ಉಚಿತವಾಗಿ ಆಧಾರ್ ಅಪ್​ಡೇಟ್ ಮಾಡಲು ಡಿಸೆಂಬರ್​ನಲ್ಲಿ ಗಡುವು- ಅದಾದ ಬಳಿಕ ಮುಂದೆ ಹೇಗೆ? ಇಲ್ಲಿದೆ ವಿವರ

WhatsApp
Telegram
Facebook
Twitter
LinkedIn

ಹತ್ತು ವರ್ಷಗಳಿಗೂ ಹಿಂದೆ ಆಧಾರ್ ಕಾರ್ಡ್ ಮಾಡಿಸಿರುವವರು ಒಮ್ಮೆಯಾದರೂ ಅಪ್​ಡೇಟ್ ಮಾಡಬೇಕು. ಇದು ಆಧಾರ್​ನಲ್ಲಿರುವ ಮಾಹಿತಿ ಅಪ್​ಟುಡೇಟ್ ಆಗಿರಲು ಯುಐಡಿಎಐ ತೆಗೆದುಕೊಂಡಿರುವ ಕ್ರಮ. ಆನ್​ಲೈನ್​ನಲ್ಲಿ ಆಧಾರ್​ನ ಡೆಮಾಗ್ರಾಫಿಕ್ ಮಾಹಿತಿಯನ್ನು ಅಪ್​ಡೇಟ್ ಮಾಡಬಹುದು. ಉಚಿತವಾಗಿ ಮಾಡಲು ಡಿಸೆಂಬರ್ 14ರವರೆಗೆ ಕಾಲಾವಕಾಶ ಇದೆ.

ಆಧಾರ್ ಕಾರ್ಡ್​ನಲ್ಲಿರುವ ನಿಮ್ಮ ಹೆಸರು ಇತ್ಯಾದಿ ವಿವರ ಬಹಳ ಮುಖ್ಯ. ಹಲವರ ಆಧಾರ್ ಕಾರ್ಡ್​ನಲ್ಲಿ ಹೆಸರಿನಲ್ಲಿ ತಪ್ಪುಗಳಾಗಿರಬಹುದು. ಅಕ್ಷರದೋಷ ಆಗಿರಬಹುದು. ವಿಳಾಸ ಬದಲಾಗಿರಬಹುದು. ಆಧಾರ್​ನಲ್ಲಿ ಇವುಗಳ ಮಾಹಿತಿ ಸರಿಯಾಗಿ ಇದ್ದರೆ ಅನುಕೂಲವಾಗುತ್ತದೆ. ಹೆಸರು, ಜನ್ಮದಿನಾಂಕ, ವಿಳಾಸ ಇತ್ಯಾದಿ ಡೆಮೋಗ್ರಾಫಿಕ್ ಮಾಹಿತಿಯನ್ನು ಆನ್​ಲೈನ್​ನಲ್ಲಿ ಪರಿಷ್ಕರಿಸಲು ಸಾಧ್ಯವಿದೆ. ಸದ್ಯಕ್ಕೆ ಯಾವುದೇ ಶುಲ್ಕ ಇಲ್ಲದೇ ಆನ್​ಲೈನ್​ನಲ್ಲಿ ಅಪ್​ಡೇಟ್ ಮಾಡಬಹುದು. ಈ ಉಚಿತ ಸೇವೆ ಡಿಸೆಂಬರ್ 14ರವರೆಗೂ ಇದೆ.

 

ಗಡುವು ಮುಗಿದ ಬಳಿಕ ಆಧಾರ್ ಅಪ್​ಡೇಟ್ ಮಾಡಬಹುದಾ?
10 ವರ್ಷಗಳಿಂದ ಆಧಾರ್ ಅಪ್​ಡೇಟ್ ಮಾಡದೇ ಇರುವವರು, ಡೆಮಾಗ್ರಾಫಿಕ್ ಮಾಹಿತಿಯನ್ನು ಪರಿಷ್ಕರಿಸಬೇಕೆಂದು ಯುಐಡಿಎಐ ವಿನಂತಿಸಿದೆ. ಜನರ ಬಯೋಮೆಟ್ರಿಕ್ ಮತ್ತು ಡೆಮಾಗ್ರಾಫಿಕ್ ಮಾಹಿತಿ ಅಪ್​ಟುಡೇಟ್ ಆಗಿರಲಿ ಎಂಬ ಕಾರಣಕ್ಕೆ ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಹೀಗಾಗಿ, ಕಳೆದ ಕೆಲ ತಿಂಗಳುಗಳಿಂದಲೂ ಆನ್​ಲೈನ್​ನಲ್ಲಿ ಆಧಾರ್ ಮಾಹಿತಿ ಪರಿಷ್ಕರಣೆಗೆ ಗಡುವು ವಿಸ್ತರಣೆ ಮಾಡುತ್ತಲೇ ಬರಲಾಗಿದೆ. ಈಗ ಡಿಸೆಂಬರ್ 14ರವರೆಗೂ ಕಾಲಾವಕಾಶ ವಿಸ್ತರಿಸಲಾಗಿದೆ.

 

2024ರ ಡಿಸೆಂಬರ್ 14ರ ಬಳಿಕವೂ ಆಧಾರ್ ಅಪ್​ಡೇಟ್ ಮಾಡಬಹುದು. ಆದರೆ, ಉಚಿತ ಇರುವುದಿಲ್ಲ. ಆನ್​ಲೈನ್​ನಲ್ಲಿ ಅಪ್​ಡೇಟ್ ಮಾಡಲೂ ನೀವು ಶುಲ್ಕ ತೆರಬೇಕಾಗುತ್ತದೆ. ಶುಲ್ಕ ಹೆಚ್ಚೇನೂ ಇರುವುದಿಲ್ಲ. ಸುಮಾರು 50 ರೂ ಆಸುಪಾಸಿನ ಶುಲ್ಕ ವಿಧಿಸಲಾಗುತ್ತದೆ.

ಆಧಾರ್ ಕೇಂದ್ರಕ್ಕೆ ಹೋಗಿಯೂ ಡೆಮಾಗ್ರಾಫಿಕ್ ಮಾಹಿತಿಯನ್ನು ಪರಿಷ್ಕರಿಸಬಹುದು. ಅಲ್ಲಿಯೂ ಒಂದು ಮಾಹಿತಿ ಬದಲಾವಣೆಗೆ 50 ರೂ ಶುಲ್ಕ ಪಡೆಯುತ್ತಾರೆ.

 

ಸಂಬಂಧಿತ ದಾಖಲೆಗಳ ಸ್ಕ್ಯಾನ್ಡ್ ಕಾಪಿ ಸಿದ್ಧವಿರಲಿ…
ಯುಐಡಿಎಐನ ಮೈ ಆಧಾರ್ ಪೋರ್ಟಲ್​ಗೆ ಹೋಗಿ ಮಾಹಿತಿ ಅಪ್​ಡೇಟ್ ಮಾಡಬಹುದು. ವಿಳಾಸ ಬದಲಿಸಿದ್ದರೆ ಹೊಸ ದಾಖಲೆಯ ಸ್ಕ್ಯಾನ್ಡ್ ಕಾಪಿ ಸಿದ್ಧವಿರಲಿ. ಹೆಸರು ಬದಲಾವಣೆ ಇದ್ದರೆ ಅದರ ಪ್ರೂಫ್ ದಾಖಲೆಯೂ ಜೊತೆಯಲ್ಲಿರಲಿ. ನೀವು ಪೋರ್ಟಲ್​ಗೆ ಲಾಗಿನ್ ಆಗಿ ಈ ಮಾಹಿತಿಯನ್ನು ಅಪ್​ಡೇಟ್ ಮಾಡಿ, ಸಂಬಂಧಿತ ದಾಖಲೆಗಳ ಸ್ಕ್ಯಾನ್ಡ್ ಕಾಪಿಯನ್ನೂ ಲಗತ್ತಿಸಬೇಕಾಗುತ್ತದೆ. ಆಗ ಆಧಾರ್ ಅಪ್​ಡೇಟ್ ಆಗುತ್ತದೆ.

BC Suddi   About Us
For Feedback - [email protected]

Related News

LATEST Post

WhatsApp Icon Telegram Icon