ರಾತ್ರಿ ನಿದ್ರೆ ಕಮ್ಮಿ ಮಾಡುವವರೇ ಈ ಸುದ್ದಿಯನ್ನೊಮ್ಮೆ ಓದಿ

ಪ್ರತಿ ದಿನ ನಮಗೆ 8 ರಿಂದ 9 ಗಂಟೆಗಳ ನಿದ್ದೆ (sleep) ಬೇಕು. ಅದರಲ್ಲಿಯೂ ಕನಿಷ್ಠ 7 ಗಂಟೆಗಳ ಕಾಲ ಶಾಂತಿಯುತವಾಗಿ ಮಲಗಬೇಕು. ಇನ್ನೂ ಚಿಕ್ಕ ಮಕ್ಕಳು ಮತ್ತು ವೃದ್ಧರಿಗೆ ಹೆಚ್ಚು ನಿದ್ರೆ ಅವಶ್ಯಕ. ಬೆಳಗ್ಗೆ ಬೇಗ ಏಳುವವರು ಖಂಡಿತವಾಗಿಯೂ ರಾತ್ರಿ ಬೇಗ ಮಲಗಬೇಕು.

ಆದರೆ ಇಂದಿನ ಯುವಜನತೆ ಬೇಗ ಏಳುವುದು ಇಲ್ಲ, ಬೇಗ ಮಲಗುವುದು ಇಲ್ಲ. ಸರಿಯಾಗಿ ನಿದ್ದೆ ಆಗದಿದ್ದರೆ  ಆರೋಗ್ಯ ಸಮಸ್ಯೆ (health problem) ಎದುರಾಗಬಹುದು.

Advertisement

ನೀವು ಪ್ರತಿದಿನ ಕಮ್ಮಿ ನಿದ್ದೆ ಮಾಡುತ್ತಿದ್ದರೆ ಮಧುಮೇಹ ಬರುವ ಸಾಧ್ಯತೆ ಇದೆ. ನಿದ್ರಾಹೀನತೆಯಿಂದ (insomnia) ಜೀವಕೋಶಗಳು ಇನ್ಸುಲಿನ್‌ಗೆ ಸರಿಯಾಗಿ ಪ್ರತಿಕ್ರಿಯೆ ನೀಡುವುದಿಲ್ಲ. ತಜ್ಞರ ಪ್ರಕಾರ ನಿದ್ರಾಹೀನತೆ ಹೆಚ್ಚಾದರೆ ದೇಹದೊಳಗಿನ ಜೀವಕೋಶಗಳ ಪ್ರವೇಶಕ್ಕೆ ಗ್ಲೂಕೋಸ್ ಅಡ್ಡ ಬರಬಹುದು ಎನ್ನಲಾಗಿದೆ.

ನೀವು ಸರಿಯಾಗಿ ನಿದ್ದೆ ಮಾಡದೇ ಇದ್ದರೆ ಮೆದುಳಿನಲ್ಲಿ ಹಸಿವನ್ನು ನಿಯಂತ್ರಿಸುವ ಹಾರ್ಮೋನ್​ಗಳಿಗೆ (Control hunger) ತೊಂದರೆ ಉಂಟಾಗುತ್ತದೆ. ಹೀಗಾಗಿ ನೀವು ಹೆಚ್ಚು ತಿನ್ನಲು ಶುರು ಮಾಡುತ್ತೀರಾ. ತಡರಾತ್ರಿಯಲ್ಲಿಯೂ ಎದ್ದು ತಿನ್ನಲು ಆರಂಭಿಸುತ್ತಿರಾ. ಪರಿಣಾಮವಾಗಿ ನೀವು ಬೆಳಿಗ್ಗೆ ತಡವಾಗಿ ಏಳ್ತೀರಾ. ವ್ಯಾಯಾಮ ಮಾಡದೇ ಇರ್ತೀರಾ. ಇದರಿಂದಾಗಿ ತೂಕ ಹೆಚ್ಚುತ್ತದೆ ಎನ್ನುತ್ತಾರೆ ತಜ್ಞರು. ರಕ್ತದೊತ್ತಡವು ಪ್ರತಿದಿನ ಮಲಗಿದ ವೇಳೆ ಸಾಮಾನ್ಯವಾಗಿ ಕಡಿಮೆಯಾಗುತ್ತದೆ. ಆದರೆ ಪ್ರತಿದಿನ ಸರಿಯಾಗಿ ನಿದ್ದೆ ಮಾಡದ್ರೆ ಹೋದರೆ ರಕ್ತದೊತ್ತಡ (blood pressures) ಹೆಚ್ಚಾಗುವ ಸಾಧ್ಯತೆ ಇದೆ. ನಿದ್ರಾಹೀನತೆ ಅತಿಯಾದರೆ ಖಂಡಿತವಾಗಿಯೂ ಹೃದ್ರೋಗ ಮತ್ತು ಪಾರ್ಶ್ವವಾಯು ಬರುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.

 

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement