕಾರಣ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಸಾಧ್ಯವಿರಲಿಲ್ಲ. ಆದರೆ ಈಗ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ (all districts) ಮತ್ತೆ ಅರ್ಜಿ ಸಲ್ಲಿಕೆ ಕಾರ್ಯ ಆರಂಭಿಸಲಾಗಿದೆ. ಪಡಿತರ ಚೀಟಿಗಾಗಿ ಕರ್ನಾಟಕದ ಎಲ್ಲಾ ಖಾಯಂ ನಿವಾಸಿಗಳು ಅರ್ಜಿ ಸಲ್ಲಿಸಬಹುದು. ಮಾನದಂಡಗಳಿಗೆ ಅನುಸಾರವಾಗಿ APL ಅಥವಾ BPL ಕಾರ್ಡ್‌ಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಪಡಿತರ ಚೀಟಿಗೆ (ration card) ಅರ್ಜಿ ಸಲ್ಲಿಸುವವರು ಆಹಾರ ಇಲಾಖೆಯ (Food Department) ಕಚೇರಿಗೆ ಹೋಗಬೇಕಾಗಿಲ್ಲ. ಬದಲಿಗೆ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಕೆ ಮಾಡಬಹುದು.

ಬೇಕಾಗುವ ದಾಖಲೆಗಳು :

* ಆಧಾರ್ ಕಾರ್ಡ್
* ಮೊಬೈಲ್ ಸಂಖ್ಯೆ
* Email ಐಡಿ
* ಪ್ಯಾನ್ ಕಾರ್ಡ್
* ವಿದ್ಯುತ್ ಬಿಲ್

Advertisement

ಮೇಲೆ ನೀಡಿರುವ ದಾಖಲೆಗಳೊಂದಿಗೆ (documents) ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ 15 ದಿನಗಳ ನಂತರ ನೀವು 100 ರೂಪಾಯಿ ಶುಲ್ಕ ಪಾವತಿಸಿ ಪಡಿತರ ಚೀಟಿಯನ್ನು ಪಡೆಯಬಹುದು. ಪಡಿತರ ಚೀಟಿ ಕುರಿತ ಯಾವುದೇ ಗೊಂದಲಗಳಿದ್ದರೆ ಆಹಾರ ಇಲಾಖೆಯ ಟೋಲ್ ಫ್ರೀ ನಂಬರ್ 18004259339 ಅಥವಾ ಸಹಾಯವಾಣಿ (help line) 1967ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.

ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ :

ಹಂತ 1: ಮೊದಲು https://ahara.kar.nic.in/ ಅಧಿಕೃತ ಸರ್ಕಾರಿ ವೆಬ್ ಸೈಟ್ ಗೆ ಭೇಟಿ ನೀಡಿ.

ಹಂತ 2 : ಮುಖಪುಟದಲ್ಲಿ ಇ-ಸೇವೆಗಳನ್ನು ಆಯ್ಕೆ ಮಾಡಿ.

ಹಂತ 3 : ಹೊಸ ಪಡಿತರ ಚೀಟಿ ಆಯ್ಕೆ ಕಾಣಿಸುತ್ತದೆ. ಅದನ್ನು ಆಯ್ಕೆ ಮಾಡಬೇಕು.

ಹಂತ 4 : ಪಡಿತರ ಚೀಟಿಯ ಪ್ರಕಾರವನ್ನು ನೀವು ನಿರ್ಧರಿಸಬೇಕಾಗುತ್ತದೆ.

ಹಂತ 5 : ಆಯ್ಕೆ ಮಾಡಿದ ನಂತರ ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಸಂಖ್ಯೆಯನ್ನು ದೃಢೀಕರಿಸಿ (confirm).

ಹಂತ 6 : ಒಟಿಪಿಯನ್ನು ಭರ್ತಿ ಮಾಡಿದ ಬಳಿಕ ನಿಮ್ಮ ನಂಬರ್ ದೃಢೀಕರಿಸಲಾಗುತ್ತದೆ.

ಹಂತ 7 : ಪ್ರೋಗ್ರಾಂ ಸೇರಿಸಲು ‘ಸೇರಿಸು’ ಆಯ್ಕೆ ಮಾಡಿ.

ಹಂತ 8 : ನಂತರ ನೋಂದಣಿ ಫಾರ್ಮ್ ಅನ್ನು ನಿಮ್ಮ ಮುಂದೆ ಪ್ರದರ್ಶಿಸಲಾಗುವುದು.

ಹಂತ 9 : ನೀವು ‘ಉಳಿಸು (save)’ ಆಯ್ಕೆ ಮಾಡುವ ಮೊದಲು Form ಅನ್ನು ಸಂಪೂರ್ಣವಾಗಿ ಭರ್ತಿ ಮಾಡಿ.

ಹಂತ 10 : ಭವಿಷ್ಯದ ಬಳಕೆಗಾಗಿ ನೋಂದಣಿ ಸಂಖ್ಯೆಯನ್ನು (Registration number) ಫೈಲ್ ನಲ್ಲಿ ಇರಿಸಿರಿ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement