ಮರದಿಂದ ಮಾಡಿರುವ ಉಪಗ್ರಹವನ್ನು ಜಪಾನ್ ದೇಶ ಇತ್ತೀಚಿಗೆ ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿದೆ ಎನ್ನುವ ವಿಚಾರವನ್ನು ರಾಯಿಟರ್ಸ್ ಸಂಸ್ಥೆ ವರದಿ ಮಾಡಿದೆ.
ಈ ಸಾಧನೆ ಮಾಡಿದ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಜಪಾನ್ ಪಾತ್ರವಾಗಿದೆ. ಈ ಉಪಗ್ರಹವನ್ನು ಕ್ಯೋಟೋ ವಿಶ್ವವಿದ್ಯಾಲಯದ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ.
ಲಿಗ್ನೋಸ್ಯಾಟ್ ಎನ್ನುವ ಈ ಉಪಗ್ರಹವನ್ನು ನಿರ್ಮಿಸಲು ವಿಜ್ಞಾನಿಗಳು ಮ್ಯಾಗ್ನೋಲಿಯಾ ಮರವನ್ನು ಉಪಯೋಗಿಸಿಕೊಂಡಿದ್ದಾರೆ ಎನ್ನಲಾಗಿದೆ.
ಇನ್ನೂ ಈ ಉಪಗ್ರಹ ಅಂಗ್ರೆ ಗಾತ್ರದಲ್ಲಿದ್ದು, ಕೇವಲ 4 ಇಂಚಿನ ಗಾತ್ರ ಹೊಂದಿದೆ ಎನ್ನುವುದು ವಿಶೇಷ.