ಕಾಲು ಮೇಲೆ ಕಾಲು ಹಾಕಿ ಕುಳಿತುಕೊಳ್ಳುವ ಅಭ್ಯಾಸವಿದೆಯೇ? ಹಾಗಿದ್ರೆ ಈ ಅಭ್ಯಾಸವನ್ನು ಇಂದೇ ಬಿಟ್ಟು ಬಿಡಿ…

WhatsApp
Telegram
Facebook
Twitter
LinkedIn

ಕೆಲ ಜನರಿಗೆ ಕಾಲು ಮೇಲೆ ಕಾಲು ಹಾಕಿ ಕುಳಿತುಕೊಳ್ಳುವ ಅಭ್ಯಾಸವಿರುತ್ತದೆ.

ನಿಮಗೂ ಈ ಅಭ್ಯಾಸವಿದೆಯೇ.? ಹಾಗಿದ್ರೆ ಈ ಅಭ್ಯಾಸವನ್ನು ಇಂದೇ ಬಿಟ್ಟು ಬಿಡಿ. ಕಾಲು ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದರಿಂದ (Sitting cross legged) ಕೆಲವು ಅನಾನುಕೂಲತೆಗಳಿವೆ.

ಬಹಳ ಸಮಯದವರೆಗೆ ಕಾಲು ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದರಿಂದ ಮೇಲಿನ ಕಾಲಿನ ಭಾರ (Leg weight) ಕೆಳಗಿನ ಕಾಲಿನ ನರಗಳನ್ನು ಒತ್ತುವುದು (Pressing the nerves). ಇದರಿಂದಾಗಿ ಈ ನರಗಳ ಮೂಲಕ ಹರಿಯಬೇಕಾಗಿರುವ ರಕ್ತವನ್ನು ಹೆಚ್ಚಿನ ಒತ್ತಡದಲ್ಲಿ ದೂಡಿಕೊಡಬೇಕಾಗುತ್ತದೆ. ಪರಿಣಾಮ ತನ್ಮೂಲಕ ದೇಹದ ರಕ್ತದೊತ್ತಡ ಹೆಚ್ಚಾಗುತ್ತದೆ.

ಈ ರೀತಿ ಕುಳಿತುಕೊಳ್ಳುವುದರಿಂದ ಪೆಲ್ವಿಕ್​ ಮೂಳೆಗಳ ಜೋಡಣೆ ಮತ್ತು ಸ್ನಾಯುವಿನ ಉದ್ದದಲ್ಲಿ ದೀರ್ಘಕಾಲೀನ ಬದಲಾವಣೆಗಳಿಗೆ (Long term changes) ಕಾರಣವಾಗಬಹುದು.

ಸ್ನಾಯುಗಳು ಮತ್ತು ಪೃಷ್ಠದ ಮೇಲೆ ದೀರ್ಘಕಾಲದ ಭಾರದಿಂದಾಗಿ ಹೊಟ್ಟೆಯು ಅದರ ಹೊಂದಾಣಿಕೆಯ ಗುಣಗಳನ್ನು ಕಳೆದುಕೊಂಡು ದುರ್ಬಲವಾಗುತ್ತದೆ (weak). ಇದರಿಂದ ದೇಹದ ಭಾಗಗಳು ಅಸಹಜವಾಗಿ ರೂಪುಗೊಳ್ಳುವ ಅಪಾಯವಿದೆ.

ಕಿಬ್ಬೊಟ್ಟೆಯ ಸ್ನಾಯುಗಳು (Abdominal muscles) ಮತ್ತು ಕೆಳ ಬೆನ್ನಿನಲ್ಲಿಯೂ ಬದಲಾವಣೆಗಳು ಆಗಬಹುದು.

ನರಗಳು ಕ್ರಮೇಣ ತಮ್ಮ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತವೆ. ಅಲ್ಲದೇ ಮೆದುಳು ಬಳ್ಳಿಯಿಂದ ಬರುವ ಸೂಚನೆಗಳನ್ನು ಪೂರ್ಣವಾಗಿ ಪಡೆಯಲು ಅಸಮರ್ಥವಾಗಿ ಚಲನೆ ಸಾಧ್ಯವಾಗದೇ ಇರಬಹುದು.

ದೇಹದ ಕೆಳಭಾಗಕ್ಕೆ ಹರಿಯಬೇಕಾಗಿದ್ದ ರಕ್ತ ಮುಂದೆ ಹೋಗದೇ ನಿಂತಾಗ ಇದನ್ನು ಆಧರಿಸಿದ ಇತರ ವ್ಯವಸ್ಥೆಗಳೂ ರಕ್ತ ಪರಿಚಲನೆಯ ಮೇಲೆ ಋಣಾತ್ಮಕ ಪರಿಣಾಮ (Negative effect) ಬೀರುತ್ತವೆ.

ಪುರುಷರು ಬಹಳ ಸಮಯದವರೆಗೆ ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಂಡರೆ ಅದರಿಂದ ವೃಷಣಗಳ ಮೇಲೆ ಒತ್ತಡ ಬೀಳುವುದು. ಇದರಿಂದ ಪುರುಷತ್ವ (masculinity) ನಷ್ಟವಾಗುವ ಅಪಾಯವಿದೆ ಎನ್ನಲಾಗಿದೆ.

 

BC Suddi   About Us
For Feedback - [email protected]

Related News

LATEST Post

WhatsApp Icon Telegram Icon