ಬೆಂಗಳೂರು : ಬಿಪಿಎಲ್ ಕಾರ್ಡ್ ರದ್ದತಿ ವಿಚಾರದಲ್ಲಿ ಎದ್ದಿರುವ ಗೊಂದಲಕ್ಕೆ ಅಹಾರ ಸಚಿವ ಕೆ ಹೆಚ್ ಮುನಿಯಪ್ಪ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ವಿಧಾನಸೌಧದಲ್ಲಿ ಸುದ್ದಿಗೊಷ್ಠಿ ನಡೆಸಿ ಮಾಹಿತಿ ನೀಡಿದ ಕೆ ಹೆಚ್ ಮುನಿಯಪ್ಪ, ಆದಾಯ ತೆರಿಗೆ ಪಾವತಿ, ಸರ್ಕಾರಿ ನೌಕಕರನ್ನು ಹೊರತುಪಡಿಸಿ ಉಳಿದ ಬೇರೆ ಯಾವ ಕಾರ್ಡ್ಗಳನ್ನ ರದ್ದು ಪಡಿಸೋದಿಲ್ಲ ಎಂದು ತಿಳಿಸಿದರು.
ಸರ್ಕಾರ ಯಾವುದೇ ಅರ್ಹ ಬಿಪಿಎಲ್, ಎಪಿಎಲ್ ಕಾರ್ಡ್ಗಳನ್ನು ರದ್ದುಪಡಿಸುವುದಿಲ್ಲ, 66% ಬಿಪಿಎಲ್ ಕಾರ್ಡ್ಗಳಲ್ಲಿ ಅನರ್ಹರನ್ನ ಮಾತ್ರ ಎಪಿಎಲ್ಗೆ ಸೇರಿಸಲಾಗಿದೆ. ತೆರಿಗೆ ಪಾವತಿದಾರರು, ಸರ್ಕಾರಿ ನೌಕರರ ಕುಟುಂಬಗಳ ಬಿಪಿಎಲ್ ಕಾರ್ಡ್ಗಳನ್ನ ಮಾತ್ರ ಎಪಿಎಲ್ಗೆ ಸೇರಿಸಲಾಗಿದೆ. ಅನರ್ಹ ಇರಬಹುದೆನ್ನುವ ಕಾರ್ಡ್ಗಳನ್ನ ಮಾತ್ರ ಅಮಾನತ್ತಿನಲ್ಲಿಡಲಾಗಿದೆ ಎಂದು ಹೇಳಿದರು. HRMS ತಂತ್ರಾಂಶದಲ್ಲಿರುವ ಸರ್ಕಾರಿ ನೌಕರರು ಪಡಿತರ ಚೀಟಿ ಪಡೆದಿರುವ ಮಾಹಿತಿ ಪಡೆದು ಅನರ್ಹ ಇರುವ ಕಾರ್ಡ್ ಎಂದು ಎಪಿಎಲ್ ಗೆ ಸೇರಿಸಲಾಗಿದೆ.
ಒಂದು ವೇಳೆ ಬಿಪಿಎಲ್ ಗೆ ಅರ್ಹರಿದ್ದು, ಎಪಿಎಲ್ ಆಗಿದ್ರೆ ಅಂತವರಿಗೆ ಪುನರ್ ಸ್ಥಾಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೇಂದ್ರ ಸರ್ಕಾರದ ಮಾನದಂಡಗಳ ಪ್ರಕಾರ ಅನರ್ಹರ ಕಾರ್ಡ್ಗಳನ್ನು ಪರೀಷ್ಕರಿಸಲಾಗಿದೆ. ರಾಜ್ಯದಲ್ಲಿ ಒಟ್ಟು 1,50,59,431 ಒಟ್ಟು ಕಾರ್ಡ್ ಗಳಿವೆ. ಅವರಲ್ಲಿ ಆದಾಯ ತೆರಿಗೆ ಹಾಗೂ ಸರ್ಕಾರಿ ನೌಕರರು ಹೊಂದಿರುವ ಒಟ್ಟು ಎಪಿಎಲ್ ಕಾರ್ಡ್ 1,02,509 ಕಾರ್ಡ್ಗಳಿವೆ. ಈ ಪೈಕಿ 8447 ಮಾತ್ರ ಕಾರ್ಡ್ಗಳು ಮಾತ್ರ ಅಮಾನತು ಮಾಡಲಾಗಿದೆ. ಆದಾಯ ತೆರಿಗೆ ಪಾವತಿ ಮಾಡುತ್ತಿರುವ 98473 ಕಾರ್ಡ್, ಸರ್ಕಾರಿ ನೌಕರರದ್ದು 4036. ಕಾರ್ಡ್ ಗಳು, ಇದನ್ನ ಹೊರತು ಪಡಿಸಿ ಬೇರೆ ಕಾರ್ಡ್ಗಳ ಪರಿಷ್ಕರಣೆ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ಒಟ್ಟಾರೆ ಬಿಪಿಎಲ್ ಕಾರ್ಡ್ ಯಾರದ್ದು ರದ್ದಾಗಿತ್ತು ಅವೆಲ್ಲವನ್ನೂ ಇನ್ನೊಂದು ವಾರದಲ್ಲಿ ವಾಪಸ್ ಸರಿಪಡಿಸಲಾಗುತ್ತೆ ಎಂದು ಸ್ಪಷ್ಟನೆ ನೀಡಿದರು.