ಹೈದರಾಬಾದ್ : ತೆಲುಗು ನಟ ನಾಗ ಚೈತನ್ಯ ಹಾಗೂ ಶೋಭಿತಾ ಧುಲಿಪಾಲ್ ಅವರ ಮದುವೆ ಡಿಸೆಂಬರ್ನಲ್ಲಿ ನಡೆಯಲಿದೆ. ಇದೀಗ ಇವರಿಬ್ಬರ ಮದುವೆಯ ಆಮಂತ್ರಣ ಪತ್ರಿಕೆ ವೈರಲ್ ಆಗಿದೆ.
ನಾಗ ಚೈತನ್ಯ ಹಾಗೂ ಶೋಭಿತಾ ಪರಸ್ಪರ ಪ್ರೀತಿಸುತ್ತಿದ್ದರು. ಇವರಿಬ್ಬರು ಸಾಕಷ್ಟು ಸುತ್ತಾಟ ನಡೆಸಿ ಸುದ್ದಿಯಾಗಿದ್ದರು. ಬಳಿಕ ಇದೇ ಆಗಸ್ಟ್ನಲ್ಲಿ ನಾಗ ಚೈತನ್ಯ ಹಾಗೂ ಶೋಭಿತಾ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದರು. ನಾಗ ಚೈತನ್ಯ ಹಾಗೂ ಶೋಭಿತಾ ಡಿಸೆಂಬರ್ 4ರಂದು ವಿವಾಹ ಆಗಲಿದ್ದಾರೆ ಎಂಬ ಆಮಂತ್ರಣ ಪತ್ರಿಕೆ ವೈರಲ್ ಆಗಿದೆ. ಇದನ್ನು ನೋಡಿ ಅಭಿಮಾನಿ ಖುಷಿಪಟ್ಟಿದ್ದಾರೆ.
ಶೋಭಿತಾ ಹಾಗೂ ನಾಗ ಚೈತನ್ಯ ವಿವಾಹ ಆಮಂತ್ರಣ ಸಿಕ್ಕವರು ಅದರ ಫೋಟೋನ ವೈರಲ್ ಮಾಡಿದ್ದಾರೆ. ನಾಗ ಚೈತನ್ಯ ಹಾಗೂ ಶೋಭಿತಾ ಬಂಜಾರಾ ಹಿಲ್ಸ್ ನಲ್ಲಿರುವ ಅನುಪಮಾ ಸ್ಟುಡಿಯೋದಲ್ಲಿಯೇ ಮದುವೆ ಆಗುತ್ತಿದ್ದಾರೆ. ಸದ್ಯ ಇವರಿಬ್ಬರ ಮದುವೆಗೆ ಸಿದ್ಧತೆ ನಡೆಯುತ್ತಿದೆ. ಈ ಮದುವೆಗೆ ಹಲವು ಸೆಲೆಬ್ರಿಟಿಗಳು ಸಾಕ್ಷಿಯಾಗಲಿದ್ದಾರೆ.