ಬೆಂಗಳೂರು : 7 ದಿನದೊಳಗೆ ಬಿಪಿಎಲ್ ಕಾರ್ಡ್ ರದ್ದಾದವರಿಗೆ ಅದೇ ಐಡಿಯಲ್ಲಿ ಲಾಗಿನ್ಗೆ ಅವಕಾಶ ಮಾಡಿಕೊಡುತ್ತೇವೆ ಎಂದು ಆಹಾರ ಖಾತೆಯ ಸಚಿವ ಮುನಿಯಪ್ಪ ಹೇಳಿದ್ದಾರೆ.
ಬಿಪಿಎಲ್ ಕಾರ್ಡ್ ರದ್ದತಿಗೆ ಸಂಬಂಧಿಸಿದಂತೆ ಉಂಟಾಗಿರುವ ಗೊಂದಲಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಇಂದು ಸುದ್ದಿಗೋಷ್ಠಿಯನ್ನು ಮುನಿಯಪ್ಪ ಸುದ್ದಿಗೋಷ್ಟಿ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ರೇಷನ್ ಕಾರ್ಡ್ ಗೊಂದಲಕ್ಕೆ ಅಧಿಕಾರಿಗಳಲ್ಲ, ನಾನೇ ಹೊಣೆ. 7 ದಿನದೊಳಗೆ ಬಿಪಿಎಲ್ ಕಾರ್ಡ್ ರದ್ದಾದವರಿಗೆ ಅದೇ ಐಡಿಯಲ್ಲಿ ಲಾಗಿನ್ಗೆ ಅವಕಾಶ ಮಾಡಿಕೊಡುತ್ತೇವೆ. ತೆರಿಗೆದಾರರು ಹಾಗೂ ಸರ್ಕಾರಿ ನೌಕರರ ಕಾರ್ಡ್ ರದ್ದು ಮಾಡಿದ್ದೇವೆ ಹೊರತು ಬೇರೆಯವರ ಕಾರ್ಡ್ ಯಥಾವತ್ತಾಗಿ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.
ಬಿಪಿಎಲ್ನಿಂದ ವಂಚಿತರಾಗಿರುವ ಅರ್ಹರು ಯಾರೇ ಇದ್ದರೂ ಒಂದು ವಾರದೊಳಗೆ ಅವರನ್ನೆಲ್ಲಾ ಬಿಪಿಎಲ್ ವ್ಯಾಪ್ತಿಗೆ ತಂದು ಸಮಸ್ಯೆಯನ್ನು ಸರಿಪಡಿಸುತ್ತೇವೆ. ಬಿಪಿಎಲ್ಗೆ ಅನರ್ಹರೆಂದು ಕಂಡು ಬಂದವರನ್ನು ಎಪಿಎಲ್ಗೆ ಸೇರಿಸಲಾಗಿದೆ. ಬಿಪಿಎಲ್ಗೆ ಅರ್ಹರಿದ್ದು ಎಪಿಎಲ್ ಗೆ ಸೇರಿಸಿದ್ದರೆ ಅವರನ್ನು ಪುನ: ಬಿಪಿಎಲ್ಗೆ ಸೇರಿಸುತ್ತೇವೆ ಎಂದರು ಸ್ಪಷ್ಟನೆ ನೀಡಿದರು.