ಮುಂಬೈ : ಬಿಜೆಪಿ ಮತ್ತು ಆರ್ಎಸ್ಎಸ್ಗೆ ಸಂವಿಧಾನವು ಖಾಲಿಯಾಗಿ ಕಾಣಬಹುದು. ಆದ್ರೆ ಕಾಂಗ್ರೆಸ್ ಮತ್ತು ಇಂಡಿಯಾ ಒಕ್ಕೂಟಕ್ಕೆ ಅದು ದೇಶದ ಡಿಎನ್ಎ ಎಂದು ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ.
ಮಹಾರಾಷ್ಟ್ರದ ನಂದೂರ್ಬಾರ್ನಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿ, ಸಂವಿಧಾನದ ಖಾಲಿ ಪ್ರತಿ ಎಂಬ ಬಿಜೆಪಿಯ ಟೀಕೆಗೆ ರಾಹುಲ್ ಗಾಂಧಿ ಪ್ರತ್ಯುತ್ತರ ನೀಡಿದರು.
ಈ ಹೋರಾಟವು ಸಿದ್ಧಾಂತದ ಹೋರಾಟ, ಒಂದು ಕಡೆ ಕಾಂಗ್ರೆಸ್ ಮತ್ತು ಇಂಡಿಯಾ ಒಕ್ಕೂಟ ಇದೆ ಇನ್ನೊಂದು ಕಡೆ ಬಿಜೆಪಿ-ಆರ್ಎಸ್ಎಸ್ ಇದೆ. ದೇಶವು ಸಂವಿಧಾನದ ಮೂಲಕ ನಡೆಯಬೇಕು ಎಂದು ನಾವು ಹೇಳುತ್ತೇವೆ. ಆದರೆ ಪ್ರಧಾನಿ ಏನನ್ನೂ ಬರೆಯದೆ ಖಾಲಿ ಪುಸ್ತಕ ಎಂದು ಹೇಳುತ್ತಾರೆ. ಈ ಪುಸ್ತಕವು ಆರ್ಎಸ್ಎಸ್-ಬಿಜೆಪಿಗೆ ಮಾತ್ರ ಖಾಲಿಯಾಗಿದೆ, ನಮಗೆ ಇದು ದೇಶದ ಡಿಎನ್ಎ ಎಂದರು.
ಸಂವಿಧಾನವು ಅಂಬೇಡ್ಕರ್, ಫುಲೆಜಿ, ಶಿವಾಜಿ ಮಹಾರಾಜ್, ಭಗವಾನ್ ಬುದ್ಧ, ಮಹಾತ್ಮ ಗಾಂಧಿ ಅವರ ಚಿಂತನೆಗಳನ್ನು ಒಳಗೊಂಡಿದೆ. ಇದು ನಮಗೆ ಬರೀ ಪುಸ್ತಕವಲ್ಲ, ನಮಗೆ ಇದು ಸಾವಿರಾರು ವರ್ಷಗಳ ಹಿಂದಿನ ಚಿಂತನೆ ಮತ್ತು ಅದರಲ್ಲಿ ಏನು ಬರೆಯಲಾಗಿದೆ ಅದಕ್ಕಾಗಿ ಭಾರತದಲ್ಲಿ ಜನರು ಸಾವಿರಾರು ವರ್ಷಗಳಿಂದ ಸಾಯುತ್ತಿದ್ದಾರೆ ಮತ್ತು ಹೋರಾಡುತ್ತಿದ್ದಾರೆ ಎಂದು ಅವರು ಹೇಳಿದರು.