ಶೀತದಿಂದ ಮೂಗು ಕಟ್ಟಿ ಮಕ್ಕಳು ಚಡಪಡಿಸುತ್ತಿದ್ದಾರೆಯೇ ಈ ಟ್ರಿಕ್ಸ್ ಫಾಲೋ ಮಾಡಿ

ಚಳಿಗಾಲವಾದ್ರೆ ಸಾಕು ಮಕ್ಕಳಿಗೆ ಸೀನು, ಕೆಮ್ಮು, ಶೀತ ಸಾಮಾನ್ಯ. ಇದರೊಂದಿಗೆ ಮೂಗು ಕಟ್ಟುವಿಕೆಯೂ ಇರುತ್ತದೆ. ಮಕ್ಕಳಿಗೆ ಶೀತವಾದರೆ ಪೋಷಕರಿಗೂ ಕಷ್ಟ. ಮಕ್ಕಳು ಸರಿಯಾಗಿ ಊಟ ಮಾಡುವುದಿಲ್ಲ, ನಿದ್ದೆ ಮಾಡುವುದಿಲ್ಲ. ಜೊತೆಗೆ ಯಾವಾಗಲೂ ಅಳುತ್ತಿರುತ್ತಾರೆ. ಔಷಧಿ ಕೊಟ್ಟರೂ ಶೀತ ಬೇಗನೆ ವಾಸಿಯಾಗುವುದಿಲ್ಲ. ಆದರೆ ಕೆಲವು ಮನೆಮದ್ದುಗಳಿಂದ ಮಕ್ಕಳ ಶೀತ ಮತ್ತು ಕೆಮ್ಮು ಸಂಪೂರ್ಣ ಗುಣಪಡಿಸಬಹುದು. ಅವು ಯಾವುವು ಎಂದು ತಿಳಿದುಕೊಳ್ಳೋಣ. ಮಕ್ಕಳ ಮೂಗು ಸ್ವಚ್ಛಗೊಳಿಸಲು ಮತ್ತು ಅವರಿಗೆ ಆರಾಮ ನೀಡಲು ಸಹಾಯ ಮಾಡುವ ಪರಿಣಾಮಕಾರಿ ವಿಧಾನಗಳು ಇಲ್ಲಿವೆ. ಇವುಗಳನ್ನು ಪ್ರಯತ್ನಿಸಿದರೆ ಮಕ್ಕಳಿಗೆ ಖಂಡಿತವಾಗಿಯೂ ಆರಾಮ ಸಿಗುತ್ತದೆ.

1. ಹ್ಯೂಮಿಡಿಫೈಯರ್: ಮಕ್ಕಳಿಗೆ ಶೀತವಾದಲ್ಲಿ ಮನೆಯಲ್ಲಿ ಹ್ಯೂಮಿಡಿಫೈಯರ್(ಕೋಣೆ ಅಥವಾ ಕಟ್ಟಡದ ಗಾಳಿಯಲ್ಲಿ ನೀರಿನ ಆವಿಯ ಪ್ರಮಾಣವನ್ನು ಹೆಚ್ಚಿಸುವ ಸಾಧನ,) ಇಡಬೇಕು. ಹ್ಯೂಮಿಡಿಫೈಯರ್ ಗಾಳಿಗೆ ತೇವಾಂಶವನ್ನು ಸೇರಿಸುತ್ತದೆ. ಇದು ಮಕ್ಕಳಿಗೆ ಸರಿಯಾಗಿ ಉಸಿರಾಡಲು ಸಹಾಯ ಮಾಡುತ್ತದೆ. ಗಾಳಿ ಒಣಗಿದ್ದಾಗ ಮೂಗಿನಲ್ಲಿ ಹೆಚ್ಚು ಕಿರಿಕಿರಿ ಉಂಟಾಗುತ್ತದೆ. ಮನೆಯಲ್ಲಿ ಹ್ಯೂಮಿಡಿಫೈಯರ್ ಇದ್ದರೆ ಆ ತೊಂದರೆ ಇರುವುದಿಲ್ಲ. ಮೂಗು ಮುಕ್ತವಾಗಿ ಉಸಿರಾಡಲು ಸಹಾಯ ಮಾಡುತ್ತದೆ.

