ಚಿತ್ರದುರ್ಗ: ರಾಜ್ಯದ ರೈತರ ಬಗ್ಗೆ ಚಿಂತೆ ಇಲ್ಲ.ರಾಜ್ಯದ ಜನರು ನಿಮಗೆ ಅಧಿಕಾರ ಕೊಟ್ಟಿದ್ದಾರೆ. ನೀವು ಅವರ ಕಣ್ಣೀರು ವರೆಸಲಿ ಎಂದು. ಆದರೆ ನೀವು ಯಾರೊಬ್ಬರ ಓಲೈಕೆ ಮಾಡಲಿಕ್ಕೆ ಅನ್ಯಾಯ ಮಾಡುತ್ತಿದ್ದೀರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರವರ ವಿರುದ್ದ ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್,ನವೀನ್ ವಾಗ್ದಾಳಿ ನಡೆಸಿದರು.
ನಗರದ ಡಿ.ಸಿ.ಸರ್ಕಲ್ನಲ್ಲಿ ವಕ್ಫ್ ಬೋರ್ಡ್ ಹೆಸರಿನಲ್ಲಿ ಅಕ್ರವಾಗಿ ಕಬಳಿಸುವ ಷಡ್ಯಂತ್ರದ ಜನವಿರೋಧಿ ನೀತಿ ವಿರುದ್ಧ ಅಭಿಯಾನದಡಿ ಹಮ್ಮಿಕೊಂಡಿದ್ದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಭೂಮಿ ನಮ್ಮ ಹಕ್ಕು ಘೋಷಣೆಯೊಂದಿಗೆ ನಿನ್ನೆ ಮತ್ತು ಇಂದು ರಾಜ್ಯಾದ್ಯಂತ ಬಿಜೆಪಿ ಪಕ್ಷ ಹೋರಾಟ ಮಾಡುತ್ತಿದೆ. ಸಿದ್ದರಾಮಯ್ಯನವರ ಸೂಚನೆಯ ಮೇರೆಗೆ ವಕ್ಫಾ ಸಚಿವರು ಎಲ್ಲಾ ಜಿಲ್ಲೆಗಳಿಗೆ ಹೋಗಿ ವಕ್ಫಾ ಆಸ್ತಿಯನ್ನಾಗಿ ವಶಪಡಿಸಿಕೊಳ್ಳಬೇಕೆಂದು ಅಧಿಕೃತ ರೆಜ್ಯುಲೇಷನ್ ಮಾಡಿ ಮಠ ಮಾನ್ಯಗಳ, ರೈತರ ದೇವಸ್ಥಾನದ ಆಸ್ತಿಯನ್ನು ವಕ್ಫಾ ಹೆಸರಿಗೆ ಬರುವ ಹಾಗೆ ಮಾಡಿಕೊಳ್ಳುತ್ತಿದ್ದಾರೆ.ನಮ್ಮ ಭಾರತ ನಮ್ಮ ಕರ್ನಾಟಕ ಯಾರಿಗೆ ಸೇರಿದ್ದು ಎಂಬುದರ ಬಗ್ಗೆ ಚಿಂತೆ ಮಾಡಬೇಕು.. ಈ ದೇಶವನ್ನು ಪಾಕಿಸ್ತಾನಕ್ಕೆ ಸೇರಿಸುವ ಕೆಲಸವೆನ್ನಾದರೂ ಮಾಡುತ್ತಿದ್ದಾರೋ…? ಎಂದು ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಮಲ್ಲಿಕಾರ್ಜನ್, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಮುಖಂಡ ಎನ್.ಆರ್. ಲಕ್ಷ್ಮೀಕಾಂತ್, ಬಯಲುಸೀಮೆ ಅಭೀವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಜೀವನಮೂರ್ತಿ, ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ರಾಜೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಸಿದ್ದಾಪುರ, ರಾಮದಾಸ್, ರೈತ ಮೋರ್ಚಾ ಅಧ್ಯಕ್ಷ ವೆಂಕಟೇಶ್ ಯಾದವ್, ನಗರಧ್ಯಕ್ಷ ನವೀನ್ ಚಾಲುಕ್ಯ, ಜಿಲ್ಲಾ ಖಂಜಾಚಿ ಮಾಧುರಿ ಗೀರಿಶ್, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೇ, ಹಿರಿಯೂರು ಮಂಡಲ ಅಧ್ಯಕ್ಷ ವಿಶ್ವನಾಥ್, ಯುವ ಮೋರ್ಚಾದ ಚಂದ್ರು, ರೂಪ, ವೀಣಾ, ಬಸಮ್ಮ, ಕಂಚನ, ಕವೀತಾ, ಸುಮ, ಕಿರಣ್, ಲೋಕೇಶ್, ಯೋಗೇಶ್ ಸಹ್ಯಾದ್ರಿ, ಜಗದೀಶ್, ಹೇಮಂತ, ಕಲ್ಲಂಸೀತಾರಾಮರೆಡ್ಡಿ, ರಜನೀ ಹರೀಶ್ ಸೇರಿದಂತೆ ಇತರರು ಭಾಗವಹಿಸಿದ್ದರು.