ಪ್ರತಿದಿನ ಒಂದು ನೆಲ್ಲಿಕಾಯಿ ಸೇವಿಸಿ, ಕಾಯಿಲೆಗಳಿಂದ ದೂರವಿರಿ..!

WhatsApp
Telegram
Facebook
Twitter
LinkedIn

ನೆಲ್ಲಿಕಾಯಿ ಅಥವಾ ಆಮ್ಲಾ ಸೇವನೆಯಿಂದ ಆಗುವ ಉಪಯೋಗಗಳು ಅಷ್ಟಿಷ್ಟಲ್ಲ.ತಿನ್ನೋದಿಕ್ಕೆ ಸ್ವಲ್ಪ ಒಗರು ಎನಿಸಿದರೂ ವಿಟಮಿನ್ ಸಿ ಹೊಂದಿರುವ ಅಕ್ಷಯ ಪಾತ್ರೆ ಈ ಹಣ್ಣು.

ಬನ್ನಿ ಹಾಗಾದ್ರೆ ಆಮ್ಲಾ ಸೇವನೆಯಿಂದಾಗುವ ಪ್ರಯೋಜನಗಳನ್ನು ನೋಡಿಕೊಂಡು ಬರೋಣ.

೧. ನಿಯಮಿತವಾಗಿ ನೆಲ್ಲಿಕಾಯಿ ತಿನ್ನುವುದರಿಂದ ಒಸಡುಗಳಲ್ಲಿ ರಕ್ತ ಬರುವುದನ್ನು ನಿಲ್ಲಿಸುತ್ತದೆ ಹಾಗೂ ಹಲ್ಲುಗಳನ್ನು ಗಟ್ಟಿಗೊಳಿಸುತ್ತದೆ.

೨.ಕೂದಲಿನ ಸಮಸ್ಯೆಗಳಾದ ತಲೆಹೊಟ್ಟು,ಬಿಳಿಯಾಗುವುದು,ತೆಳುವಾಗುವುದು,ದುರ್ಬಲಗೊಳ್ಳುವುದನ್ನು ತಡೆಗಟ್ಟುತ್ತದೆ.

೩.ಪ್ರತಿನಿತ್ಯ ಆಮ್ಲಾ ಜ್ಯೂಸ್ ಕುಡಿಯುವುದರಿಂದ ಹೃದ್ರೋಗದ ಸಮಸ್ಯೆಗಳು ನಿವಾರಣೆಗೊಳ್ಳುತ್ತದೆ.

೪.ಆಮ್ಲಾ ಜ್ಯೂಸ್, ಆಮ್ಲಾ ಪುಡಿ ಸೇವನೆಯಿಂದ ಕಣ್ಣಿನ ದೃಷ್ಟಿ ಸುಧಾರಿಸುತ್ತದೆ.

೫.ಉಗುರುಬೆಚ್ಚಗಿನ ನೀರಿನಲ್ಲಿ 20 ಮಿಲಿ ಆಮ್ಲಾ ರಸವನ್ನು ಬೆರೆಸಿ ಕುಡಿದರೆ ಅಜೀರ್ಣ ಸಮಸ್ಯೆ ಬಗೆಹರಿಯುತ್ತದೆ

೬.ಮಲಬದ್ಧತೆ, ಆಮ್ಲೀಯತೆ, ಹೊಟ್ಟೆ ನೋವು ಅಥವಾ ಸೆಳೆತದ ಸಂದರ್ಭದಲ್ಲಿ, ಅಲೋವೆರಾ ಜ್ಯೂಸ್ ಅನ್ನು ಆಮ್ಲಾ ರಸದೊಂದಿಗೆ ಬೆರೆಸಿ ಕುಡಿಯುವುದು ಪ್ರಯೋಜನಕಾರಿಯಾಗಿದೆ

೭.ಮಧುಮೇಹ ಹೊಂದಿದ್ದರೆ ನೆಲ್ಲಿಕಾಯಿ ಸೇವನೆಯು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.

೮.ಚರ್ಮ ರೋಗಗಳನ್ನು ಗುಣಪಡಿಸುವ ಶಕ್ತಿ ಇವುಗಳಿಗಿದೆ

BC Suddi   About Us
For Feedback - [email protected]

Related News

LATEST Post

WhatsApp Icon Telegram Icon