ಒಂದು OTP ಯಲ್ಲಿ ಖಾಲಿಯಾಗುತ್ತದೆ ಬ್ಯಾಂಕ್ ಖಾತೆ- ಮೋಸದ ಜಾಲದಿಂದ ಪಾರಾಗಲು ಈ ಐದು ಟಿಪ್ಸ್ ಅನುಸರಿಸಿ

ಸದ್ಯದ ಡಿಜಿಟಲ್ ಜಮಾನದಲ್ಲಿ ಹೆಚ್ಚಿನ ಕೆಲಸಗಳು ಆನ್‌ಲೈನ್‌ನಲ್ಲಿ ನಡೆಯುತ್ತಿರುತ್ತದೆ. ಬ್ಯಾಂಕ್ ಹಣ ವರ್ಗಾವಣೆಯಿಂದ ಹಿಡಿದು ಆಹಾರ ಸೇರಿದಂತೆ ದಿನಬಳಕೆಯಿಂದ ಹಿಡಿದ ಕಾಸ್ಟ್ಲಿ ವಸ್ತುಗಳನ್ನು ಆರ್ಡರ್ ಮಾಡುವುದು, ಡಿಜಿಟಲ್ ಮಾಧ್ಯಮವು ಹಣಕಾಸಿನ ವ್ಯವಹಾರಗಳ ಪ್ರಮುಖ ಕ್ಷೇತ್ರವಾಗಿದೆ. ಇದರೊಂದಿಗೆ ಆನ್‌ಲೈನ್ ವಂಚನೆಯ ಅಪಾಯವೂ ಹೆಚ್ಚುತ್ತಿದೆ. ಅತ್ಯಂತ ಸಾಮಾನ್ಯವಾದ ಹಗರಣವೆಂದರೆ ‘ಒಟಿಪಿ ಬೈಪಾಸ್ ಹಗರಣ’.

ಮೊಬೈಲ್ ಫೋನ್‌ಗಳಲ್ಲಿ ಬರುವ ಒಟಿಪಿಯು ವಂಚನೆಯ ಜಾಲವನ್ನು ಹೆಣೆಯುತ್ತದೆ. ಯಾರಾದರೂ ವಂಚಕರನ್ನು ನಂಬಿ ಅಜಾಗರೂಕತೆಯಿಂದ ಒಟಿಪಿ ಹೇಳಿದರೆ, ಆಪತ್ತು ಎದುರಾಯ್ತು ಎಂದೇ ತಕ್ಷಣ ಬ್ಯಾಂಕ್ ಖಾತೆ ಖಾಲಿಯಾಗುತ್ತದೆ.

ಒಟಿಪಿ ವಂಚನೆಯಿಂದ ಕಳೆದ ಕೆಲವು ತಿಂಗಳುಗಳಲ್ಲಿ ಅನೇಕ ಮಂದಿ ಹಣ ಕಳೆದುಕೊಂಡಿದ್ದಾರೆ. ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಫೋನ್‌ನಲ್ಲಿ ಹೇಳಬಾರದು ಎಂದು ಸರ್ಕಾರದ ಸೈಬರ್ ಭದ್ರತಾ ಇಲಾಖೆ ಎಚ್ಚರಿಸಿದೆ.

Advertisement

ಯಾವುದೇ ಲಿಂಕ್ ಮೇಲೆ ಕ್ಲಿಕ್ ಮಾಡುವುದು ಅಥವಾ ಫೋನ್‌ನಲ್ಲಿ ಏನನ್ನಾದರೂ ಡೌನ್‌ಲೋಡ್ ಮಾಡಬಾರದು. ಆನ್‌ಲೈನ್ ಬ್ಯಾಂಕಿಂಗ್ ಮಾಡುವಾಗಲೂ ಜಾಗರೂಕರಾಗಿರಬೇಕು. ಸೈಬರ್ ತಜ್ಞರು ಹೇಳುವ ನಿಯಮಗಳನ್ನು ಪಾಲಿಸಿದರೆ ಸುರಕ್ಷಿತವಾಗಿರಬಹುದು.

ಯಾವುದೇ ಟೋಲ್-ಫ್ರೀ ಸಂಖ್ಯೆಗೆ ಕರೆ ಮಾಡಬೇಡಿ ಮತ್ತು ಫೋನ್‌ನಲ್ಲಿ ಬರುವ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಸಂಖ್ಯೆ ಅಥವಾ ಒಟಿಪಿಯನ್ನು ಹಂಚಿಕೊಳ್ಳಬೇಡಿ.

