ಮಾರುತಿ ನಗರ ಬಡಾವಣೆ ನಿವಾಸಿಗಳ ಗೋಳು ಕೇಳುವವರು ಯಾರು.?

WhatsApp
Telegram
Facebook
Twitter
LinkedIn

 

ಚಿತ್ರದುರ್ಗ : ರಸ್ತೆ ಸಂಪರ್ಕವಿಲ್ಲದೆ ಹಲವಾರು ವರ್ಷಗಳಿಂದಲೂ ತೊಂದರೆ ಅನುಭವಿಸುತ್ತಿರುವ ಮಾರುತಿ ನಗರ ಬಡಾವಣೆ ನಿವಾಸಿಗಳು ಗುರುವಾರ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಮೆದೇಹಳ್ಳಿ ರಸ್ತೆ ಪೂರ್ವ ಮತ್ತು ಚಿತ್ರದುರ್ಗ-ರಾಯದುರ್ಗ ರೈಲು ಮಾರ್ಗದ ದಕ್ಷಿಣಕ್ಕಿರುವ ಮಾರುತಿ ನಗರ ಬಡಾವಣೆಗೆ ರಸ್ತೆ ಸಂಪರ್ಕವಿಲ್ಲದಿರುವುದಿಂದ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಪ್ರತಿನಿತ್ಯವೂ ಶಾಲೆಗೆ ಹೋಗುವ ಮಕ್ಕಳು ಮೆದೇಹಳ್ಳಿ ರಸ್ತೆವರೆಗೆ ಬೆನ್ನಿಗೆ ಮಣ ಬಾರದ ಚೀಲಗಳನ್ನು ಹೊತ್ತುಕೊಂಡು ಹೋಗಬೇಕಿದೆ. ತುರ್ತು ಸಂದರ್ಭಗಳಲ್ಲಿ ಯಾರನ್ನಾದರೂ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕೆಂದರೆ ಆಟೋ, ಅಂಬ್ಯುಲೆನ್ಸ್ ಬರಲು ರಸ್ತೆಯಿಲ್ಲ. ಹಾಗಾಗಿ ಮೆದೇಹಳ್ಳಿ ರಸ್ತೆಯಿಂದ ಮಾರುತಿ ನಗರ ಬಡಾವಣೆಗೆ ರಸ್ತೆ ಸಂಪರ್ಕ ಕಲ್ಪಿಸುವಂತೆ ಅಪರ ಜಿಲ್ಲಾಧಿಕಾರಿಯವರಲ್ಲಿ ವಿನಂತಿಸಿದರು.

ವಿನಾಯಕ ಕ್ಷೇಮಾಭಿವೃದ್ದಿ ಸಂಘದ ಗೌರವಾಧ್ಯಕ್ಷ ದಿನೇಶ್ ಡಿ. ಅಧ್ಯಕ್ಷ ತಿರುಮಲಯ್ಯ ಎ.ಎನ್. ಉಪಾಧ್ಯಕ್ಷರುಗಳಾದ ನೂರುಲ್ಲಾ ಜಿ.ಬಿ. ವೆಂಕಟೇಶರೆಡ್ಡಿ, ಕಾರ್ಯದರ್ಶಿ ವೆಂಕಟೇಶ್ ಎನ್. ಜಂಟಿ ಕಾರ್ಯದರ್ಶಿ ವಿನಾಯಕ ಕೆ.ಎಂ. ಸಂಘಟನಾ ಕಾರ್ಯದರ್ಶಿ ರಾಮಾಂಜನೇಯ ಟಿ(ರಾಮು) ಹಾಗೂ ಪದಾಧಿಕಾರಿಗಳು ಈ ಸಂದರ್ಭದಲ್ಲಿದ್ದರು.

BC Suddi   About Us
For Feedback - [email protected]

Related News

LATEST Post

WhatsApp Icon Telegram Icon