ದಾವಣಗೆರೆ: ‘ಇತರೆ ಕ್ರೀಡೆಗಳಲ್ಲಿ ಇರುವಂತೆ ಚದುರಂಗದಾಟದ ಗೆಲುವಿಗೆ ಅದೃಷ್ಟ, ಆಕಸ್ಮಿಕ ಎಂಬುದಿಲ್ಲ. ಈ ಕ್ರೀಡೆಯಲ್ಲಿ ಬದುಕಿನ ಫಿಲಾಸಫಿ ಇದೆ’ ಎಂದು ವಾಗ್ಮಿ, ಚಿಂತಕ ಪ್ರೊ. ಕೃಷ್ಣಗೌಡ ಹೇಳಿದರು. ನಗರದ ಸೋಮೇಶ್ವರ ವಿದ್ಯಾಲಯದಲ್ಲಿ 2024-25 ನೇ ಸಾಲಿನ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಅಂಗವಾಗಿ ಸೋಮೇಶ್ವರ ಚದುರಂಗ ಸಿರಿ ಪ್ರಶಸ್ತಿಗಾಗಿ
ನಡೆದ ಅಂತರ್ ಶಾಲಾ ಮಟ್ಟದ ಚದುರಂಗ ಸ್ಪರ್ಧೆ ಉದ್ಘಾಟಿಸಿ, ಮಾತನಾಡಿದರು ಚದುರಂಗ ಎಂಬುದು ಒಂದು ಅದ್ಭುತ ಆಟ ಇದರೊಳಗೆ ಬದುಕಿನ ಫಿಲಾಸಫಿಯೇ ಅಡಗಿದೆ. ಎದುರಾಳಿ ನಡೆ ಆಧರಿಸಿ ಅವರ ಮನಸ್ಸನ್ನು ಅರಿತು ನೀವು ಆಟ ಆಡಬೇಕು. ಈ ಕಾಯಿ ನಡೆಸಿದರೆ ಮುಂದೆ ಏನಾಗಬಹುದು, ಅವರು ಮುಂದೆ ನಡೆದರೆ ನಾನು ಏನು ಮಾಡಬೇಕು ಎನ್ನುವ ಪ್ರತಿಕ್ಷಣದ ಜಾಣೆ, ಬುದ್ಧಿಶಕ್ತಿ ಉಪಯೋಗಿಸಿ ಆಟ ಆಡಬೇಕು ಎಂದರು ತಾವೇ ಆಟವಾಡುವ ಮೂಲಕ ಕೃಷ್ಣಗೌಡ ಅವರು ಉದ್ಘಾಟಿಸಿದರು. ಇದು ಸಂಪೂರ್ಣ ಬುದ್ಧಿಶಕ್ತಿಯ ಆಟ. ಯಾವುದೇ ದೇಹದ ಶಕ್ತಿ ಮತ್ತು ಕೌಶಲ್ಯವನ್ನು ಈ ಆಟ ಅವಲಂಬಿಸಿರುವುದಿಲ್ಲ’ ಎಂದು ಹೇಳಿದರು. ಮಕ್ಕಳಲ್ಲಿ ಕೌಶಲ್ಯ ಬೆಳೆಸುತ್ತಿದೆ. ಭಾರತದಲ್ಲಿ ಅನಾದಿ ಕಾಲದಿಂದಲೂ
ಚದುರಂಗ ಆಟವಿದೆ. ರಾಜ, ಮಹಾರಾಜರು ದೊಡ್ಡದಾದ ಚದುರಂಗದ ಅಂಕಣ ನಿರ್ಮಿಸಿ ನಿಜವಾಗಿಯೂ ಆನೆ,ಕುದುರೆಗಳನ್ನು ಅಲ್ಲಿ ನಿಲ್ಲಿಸಿ ಮುನ್ನಡೆಸುತ್ತಿದ್ದರು ಎಂಬುದನ್ನು ಇತಿಹಾಸದಲ್ಲಿ ನಾವು ನೋಡಬಹುದು. ಸೋಮೇಶ್ವರ ಶಾಲೆ ಮಕ್ಕಳಿಗೆ ಕೇವಲ ವಿದ್ಯೆ ನೀಡುವುದಕ್ಕೆ ಸೀಮಿತವಾಗದೆ ಅವರಲ್ಲಿನ ಅಂತಃಶಕ್ತಿಯನ್ನು ಬೆಳೆಸುವ ಕೆಲಸವನ್ನು ಮಾಡುತ್ತದೆ ಎಂದು ಕೃಪೇಗೌಡ ಹೇಳಿದರು. ಸೋಮೇಶ್ವರ ಸಮೂಹ ಸಂಸ್ಥೆಗಳ ಸಂಸ್ಥಾಪಕ ಕೆ.ಎಂ. ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಸಮೂಹ ಸಂಪನ್ಮೂಲ ವ್ಯಕ್ತಿ ಆರ್.ಎಂ. ಭರತ್, ತೀರ್ಪುಗಾರ ಸೋಮಶೇಖರ್ ಬಿರಾದಾರ್, ಪ್ರಾಚಾರ್ಯ ಪ್ರಭಾವತಿ, ಗೋಣಿವಾಡ ಶಾಲೆ ಪ್ರಾಚಾರ್ಯರಾದ ವೀಣಾ ಆಡಳಿತಾಧಿಕಾರಿ ಹರೀಶ್ ಬಾಬು, ಶೈಕ್ಷಣಿಕ ನಿರ್ದೇಶಕ ಪರಮೇಶ್ವರಪ್ಪ, ಮುಖ್ಯಶಿಕ್ಷಕರಾದ ಪ್ರಕಾಶ್, ಗಾಯತ್ರಿ, ಪಿಆರ್ ಒ ಹೇಮಾ ದೈಹಿಕ ಶಿಕ್ಷಣ ವಿಭಾಗದ ಶಿಕ್ಷಕ ವೃಂದ ಇತರರು ಇದ್ದರು.