ಚಿತ್ರದುರ್ಗ: ಇಂದಿನ ದಿನಮಾನದಲ್ಲಿ ಪೋಷಕರು ಬರೀ ಅಂಕಗಳಿಗೆ ಮಾತ್ರವೇ ಮಾನ್ಯತೆಯನ್ನು ನೀಡುವ ಬದಲು ಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವಂತೆ ದಾವಣಗೆರೆ ವಿಶ್ವ ವಿದ್ಯಾಲಯದ ಉಪ ಕುಲಪತಿಗಳಾದ ಕುಂಬಾರ್ ಕರೆ ನೀಡಿದರು.
ಚಿತ್ರದುರ್ಗ ನಗರದ ದೇವರಾಜ್ ಆರಸು ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ 2023-24ನೇ ಸಾಲಿನ ಬಿಎ. ಬಿಕಾಂ, ಬಿಬಿಎ, ಬಿಎಡ್, ಬಿ.ಫಾರ್ಮ ಬಿಎಸ್.ಸಿ.ನರ್ಸಿಂಗ್ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪದವಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ದಿನಮಾನದಲ್ಲಿ ಬರೀ ಶಿಕ್ಷಣಕ್ಕೆ ಮಾತ್ರವೇ ಪ್ರಾತಿನಿಧ್ಯವನ್ನು ನೀಡದೆ ಗುಣಾತ್ಮಕವಾದ ಶಿಕ್ಷಣವನ್ನು ಪಡೆಯುವಂತ ಮುಂದಾಗಬೇಕಿದೆ ಎಂದರು.
ಶಿಕ್ಷಣದಲ್ಲಿ ಮಹತ್ತರವಾದ ಬದಲಾವಣೆಯನ್ನು ಕಾಣಲಾಗುತ್ತದೆ. ಜಾಗತಿಕ ಮಟ್ಟದಲ್ಲಿ ಇದರ ಬಗ್ಗೆ ಮಹತ್ತರವಾದ ಬದಲಾವಣೆಗಳು ಕಾಣಲಾಗುತ್ತಿದೆ. ಇಂದಿನ ದಿನದಲ್ಲಿ ಎಲ್ಲವನ್ನು ಸಹಾ ಯಂತ್ರಗಳ ಮೂಲಕ ಕೆಲಸವನ್ನು ಮಾಡಲಾಗುತ್ತಿದೆ ಇದರ ಬಳಕೆಯ ತಂತ್ರಜ್ಞಾನವನ್ನು ಕಲಿಯಬೇಕಾದ ಅನಿವಾರ್ಯತೆ ಇದೆ ಎಂದರು.
ಉನ್ನತ ಶಿಕ್ಷಣದಲ್ಲಿ ಜಾಗತಿಕ ಮಟ್ಟದಲ್ಲಿ ಮಹತ್ತರವಾದ ಬದಲಾವಣೆಗಳು ಆಗಿವೆ. ಬರೀ ಪ್ರಮಾಣಪತ್ರವನ್ನು ಪಡೆದ ಮೇಲೂ ಬೇರೆಯವರಿಗೆ ಉದ್ಯೋಗವನ್ನು ನೀಡುವಂತ ಮುಂದಾಗಬೇಕಿದೆ. ತಂತ್ರಜ್ಞಾನ ಇದ್ದರೆ ಮಾತ್ರ 21ನೇ ಶತಮಾನದಲ್ಲಿ ಬದುಕಲು ಸಾಧ್ಯವಿದೆ. ನಮ್ಮಲ್ಲಿ ತಂತ್ರಜ್ಞಾನದ ಮಾಹಿತಿ ಇದ್ದರೆ ಮಾತ್ರ ಪ್ರಗತಿಯನ್ನು ಸಾಧಿಸಲು ಸಾಧ್ಯವಿದೆ.
ಕಾಲೇಜಿನಲ್ಲಿ ಕಲಿತಿರುವುದು ಬೇರೆ ಜೀವನದಲ್ಲಿ ಹೇಳಬೇಕಾದ್ದು ಬೇರೆ ಇದರ ಬಗ್ಗೆ ತಿಳಿಯಬೇಕಿದೆ. 21ನೇ ಶತಮಾನದಲ್ಲಿ ಮಕ್ಕಳು ಉತ್ತಮವಾದ ಜ್ಞಾನವನ್ನು ಹೊಂದಿದ್ದಾರೆ ಅದಕ್ಕೆ ತಕ್ಕಂತೆ ನಾವುಗಳು ತಯಾರಾಗಬೇಕಿದೆ. ಯಾವುದೇ ಕಾರಣಕ್ಕೂ ನಿಮ್ಮ ಶಿಕ್ಷಣವನ್ನ್ನು ಕಡಿತಗೊಳಿಸಬೇಡಿ ನಿಮ್ಮ ಕೈಯಲ್ಲಿ ಎಷ್ಟು ಸಾಧ್ಯವಾಗುತ್ತದೆಯೂ ಅಷ್ಟು ಶಿಕ್ಷಣವನ್ನು ಕಲಿಯಿರಿ, ಶಿಕ್ಷಣದ ಜೊತೆಗೆ ಕೌಶಲ್ಯವನ್ನು ಕಲಿಯಿರಿ ಇದರಿಂದ ಮುಂದೆ ನಿಮಗೆ ಉಪಯೋಗವಾಗಲಿದೆ ಎಂದು ಉಪಕುಲಪತಿಗಳಾದ ಕಂಬಾರ್ ಕರೆ ನೀಡಿದರು.
ದೇವರಾಜ್ ಅರಸು ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಣಾಧಿಕಾರಿಗಳಾದ ರಘುಚಂದನ್, ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ದೇವರಾಜ್ ಅರಸು ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿಗಳು ಶಾಸಕರಾದ ಎಂ.ಚಂದ್ರಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ದೇವರಾಜ್ ಅರಸು ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಗಳಾದ ಶ್ರೀಮತಿ ಚಂದ್ರಕಲಾ, ಅಧ್ಯಕ್ಷರಾದ ಶ್ರೀಮತಿ ಯಶಸ್ವಿನಿ ಕಿರಣ್, ವೆಂಕಟೇಶ್ವರ ಕಾಲೇಜು ಶಿಕ್ಷಣದ ಪ್ರಾಂಶುಪಾಲರಾದ ಡಾ.ಬಿ.ಸಿ. ಆನಂತರಾಮ್, ವೆಂಕಟೇಶ್ವರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಎ.ಜೆ.ಶಿವಕುಮಾರ್, ಎಸ್.ಎಲ್.ವಿ. ಸ್ಕೂಲ್ ಅಫ್ ನಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಪಾಲಾಕ್ಷ ಉಪಸ್ಥಿತರಿದ್ದರು.