2. ಹೈಡ್ರೇಟೆಡ್ ಆಗಿರಿಸುವುದು… ಶೀತವಾದಾಗ ಮಕ್ಕಳ ದೇಹವನ್ನು ಹೈಡ್ರೇಟೆಡ್ ಆಗಿ ಇರಿಸಬೇಕು. ಇದಕ್ಕಾಗಿ ನಿಯಮಿತವಾಗಿ ನೀರು ಕುಡಿಸಬೇಕು. ಇದರಿಂದ ಶೀತದ ತೀವ್ರತೆ ಕಡಿಮೆಯಾಗುವ ಸಾಧ್ಯತೆಯಿದೆ. ಇದು ಸುಲಭವಾಗಿ ಉಸಿರಾಡಲು ಸಹಾಯ ಮಾಡುತ್ತದೆ. ಗಂಟಲು ನೋವು ಕೂಡ ಇರುವುದಿಲ್ಲ.

Advertisement

3. ಸಲೈನ್ ನಾಸಲ್ ಡ್ರಾಪ್ಸ್ ಪ್ರಯತ್ನಿಸಿ : ಸಲೈನ್ ಡ್ರಾಪ್ಸ್ ಅಥವಾ ಸ್ಪ್ರೇಗಳು ಶಿಶುವಿನ ಮೂಗಿನ ಹೊಳ್ಳೆಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುವ ಸೌಮ್ಯ ವಿಧಾನ. ಸಲೈನ್ ದ್ರಾವಣವು ಲೋಳೆಯನ್ನು ಸಡಿಲಗೊಳಿಸಲು ಮತ್ತು ತೆಳುಗೊಳಿಸಲು ಸಹಾಯ ಮಾಡುತ್ತದೆ, ಇದು ಹೆಚ್ಚು ಸುಲಭವಾಗಿ ಹೊರ ಹೋಗಲು ಅನುವು ಮಾಡಿಕೊಡುತ್ತದೆ. ತಕ್ಷಣದ ಪರಿಹಾರಕ್ಕಾಗಿ ಮೂಗಿನ ಹೊಳ್ಳೆಗಳಲ್ಲಿ ಕೆಲವು ಹನಿಗಳನ್ನು ಹಾಕಿ

4.ಆವಿ ಪಡೆಯುವುದು: ನಿಯಮಿತವಾಗಿ ಬಿಸಿನೀರಿನ ಆವಿಯನ್ನು ಪಡೆಯುವುದರಿಂದ ಮೂಗು ಕಟ್ಟುವುದು ಕಡಿಮೆಯಾಗುವ ಸಾಧ್ಯತೆ ಹೆಚ್ಚು. ಹಾಗೂ ಸುಲಭವಾಗಿ ಉಸಿರಾಡಲು ಸಹಾಯ ಮಾಡುತ್ತದೆ.

