ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷರಿಗೆ ಸಡ್ಡು ಹೊಡೆದು ಬೀದರ್ ನಿಂದ ಯತ್ನಾಳ್ ನೇತೃತ್ವದ ರೆಬಲ್ಸ್ ವಕ್ಫ್ ಹೋರಾಟ ನಡೆಸುತ್ತಿರೋದಕ್ಕೂ ಬಿಜೆಪಿ ಪಕ್ಷಕ್ಕೂ ಅದಕ್ಕೂ ಸಂಬಂಧವಿಲ್ಲ ಎಂದು ರಾಜ್ಯ ಪ್ರಧಾನಕಾರ್ಯದರ್ಶಿ ಪಿ ರಾಜೀವ್ ಹೇಳಿದ್ದಾರೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಯತ್ನಾಳ್ ವಕ್ಫ್ ಹೋರಾಟದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಗೆ ತನ್ನದೇ ಆದ ಚೌಕಟ್ಟು, ನೀತಿ ಇದೆ ರಾಷ್ಟ್ರೀಯ ಅಧ್ಯಕ್ಷರು ಪಕ್ಷ ಚಟುವಟಿಕೆ ಸೂಚನೆ ನೀಡ್ತಾರೆ,ಅದೇ ರೀತಿ ರಾಜ್ಯಾಧ್ಯಕ್ಷರು ರಾಜ್ಯಮಟ್ಟದಲ್ಲಿ, ಜಿಲ್ಲಾಧ್ಯಕ್ಷರು ಜಿಲ್ಲಾ ಮಟ್ಟದಲ್ಲಿ ನಿರ್ಧಾರ ಮಾಡ್ತಾರೆ ಹೀಗಾಗಿ ಪಕ್ಷದ ಶಿಸ್ತನ್ನ ಗಾಳಿಗೆ ತೂರಿ, ಯತ್ನಾಳ್ ವೈಯಕ್ತಿಕ ಹಿತಾಸಕ್ತಿಯಿಂದ ಮಾಡುವ ಹೋರಾಟ ಆರಂಭಿಸಿದ್ದಾರೆ.
ಯತ್ನಾಳ್ ಯಾರ ಅನುಮತಿ ಪಡೆಯದೆ ಹೋರಾಟ ಮಾಡ್ತಿದ್ದಾರೆ. ಇದು ಪಕ್ಷದ ಶಿಸ್ತಿನ ಉಲ್ಲಂಘನೆಯಾಗಿದೆ. ಪಕ್ಷ ಯತ್ನಾಳ್ ಅವರಿಗೆ ತಿಳಿ ಹೇಳುವ ಪ್ರಯತ್ನ ಮಾಡಿದ್ದೇವೆ. ಆದ್ರೂ ಅವರು ಹೋರಾಟ ಮಾಡ್ತಿದ್ದಾರೆ. ಯತ್ನಾಳ್ ಪ್ರತ್ಯೇಕ ಹೋರಾಟದ ಕುರಿತು ರಾಷ್ಟ್ರೀಯ ನಾಯಕರ ಗಮನಕ್ಕೆ ತರುತ್ತೇವೆ, ಇದುವರೆಗೆ ಯಾವುದೇ ವಿಚಾರ ಹೈಕಮಾಂಡ್ ಗೆ ತಿಳಿಸಿರಲಿಲ್ಲ ಆದ್ರೆ ಇನ್ಮುಂದೆ ತಿಳಿಸುತ್ತೇವೆ.
ವೈಯಕ್ತಿಕ ಹಿತಾಸಕ್ತಿಗಾಗಿ ಪಕ್ಷ ಬಳಕೆ ಮಾಡಿಕೊಳ್ತಿದಾರೆ ಪಕ್ಷದ ಶಿಸ್ತಿನ ಅಡಿಯಲ್ಲಿ ಕೆಲಸ ಮಾಡಬೇಕು ಹೀಗಾಗಿ ಯತ್ನಾಳ್ ಹೋರಾಟಕ್ಕೂ, ಪಕ್ಷಕ್ಕೂ ಸಂಬಂಧ ಇಲ್ಲ. ಯತ್ನಾಳ್ ಟೀಂ ವಿರುದ್ಧ ಬೀದರ್ ನಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಬಿಜೆಪಿ ಲೋಗೋ ಬಳಸಿದ್ದಾರೆ ಎಂದು ದೂರು ಕೊಟ್ಟ ವಿಚಾರಕ್ಕೆ ಉತ್ತರಿಸಿದ ಅವರು, ಬೀದರ್ ಜಿಲ್ಲಾಧ್ಯಕ್ಷರ ನಡೆಗೆ ಪಕ್ಷದ ಬೆಂಬಲ ಇದೆ,ಯತ್ನಾಳ್ ಅವರಿಂದ ಪಕ್ಷಕ್ಕೆ ಮುಜುಗುರ ಆಗಿದೆ ರಾಜ್ಯಮಟ್ಟದಲ್ಲಿ ಅದನ್ನ ಸರಿಪಡಿಸಲು ಪ್ರಯತ್ನ ನಡೆದಿದೆ ಈಗ ರಾಷ್ಟ್ರಿಯ ನಾಯಕರಿಗೆ ತಿಳಿಸುತ್ತೇವೆ ಎಂದಿದ್ದಾರೆ.