ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ 2023ರ ಜೂನ್ 6ರಂದು ರಾಜ್ಯಾದ್ಯಂತ ಗೃಹಲಕ್ಷ್ಮಿ ಯೋಜನೆ ಜಾರಿಗೊಳಿಸಿದೆ.
ಈ ಯೋಜನೆಯಲ್ಲಿ 1.21 ಕೋಟಿ ಮಹಿಳೆಯರಿಗೆ ಪ್ರತಿ ತಿಂಗಳು ₹2000 ಹಣ (ಕಂತುಗಳಲ್ಲಿ) ಪಾವತಿಯಾಗುತ್ತಿದೆ.
ಇಂದಿಗೂ ಮಹಿಳೆಯರಿಗೆ ಎನ್‌ಪಿಸಿಐ ತಾಂತ್ರಿಕ ತೊಡಕು ಆಗಾಗ ಕಾಣಿಸಿಕೊಳ್ಳುತ್ತಿದೆ. ಇದೇ ಕಾರಣಕ್ಕೆ ನೋಂದಣಿಯಾದ ನಾಲ್ಕು ಲಕ್ಷಕ್ಕೂ ಅಧಿಕ ಮಹಿಳೆಯರಿಗೆ ಹಣ ಡಿಬಿಟಿ
ಮೂಲಕ ಪಾವತಿ ಆಗುತ್ತಿಲ್ಲ.