5.ತಲೆಯ ಕೆಳಗೆ ಎತ್ತರದ ದಿಂಬು ಇಡುವುದು… ಶೀತವಾದಾಗ ಮಕ್ಕಳ ಗಂಟಲಿನ ಹಿಂಭಾಗದಲ್ಲಿ ಲೋಳೆ ಸಂಗ್ರಹವಾಗುತ್ತದೆ. ಇದು ಶೀತ ಮತ್ತು ಕೆಮ್ಮನ್ನು ಹೆಚ್ಚಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮಕ್ಕಳಿಗೆ ಮಲಗುವಾಗ ತಲೆಯ ಕೆಳಗೆ ಹೆಚ್ಚು ಎತ್ತರದ ದಿಂಬು ಇಡಬೇಕು. ಆಗ ಅವರಿಗೆ ಆರಾಮ ಸಿಗುತ್ತದೆ. ಚೆನ್ನಾಗಿ ನಿದ್ದೆ ಮಾಡುತ್ತಾರೆ. ಜೊತೆಗಡ ಬಿಸಿಯಾದ ಪಾನೀಯಗಳನ್ನು ಕುಡಿಸಬೇಕು. ಇತರೆ ಮನೆಮದ್ದುಗಳು… ಜೇನುತುಪ್ಪವು ಹೆಚ್ಚಿನ ಪರಿಹಾರವನ್ನು ನೀಡುತ್ತದೆ. ಆದ್ದರಿಂದ ನಿಮ್ಮ ಬೆರಳನ್ನು ಜೇನುತುಪ್ಪದಲ್ಲಿ ಅದ್ದಿ ನಿಮ್ಮ ಮಗುವಿಗೆ ದಿನಕ್ಕೆ ಎರಡು ಮೂರು ಬಾರಿ ನೆಕ್ಕಿಸಬೇಕು. ನಿಮ್ಮ ಮಗುವಿನ ವಯಸ್ಸು ಐದು ವರ್ಷಗಳಿಗಿಂತ ಹೆಚ್ಚಿದ್ದರೆ, ಒಂದು ಚಮಚ ದಾಲ್ಚಿನ್ನಿ ಪುಡಿಯನ್ನು ಬೆರೆಸಿ. ಓಮ ಮತ್ತು ತುಳಸಿ ಎಲೆಗಳನ್ನು ಕುದಿಸಿ, ಆ ನೀರನ್ನು ಕುಡಿಸುವುದರಿಂದ ಕೆಮ್ಮಿನಿಂದ ಪರಿಹಾರ ಸಿಗುತ್ತದೆ.

ಸಾಸಿವೆ ಎಣ್ಣೆಯನ್ನು ಬೆಳ್ಳುಳ್ಳಿಯೊಂದಿಗೆ ಬೆರೆಸಿ ಮಗುವಿನ ಎದೆ, ಬೆನ್ನು ಮತ್ತು ಕುತ್ತಿಗೆಗೆ ಮಸಾಜ್ ಮಾಡಬೇಕು. ಜೊತೆಗೆ ಮಗುವಿನ ಅಂಗೈ ಮತ್ತು ಪಾದಗಳಿಗೆ ಎಣ್ಣೆ ಹಚ್ಚಿದರೆ ಬೇಗನೆ ಪರಿಹಾರ ಸಿಗುತ್ತದೆ. ನಿಮ್ಮ ಮಗು ಸೀನುತ್ತಿದ್ದರೆ ಮತ್ತು ಕೆಮ್ಮುತ್ತಿದ್ದರೆ, ಹೈಡ್ರೇಟೆಡ್ ಆಗಿರುವುದು ಬಹಳ ಮುಖ್ಯ. ನಿಯಮಿತವಾಗಿ ನೀರು ಕುಡಿಯುವುದರಿಂದ ಶೀತದ ವಿರುದ್ಧ ಹೋರಾಡಲು, ಗಂಟಲಿನ ಕಿರಿಕಿರಿಯನ್ನು ಕಡಿಮೆ ಮಾಡಲು ಮತ್ತು ಸೋಂಕುಗಳನ್ನು ದೂರ ಮಾಡಲು ಸಹಾಯ ಮಾಡುತ್ತದೆ. ಬಿಸಿ ಸೂಪ್ ಕುಡಿಸಿದರೂ ಪರಿಹಾರ ಸಿಗುತ್ತದೆ. ಒಂದು ಲೋಟ ಬಿಸಿ ನೀರಿನಲ್ಲಿ ಒಂದು ಟೀ ಚಮಚ ಉಪ್ಪು ಹಾಕಿ ಕುಡಿಸಬೇಕು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement