ಚಿತ್ರದುರ್ಗ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಧಿಕಾರಕ್ಕೆ ಬಂದು ಒಂದೂವರೆ ವರ್ಷವಾಯಿತು. ಯಾವುದೇ ಆಭಿವೃದ್ದಿ ಕಾರ್ಯವಾಗುತ್ತಿಲ್ಲ, ಇದೊಂದು ಹಗರಣಗಳ ಸರ್ಕಾರವಾಗಿದೆ ಕಳೆದ 75 ವರ್ಷದ ಇತಿಹಾಸದಲ್ಲಿ ಈ ರೀತಿಯಾದ ಕೆಟ್ಟ ಸರ್ಕಾರ ಬಂದಿಲ್ಲ, ಜನ ದ್ರೋಹಿ ಸರ್ಕಾರವಾಗಿದೆ ಎಂದು ಸಂಸದರಾದ ಗೋವಿಂದ ಕಾರಜೋಳ ಹೇಳಿದರು.
ಚಿತ್ರದುರ್ಗ ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಾಳೆ ನ. 22 ರಂದು ಚಿತ್ರದುರ್ಗದಲ್ಲಿ ರಾಜ್ಯ ಸರ್ಕಾರದ ವಿರುದ್ದ ವಕ್ಷ ಆಸ್ತಿಯನ್ನು ಕಬಳಿಸುತ್ತಿರುವುದನ್ನು ಪ್ರತಿಭಟಿಸಿ ಬಿಜೆಪಿ ಚಿತ್ರದುರ್ಗ ಘಟಕದವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ರಾಜ್ಯ ಸರ್ಕಾರ ರಾಜ್ಯದ ಹಲವಡೆಗಳಲ್ಲಿ ಹಲವಾರು ವರ್ಷಗಳ ಹಿಂದಿನ ಆಸ್ತಿಯನ್ನು ವಕ್ಷ್ ಆಸ್ತಿಯನ್ನು ಘೋಷಣೆ ಮಾಡುತ್ತಿದೆ ಇದರಲ್ಲಿ ಹಲವಾರು ರೈತ ಜಮೀನುಗಳ ಪಹಣಿಯಲ್ಲಿ ವಕ್ಷ್ ಎಂದು ನಮೂದು ಮಾಡಲಾಗಿದೆ ಇದ್ದಲ್ಲದೆ ಹಲವಾರು ದೇವಾಲಯಗಳು ಮಠಗಳನ್ನು ಸಹಾ ವಕ್ಷ್ ಆಸ್ತಿ ಎಂದು ನಮೂದಿಸಲಾಗುತ್ತಿದೆ, ಇದರ ವಿರುದ್ದ ಬಿಜೆಪಿ ಹೋರಾಟವನ್ನು ಪ್ರಾರಂಭ ಮಾಡಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಧಿಕಾರಕ್ಕೆ ಬಂದು ಒಂದೂವರೆ ವರ್ಷವಾಯಿತು. ಯಾವುದೇ ಆಭಿವೃದ್ದಿ ಕಾರ್ಯವಾಗುತ್ತಿಲ್ಲ, ಇದೊಂದು ಹಗರಣಗಳ ಸರ್ಕಾರವಾಗಿದೆ ಕಳೆದ 75 ವರ್ಷದ ಇತಿಹಾಸದಲ್ಲಿ ಈ ರೀತಿಯಾದ ಕೆಟ್ಟ ಸರ್ಕಾರ ಬಂದಿಲ್ಲ, ಜನ ದ್ರೋಹಿ ಸರ್ಕಾರವಾಗಿದೆ ಎಂದು ದೂರಿದರು.
ಬಿಜಾಪುರದಲ್ಲಿ ಹಲವಾರು ಪೂರ್ವಿಜರು ಮಾಡಿದ ಆಸ್ತಿಯನ್ನು ವಕ್ಷ್ ತನ್ನ ಆಸ್ತಿಯನ್ನಾಗಿ ಮಾಡಿ ಪಹಣಿಯನ್ನು ನೀಡಿದೆ. ಸಚಿವ ಜಮೀರ ಆಹ್ಮದ್ ರವರು ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಆದೇಶವನ್ನು ನೀಡುತ್ತಿದ್ದ ಎಲ್ಲಾ ಆಸ್ತಿಗಳನ್ನು ವಕ್ಷ್ ಆಸ್ತಿಯನ್ನಾಗಿ ಬದಲಾಯಿಸುವಂತೆ ಸಭೆಯೊಂದರಲ್ಲಿ ಜಿಲ್ಲಾಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ ಎಂದರು.
ಇದು ಎಲ್ಲರಿಗೂ ತಿಳಿದ ವಿಷಯವಾಗಿದೆ. ರಾಜ್ಯದಲ್ಲಿ ವಕ್ಷ್ ಆಸ್ತಿ ಕಬಳಿಕೆ ಎಲ್ಲ ಕಡೆಗಳಲ್ಲಿಯೂ ಸಹಾ ಆಗಿದೆ. ಚಿತ್ರದುರ್ಗದಲ್ಲಿಯೂ ಸಹಾ ಎರಡು ಮೂರು ಕಡೆಗಳಲ್ಲಿ ಆಗಿದೆ ಎಂಬ ಮಾಹಿತಿ ಇದೆ. ಲೋಕಸಭೆಯಿಂದ ಸತ್ಯ ಶೋಧನಾ ಸಮಿತಿವತಿಯಿಂದ ಇದರ ಬಗ್ಗೆ ಪರಿಶೀಲನೆಯನ್ನು ಮಾಡಿ ವರದಿಯನ್ನು ನೀಡಲಾಗಿದೆ. ಬಿಜೆಪಿ ವಕ್ಷ್ ಅಸ್ತಿಯನ್ನು ಕಳೆದುಕೊಂಡವರ ಪರವಾಗಿ ಹೋರಾಟವನ್ನು ಪ್ರಾರಂಭ ಮಾಡಿದ ಮೇಲೆ ಮುಖ್ಯಮಂತ್ರಿಗಳು ಅದನು ವಾಪಾಸ್ಸ್ ಪಡೆಯವುದಾಗಿ ಬರೀ ಮಾತಿನಲ್ಲಿ ಹೇಳಿದ್ದಾರೆ. ಆದರೆ ಇದು ಮಾತಿನಲ್ಲಿ ಆಗುವುದಿಲ್ಲ ಕಾನೂನು ಪ್ರಕಾರ ಆಗಬೇಕಿದೆ ಎಂದು ತಿಳಿಸಿದರು.
ಗೋಷ್ಟಿಯಲ್ಲಿ ವಿಧಾನ ಪರಿಷತ್ವ ಸದಸ್ಯರಾದ ಕೆ.ಎಸ್.ನವೀನ್, ಜಿಲ್ಲಾಧ್ಯಕ್ಷರಾದ ಮುರಳಿ, ಮಾಜಿ ಶಾಸಕರಾದ ತಿಪ್ಪೇಸ್ವಾಮಿ ನೇರ್ಲಗುಂಟೆ, ಬಿಜೆಪಿ ಸದಸ್ಯತ್ವ ಅಭಿಯಾನದ ಉಸ್ತುವಾರಿಗಳಾದ ದತ್ತಾತ್ರೇಯ, ರೈತ ಮೋರ್ಚಾದ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜನ್, ನಗರಾಧ್ಯಕ್ಷ ನವೀನ್ ಚಾಲುಕ್ಯ, ರಾಮರೆಡ್ಡಿ, ಸ್ವಾಮಿ, ಶಿವಣ್ಣ, ನಾಗರಾಜ್ ಬೇದ್ರೇ ಭಾಗವಹಿಸಿದ್ದರು.