ಟ್ಯಾಟೂ ಹಾಕಿಸಿಕೊಂಡವರು ರಕ್ತದಾನ ಮಾಡಬಾರದು ಯಾಕೆ..? | Blood Donate

ಇಂದಿನ ಯುವ ಜನತೆಯಲ್ಲಿ ಟ್ಯಾಟೂ ಹಾಕಿಸಿಕೊಳ್ಳುವ ಕ್ರೇಜ್ ಹೆಚ್ಚಾಗಿದೆ. ಕೈ, ಕಾಲು, ಸೊಂಟ, ಬೆರಳು ಸೇರಿದಂತೆ ದೇಹದ ಹಲವು ಭಾಗಗಳಲ್ಲಿ ಹಚ್ಚೆ ಹಾಕಿಸಿಕೊಳ್ಳುತ್ತಾರೆ.

ಕೆಲವೊಬ್ಬರು ಏನೇನೋ ಡಿಸೈನ್ ಹಾಕಿಸಿಕೊಂಡರೆ, ಇನ್ನೂ ಕೆಲವರು ಹೆಸರುಗಳನ್ನು ಬರೆಸುತ್ತಾರೆ. ಆದರೆ ನಾವು ಹೇಳುತ್ತಿರುವ ಮ್ಯಾಟರ್ ಇದಲ್ಲ.

ನೀವು ಈ ಮಾತು ಕೇಳಿರಬಹುದು. ಅದು ಏನಂದ್ರೆ, ದೇಹದ ಯಾವುದೇ ಭಾಗದಲ್ಲಿ ಹಚ್ಚೆ ಹಾಕಿಸಿಕೊಂಡವರು ರಕ್ತದಾನ (blood donate) ಮಾಡಲು ಡಾಕ್ಟರ್ ಬಿಡುವುದಿಲ್ಲ ಅಂತ.

Advertisement

ವ್ಯಕ್ತಿ ಟ್ಯಾಟೂ ಹಾಕಿಸಿಕೊಂಡಿದ್ದರೆ ಅವರಿಗೆ ರಕ್ತದಾನ ಮಾಡುವುದು ಕೆಲವೊಮ್ಮೆ ಸಮಸ್ಯೆಯಾಗಬಹುದು. ಹಾಗಾದರೆ ನಿಮಗೆ ಗೊತ್ತೇ ದೇಹದ ಮೇಲೆ ಹಚ್ಚೆ ಇದ್ದರೆ ರಕ್ತವನ್ನು ಏಕೆ ನೀಡಬಾರದು ಎಂದು? ಮುಂದೆ ತಿಳಿಯಿರಿ.

ಕೆಲ doctors, ಟ್ಯಾಟೂ ಇದ್ದರೆ ರಕ್ತದಾನ ಮಾಡಲು ಯಾವುದೇ ಅಡೆತಡೆಗಳಿಲ್ಲ ಎಂದು ಅಭಿಪ್ರಾಯ ಪಡುತ್ತಾರೆ. ಹಚ್ಚೆ ಹಾಕಿಸಿಕೊಂಡು ಸುಲಭವಾಗಿ ನಾವು ರಕ್ತದಾನ ಮಾಡಬಹುದು. ಇದು ರೋಗಿಗೆ ಯಾವುದೇ ರೀತಿಯ ತೊಂದರೆಯನ್ನುಂಟು ಮಾಡುವುದಿಲ್ಲ. ಆದರೆ ಹಚ್ಚೆ ಹಾಕಿಸಿಕೊಂಡವರು ಕೆಲವು ಮಾರ್ಗಸೂಚಿಗಳನ್ನು ಅನುಸರಿಸಬೇಕಾಗುತ್ತದೆ (follow).

ಯಾವಾಗಲೂ ಹೊಸ ಸೂಜಿಗಳನ್ನು ಬಳಸಿ Tattoo ಹಾಕಿಸಿಕೊಳ್ಳಬೇಕಾಗುತ್ತದೆ. ಹೆಚ್ಚಿನ ಜನರು ಕೆಲವೊಮ್ಮೆ ಒಂದೇ ಸೂಜಿಗಳಿಂದ ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಆದರೆ ಹಚ್ಚೆ ಹಾಕಿಸಿಕೊಂಡಾತನಿಗೆ ಇದು ಒಳ್ಳೆಯದಲ್ಲ.

ಯಾಕೆಂದರೆ ಇಂತಹ ಸಂದರ್ಭದಲ್ಲಿ, ರಕ್ತದ ಮೂಲಕ ಮಾರಣಾಂತಿಕ ಕಾಯಿಲೆಗಳು (Malignant diseases) ದೇಹವನ್ನು ಪ್ರವೇಶಿಸಬಹುದು. ನಂತರ ಅದು ವ್ಯಕ್ತಿಯ ದೇಹಕ್ಕೆ ಹರಡುತ್ತದೆ. ಇನ್ನೂ ಸೋಂಕಿನ ನಂತರ ವೈರಸ್ ಸಂತಾನೋತ್ಪತ್ತಿ (Virus reproduction) ಮಾಡುವ ಅವಧಿಯನ್ನು ಇನ್ಕ್ಯುಬೇಷನ್ ಅವಧಿ ಎಂದು ಕರೆಯಲಾಗುತ್ತದೆ.

ಒಬ್ಬ ವ್ಯಕ್ತಿಯು 6 ತಿಂಗಳೊಳಗೆ HIV, ಹೆಪಟೈಟಿಸ್ ಬಿ ಅಥವಾ ಹೆಪಟೈಟಿಸ್ ಸಿ ವೈರಸ್ ಸೋಂಕಿಗೆ ಒಳಗಾಗುತ್ತಾನೆ. ಆ ಸಮಯದಲ್ಲಿ ರಕ್ತ ಪರೀಕ್ಷೆಗೆ ಒಳಗಾಗಿದ್ದರೆ, ಅದು negative ಬರಬಹುದು. ಹೀಗಾಗಿ ಹಚ್ಚೆ ಹಾಕಿಸಿಕೊಂಡವರು ಆರು ತಿಂಗಳಾದ ಮೇಲೆ ರಕ್ತದಾನ ಮಾಡಬಹುದು.

ಹಚ್ಚೆ ಹಾಕಿಸಿಕೊಂಡ ವ್ಯಕ್ತಿ ಕನಿಷ್ಠ ಆರು ತಿಂಗಳು ಜಾಗರೂಕರಾಗಿರಬೇಕು. ಆರು ತಿಂಗಳ ಬಳಿಕ, ಖಚಿತಪಡಿಸಿಕೊಳ್ಳಲು ರಕ್ತ ಪರೀಕ್ಷೆ ಮಾಡಿಸಬೇಕು. ಆಗ ಹಚ್ಚೆ ಹಾಕಿಸಿಕೊಂಡಿದ್ದರೂ ಸುರಕ್ಷಿತವಾಗಿ ನೀವು ರಕ್ತದಾನ ಮಾಡಬಹುದಾಗಿದೆ. ಆದರೆ ಕೆಲವು ವಿಶೇಷ ಸಂದರ್ಭಗಳಲ್ಲಿ, ಕೆಲವು ವೈದ್ಯರು ಒಂದು ವರ್ಷದವರೆಗೆ ರಕ್ತದಾನ ಮಾಡುವುದು ಬೇಡ ಎಂದು ನಿಷೇಧಿಸುತ್ತಾರೆ.

 

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement