ರೋಸೌ: ಕಾಮನ್‌ವೆಲ್ತ್ ಆಫ್ ಡೊಮಿನಿಕಾ ತನ್ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯಾದ ಡೊಮಿನಿಕಾ ಪ್ರಶಸ್ತಿ ಗೌರವವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ನೀಡುವುದಾಗಿ ಘೋಷಿಸಿದೆ. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಡೊಮಿನಿಕಾಕ್ಕೆ ನೀಡಿದ ಕೊಡುಗೆಗಳನ್ನು ಮತ್ತು ಭಾರತ ಮತ್ತು ಡೊಮಿನಿಕಾ ನಡುವಿನ ಪಾಲುದಾರಿಕೆಯನ್ನು ಬಲಪಡಿಸುವ ಅವರ ಸಮರ್ಪಣೆಯನ್ನು ಗುರುತಿಸಿ ಈ ಗೌರವ ಪ್ರಶಸ್ತಿ ನೀಡುವುದಾಗಿ ಘೋಷಣೆ ಮಾಡಿದೆ.
ಗಯಾನಾದ ಜಾರ್ಜ್‌ಟೌನ್‌ನಲ್ಲಿ ನವೆಂಬರ್ 19-21, 2024 ರಂದು ಆಯೋಜಿಸಲಾದ ಇಂಡಿಯಾ-ಕ್ಯಾರಿಕಾಮ್ ಶೃಂಗಸಭೆಯಲ್ಲಿ ಕಾಮನ್‌ವೆಲ್ತ್ ಆಫ್ ಡೊಮಿನಿಕಾದ ಅಧ್ಯಕ್ಷ ಸಿಲ್ವಾನಿ ಬರ್ಟನ್ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.
ಫೆಬ್ರವರಿ 2021 ರಲ್ಲಿ, ಭಾರತವು ಡೊಮಿನಿಕಾಗೆ 70,000 ಡೋಸ್ ಅಸ್ಟ್ರಾಜೆನೆಕಾ ಕೋವಿಡ್ -19 ಲಸಿಕೆಯನ್ನು ಒದಗಿಸಿತು, ಇದು ನೆರೆಯ ಕೆರಿಬಿಯನ್ ದೇಶಗಳಿಗೆ ಸಹಾಯ ಮಾಡಲು ಡೊಮಿನಿಕಾಗೆ ಅವಕಾಶ ಮಾಡಿಕೊಟ್ಟ ಮಹತ್ವದ ಕೊಡುಗೆಯಾಗಿದೆ. ಡೊಮಿನಿಕಾ ಮತ್ತು ವಿಶಾಲ ಪ್ರದೇಶದೊಂದಿಗೆ ಪ್ರಧಾನಿ ಮೋದಿಯವರ ಒಗ್ಗಟ್ಟಿಗೆ ಡೊಮಿನಿಕಾ ಕೃತಜ್ಞತೆಯನ್ನು ಈ ಪ್ರಶಸ್ತಿ ಮೂಲಕ ವ್ಯಕ್ತಪಡಿಸುತ್ತದೆ ಎಂದು ಡೊಮಿನಿಕಾ ಪ್ರಧಾನಿ ರೂಸ್‌ವೆಲ್ಟ್ ಸ್ಕೆರಿಟ್ ಹೇಳಿದ್ದಾರೆ.