ನೀವು ಯಾವ ಸಂಖ್ಯೆಯಿಂದ ಕರೆ ಪಡೆಯುತ್ತಿದ್ದೀರಿ ಅಥವಾ ಯಾವ ಸಂಖ್ಯೆಗೆ ಕರೆ ಮಾಡುತ್ತಿದ್ದೀರಿ ಎಂಬುದು ಬ್ಯಾಂಕ್ ಅಥವಾ ಸಂಸ್ಥೆಯದ್ದೇ ಎಂದು ಪರಿಶೀಲಿಸಬೇಕು. ಆನ್‌ಲೈನ್ ಬ್ಯಾಂಕಿಂಗ್ ಮಾಡುವಾಗ ನೀವು ಸಂಬಂಧಪಟ್ಟ ಬ್ಯಾಂಕಿನ ಅಧಿಕೃತ ವೆಬ್‌ಸೈಟ್‌ಗೆ ಹೋಗಬೇಕು.

ಬ್ಯಾಂಕ್ ಖಾತೆಗೆ ಎರಡು ಹಂತದ ದೃಢೀಕರಣವನ್ನು ಬಳಸುವುದನ್ನು ಖಚಿತಪಡಿಸಿಕೊಳ್ಳಿ. ಇದು ನಿಮ್ಮ ಅಪ್ಲಿಕೇಶನ್‌ನ ಸುರಕ್ಷತೆಯನ್ನು ಹೆಚ್ಚಿಸುತ್ತದೆ. ನಿಮ್ಮ ಫೋನ್‌ನ ಡೇಟಾ ಅಥವಾ ವೈಫೈ ಬಳಸಿ ಹಣಕಾಸಿನ ವ್ಯವಹಾರಗಳನ್ನು ಮಾಡಿ. ಸಾರ್ವಜನಿಕ ವೈಫೈ ಬಳಸುವುದು ಅಪಾಯಕಾರಿ.

ಇಮೇಲ್, SMS, WhatsApp ನಲ್ಲಿ ತಿಳಿಯದ ಸಂಖ್ಯೆಗಳಿಂದ ಬರುವ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. ಒಂದು ವೇಳೆ ಯಾವುದೇ ಸಂದೇಶ ಅಥವಾ ಇಮೇಲ್ ಒಟಿಪಿ ಜೊತೆ ಬಂದರೆ ಅಥವಾ ವೈಯಕ್ತಿಕ ಮಾಹಿತಿ ಕೇಳಿದರೆ, ಎಚ್ಚರಿಕೆಯಿಂದಿರಿ. ಅಗತ್ಯವಿದ್ದರೆ ಬ್ಯಾಂಕ್ ಮತ್ತು ಪೊಲೀಸ್ ಠಾಣೆಗೆ ತಿಳಿಸಿ.

ಯಾವುದೇ ಬ್ಯಾಂಕ್ ಅಥವಾ ಯಾವುದೇ ಸಂಸ್ಥೆಯ ಪ್ರತಿನಿಧಿ ಕರೆ ಮಾಡಿದರೆ ಆಧಾರ್, ಪ್ಯಾನ್, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಸಂಖ್ಯೆ, ಡೆಬಿಟ್ ಕಾರ್ಡ್‌ನ ಮುಕ್ತಾಯ ದಿನಾಂಕ, ಜನ್ಮ ದಿನಾಂಕ, ಬ್ಯಾಂಕ್ ಖಾತೆ ಸಂಖ್ಯೆ ಅಥವಾ ಇತರೆ ಯಾವುದೇ ಗುರುತನ್ನು ನೀಡಬೇಡಿ.

ಟೆಲಿಗ್ರಾಮ್ ಅಥವಾ ಇತರ ಅಪ್ಲಿಕೇಶನ್‌ಗಳಲ್ಲಿ ಹೂಡಿಕೆ ಮಾಡಿ ಲಾಭ ಗಳಿಸುವ ನೆಪದಲ್ಲಿ ವಂಚನೆ ಹೆಚ್ಚುತ್ತಿದೆ. ಮುಖ್ಯವಾಗಿ ಕ್ರಿಪ್ಟೋಕರೆನ್ಸಿ (ಖಾಸಗಿ ವರ್ಚುವಲ್ ಕರೆನ್ಸಿ) ಮತ್ತು ಶೇರು ಮಾರುಕಟ್ಟೆಯ ಹೊಸ ಐಪಿಒಗಳಲ್ಲಿ ಹೂಡಿಕೆ ಮಾಡುವ ನೆಪದಲ್ಲಿ. ಈ ರೀತಿಯ ವಂಚನೆಗಳಿಂದ ಎಚ್ಚರಿಕೆಯಿಂದಿರಿ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement