ಕರ್ನಾಟಕಕ್ಕೆ ಕಾಲಿಟ್ಟ ಎಬಿಡಿ ಐಕಾನಿಕ್ ವೈಟ್ ವಿಸ್ಕಿ..!

ಬೆಂಗಳೂರು,  : ಭಾರತದ 3ನೇ ಅತಿದೊಡ್ಡ ಸ್ಪಿರಿಟ್ಸ್ ಕಂಪನಿ ಅಲೈಡ್ ಬ್ಲೆಂಡರ್ಸ್ ಆಂಡ್ ಡಿಸ್ಟಿಲ್ಲರ್ಸ್ ಲಿಮಿಟೆಡ್ (ಎಬಿಡಿಎಲ್) ತನ್ನ ಐಕಾನಿಕ್ ವೈಟ್ ವಿಸ್ಕಿ ಅನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡುವ ಘೋಷಣೆ ಮಾಡಿದೆ.
ಐಕಾನಿಕ್ ವೈಟ್ ಅನ್ನು ವಿಶ್ವದ ಅತಿವೇಗವಾಗಿ ಬೆಳೆಯುತ್ತಿರುವ ಸ್ಪಿರಿಟ್ಸ್ ಬ್ರ್ಯಾಂಡ್ ಎಂದು ಪರಿಗಣಿಸಲಾಗಿದೆ. ಇದೇ ವೇಳೆ, ಇಡೀ ದೇಶದ ವಿವಿಧ ಭಾಗದಲ್ಲಿರುವ ವಿಸ್ಕಿ ಪ್ರಿಯರ ಪ್ರೀತಿಯನ್ನೂ ಇದು ಗಳಿಸುತ್ತಿದೆ.
ಕರ್ನಾಟಕದ P&A ಸ್ಪಿರಿಟ್ ಮಾರ್ಕೆಟ್ನಲ್ಲಿ ಗಮನಾರ್ಹ ಪಾಲನ್ನು ಪಡೆದುಕೊಳ್ಳಲು ಐಕಾನಿಕ್ ವೈಟ್ ವಿಸ್ಕಿ ಸೂಕ್ತ ಅವಕಾಶವನ್ನು ಹೊಂದಿದ್ದು, ಗ್ರಾಹಕರಿಗೆ ವಿಸ್ಕಿ ಕುಡಿಯುವ ಅನುಭವವನ್ನೂ ಇದು ಉದ್ದೀಪಿಸುತ್ತಿದೆ.
ವಿಸ್ಕಿ ಅನುಭವದಲ್ಲಿ ಸೊಫಿಸ್ಟಿಕೇಶನ್ ಮತ್ತು ರಿಫೈನ್ಮೆಂಟ್ ಅನ್ನು ಬಯಸುವವರಿಗೆಂದು ಐಕಾನಿಕ್ ವಿಸ್ಕಿ ಅನ್ನು ರೂಪಿಸಲಾಗಿದೆ. ಬೋರ್ಬನ್ ಓಕ್ ಕ್ಯಾಸ್ಕ್ಗಳಲ್ಲಿ ಹಳೆಯದಾಗಿಸಿದ, ಆಮದು ಮಾಡಿದ ಸ್ಕಾಚ್ ಮಾಲ್ಟ್ ಮತ್ತು ಭಾರತೀಯ ಧಾನ್ಯದ ಸ್ಪಿರಿಟ್ಸ್ನ ಮಿಶ್ರಣ ಇದಾಗಿದೆ. ಉನ್ನತ ಗುಣಮಟ್ಟ ಮತ್ತು ಉತ್ತಮ ಸ್ವಾದವನ್ನು ಒದಗಿಸುವ ರೀತಿಯಲ್ಲಿ ಈ ಮಿಶ್ರಣವನ್ನು ರೂಪಿಸಲಾಗಿದ್ದು, ಸ್ಫರ್ಧಾತ್ಮಕ P&A ವಿಭಾಗದಲ್ಲಿ ವಿಭಿನ್ನವಾಗಿ ನಿಲ್ಲುತ್ತದೆ.
ಕರ್ನಾಟಕದಲ್ಲಿ ಸ್ಪಿರಿಟ್ ಉದ್ಯಮದಲ್ಲಿ 80% ಕ್ಕೂ ಹೆಚ್ಚನ್ನು ವಿಸ್ಕಿ ಹೊಂದಿದ್ದು, ಐಕಾನಿಕ್ ವೈಟ್ ಅನ್ನು ಪರಿಚಯಿಸುವುದು ಎಬಿಡಿಯ ಪ್ರಮುಖ ಹೆಜ್ಜೆಯಾಗಿದೆ. P&A ವಲಯದಲ್ಲಿ ಮಹತ್ವದ ಪಾತ್ರ ವಹಿಸಲು ಮತ್ತು ಕರ್ನಾಟಕದ ಪೋರ್ಟ್ಫೋಲಿಯೋವನ್ನು ಪ್ರೀಮಿಯಂ ಆಗಿಸುವ ಗುರಿಯನ್ನು ಹೊಂದಿದೆ.
ಅಲೈಡ್ ಬ್ಲೆಂಡರ್ಸ್ ಮತ್ತು ಡಿಸ್ಟಿಲ್ಲರ್ಸ್ನಲ್ಲಿನ ಮುಖ್ಯ ಅನ್ವೇಷಣೆ ಮತ್ತು ಸ್ಟ್ರಾಟಜಿ ಅಧಿಕಾರಿಯಾಗಿರುವ ಬಿಕ್ರಮ್ ಬಸು ಹೇಳುವಂತೆ “ಕರ್ನಾಟಕದಲ್ಲಿ ಐಕಾನಿಕ್ ವೈಟ್ ವಿಸ್ಕಿ ಅನ್ನು ಬಿಡುಗಡೆ ಮಾಡಿರುವುದು, ಪ್ರತಿಷ್ಠೆಯ ಜೊತೆಗೆ ವಿಶ್ವದರ್ಜೆಯ ಕೊಡುಗೆಗಳನ್ನು ಒದಗಿಸುವ ಎಬಿಡಿ ಬದ್ಧತೆಯನ್ನು ಪ್ರತಿನಿಧಿಸುತ್ತದೆ. ಪ್ರಮುಖ ಮಾರುಕಟ್ಟೆಗಳಲ್ಲಿ ವಿಸ್ಕಿ ಪ್ರಿಯರ ಆಸಕ್ತಿಯನ್ನು ಪೂರೈಸುವುದಕ್ಕೆ ಸೂಕ್ತವಾಗುವಂತೆ ಈ ಉತ್ಪನ್ನವನ್ನು ವಿನ್ಯಾಸ ಮಾಡಲಾಗಿದೆ.”
ಅಲೈಡ್ ಬ್ಲೆಂಡರ್ಸ್ ಆಂಡ್ ಡಿಸ್ಟಿಲ್ಲರ್ಸ್ನ ಮ್ಯಾನೇಜಿಂಗ್ ಡೈರೆಕ್ಟರ್ ಅಲೋಕ್ ಗುಪ್ತಾ ಹೇಳುವಂತೆ “ಐಕಾನಿಕ್ ವೈಟ್ ವಿಸ್ಕಿ ಮೂಲಕ, ಡಿಲಕ್ಸ್ ಸೆಗ್ಮೆಂಟ್ನಲ್ಲಿ ಉನ್ನತ ಉತ್ಪನ್ನಗಳಿಗೆ ಸ್ಪಷ್ಟ ಬೇಡಿಕೆಯನ್ನು ನಾವು ಪೂರೈಸುತ್ತಿದ್ದೇವೆ. ಗ್ರಾಹಕರು ಸ್ಮರಣಾರ್ಹ ಅನುಭವವನ್ನು ಹೊಂದುವುದಕ್ಕೆ ಬಯಸುತ್ತರುವ ವಲಯದಲ್ಲಿ ಅದ್ಭುತ ಮೌಲ್ಯವನ್ನು ಒದಗಿಸುವುದಕ್ಕೆ ನಮ್ಮ ಬದ್ಧತೆಯನ್ನು ಇದು ಪ್ರತಿಬಿಂಬಿಸುತ್ತದೆ.
ರಾಜ್ಯಾದ್ಯಂತ ಬ್ರ್ಯಾಂಡ್ ನಾಲ್ಕು ವಿಭಿನ್ನ ಎಸ್ಕೆಯುಗಳಲ್ಲಿ ಲಭ್ಯವಿರುತ್ತದೆ – 750 ಮಿ.ಲೀ ₹970, 375 ಮಿ.ಲೀ. ₹485, 180 ಮಿ.ಲೀ, ರೂ. 235 ಹಾಗೂ 90 ಮಿ.ಲೀ ₹120 ಆಗಿದೆ.
ಐಕಾನಿಕ್ ವೈಟ್ ಈಗಾಗಲೇ ಭಾರತದ ಮಾರ್ಕೆಟ್ಗಳಾದ ಮಹಾರಾಷ್ಟ್ರ, ಹರ್ಯಾಣ, ಮಧ್ಯಪ್ರದೇಶ, ರಾಜಸ್ಥಾನ, ಹಿಮಾಚಲ ಪ್ರದೇಶ, ಚಂಡೀಗಢ, ಗೋವಾ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ದೆಹಲಿ ಮತ್ತು ಇತರೆ ಸೇರಿದಂತೆ 22 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಭ್ಯವಿದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement