ನ್ಯೂಯಾರ್ಕ್ : ವಿಶ್ವದ ನಂ.1 ಶ್ರೀಮಂತ ಪಟ್ಟವನ್ನು ತನ್ನದಾಗಿಸಿಕೊಂಡಿದ್ದ ಟೆಸ್ಲಾ ಸಿಇಒ, ಎಕ್ಸ್ ನ ಒಡೆಯನಾದ ಎಲಾನ್ ಮಸ್ಕ್, ಇದೀಗ 29 ಲಕ್ಷ ಕೊಟಿ ರೂಪಾಯಿ ಸಂಪತ್ತನ್ನುಗಳಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ವ್ಯಕ್ತಿಯೊಬ್ಬರು ಇಷ್ಟು ಮೌಲ್ಯದ ಆಸ್ತಿಯನ್ನು ಹೊಂದಿರುವುದು ಇದೇ ಮೊದಲು ಎಂದು ಪರಿಗಣಿಸಲಾಗಿದೆ. ಇದು ನಮ್ಮ ರಾಜ್ಯದ ವಾರ್ಷಿಕ ಬಜೆಟ್‌ನ 8 ಪಟ್ಟಿಗೆ ಸಮ ಎಂಬುದು ವಿಶೇಷ.
ನ.23ರಂದು ಬ್ಲೂಮ್‌ಬರ್ಗ್ ಸಂಸ್ಥೆಯು ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ ಮಸ್ಕ್ ಆಸ್ತಿಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ 10 ಲಕ್ಷ ಕೋಟಿ ಸಂಪತ್ತು ಹೆಚ್ಚಳವಾಗಿದೆ ಎಂದು ತಿಳಿದುಬಂದಿದೆ.
ಅಮೆರಿಕದ ಚುನಾವಣೆಯಲ್ಲಿ ಮಸ್ಕ್ ಬೆಂಬಲಿತ ಪಕ್ಷವಾದ ರಿಪಬ್ಲಿಕನ್ ಪಕ್ಷ ಜಯಗಳಿಸುತ್ತಿದ್ದಂತೆ ಟೆಸ್ಲಾದ ಶೇರುಗಳಲ್ಲಿ ಭಾರಿ ಏರಿಕೆ ಕಂಡು ಬಂದಿದೆ. ಇದರ ಜೊತೆಗೆ ಎಕ್ಸ್‌ಎಐ ಕಂಪನಿಯ ಮೌಲ್ಯವು 50 ಬಿಲಿಯನ್ ಡಾಲರ್‌ನಷ್ಟು ಏರಿಕೆ ಕಂಡಿದೆ ಎಂದು ವರದಿಗಳ ಪ್ರಕಾರ ತಿಳಿದು ಬಂದಿರುವ ಮಾಹಿತಿಯಾಗಿದೆ. ಮುಂದಿನ ದಿನಗಳಲ್ಲಿ ಮಸ್ಕ್‌ರ ಆಸ್ತಿಯಲ್ಲಿ ಇನ್ನೂ 18 ಬಿಲಿಯನ್ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ.