ಚಿತ್ರದುರ್ಗ: ಚಿತ್ರದುರ್ಗ ನಗರದ ಜಿಲ್ಲಾ ಪಂಚಾಯಿತಿ ಮಿನಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ.ಸೋಮಶೇಖರ್ ಅಧ್ಯಕ್ಷತೆಯಲ್ಲಿ 2024-25ನೇ ಸಾಲಿಗೆ 11 ನಿಗಮಗಳಿಂದ ಅನುμÁ್ಠನಗೊಳಿಸುತ್ತಿರುವ ವಿವಿಧ ಯೋಜನೆಯಗಳಡಿ ಸಾಲ, ಸಹಾಯಧನ ಕೋರಿ ಸ್ವೀಕೃತಗೊಂಡ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವ ಸಂಬಂಧ ಆಯ್ಕೆ ಸಮಿತಿ ಸಭೆ ನಡೆಯಿತು. ಸಭೆಯ ಸಂಪೂರ್ಣ ವಿಡಿಯೋ ಚಿತ್ರಿಕರಿಸಿ, ಪಾರದರ್ಶಕವಾಗಿ ಸಭೆ ಮಾಡಲಾಯಿತು.
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ 12 ಗುರಿ ನಿಗಧಿಯಾಗಿದ್ದು 36 ಅರ್ಜಿಗಳು ಸ್ವಿಕೃತವಾಗಿದ್ದು, ಇದರಲ್ಲಿ 12 ಫಲಾನುಭವಿಯನ್ನು ಆಯ್ಕೆ ಮಾಡಲಾಯಿತು. ಹಾಗೆಯೇ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೇರ ಸಾಲಕ್ಕೆ ಗುರಿ-24 ನಿಗಧಿಯಾಗಿದ್ದು, 31 ಅರ್ಜಿಗಳು ಬಂದಿದ್ದು, ಇದರಲ್ಲಿ 24 ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು.
ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮಕ್ಕೆ ಗುರಿ-19 ನಿಗಧಿಯಾಗಿದ್ದು, ಅರ್ಜಿಗಳು ಬಂದಿರುವುದು ಒಟ್ಟು-237, ಇದರಲ್ಲಿ 19-ಫಲಾನುಭವಿಯನ್ನು ಆಯ್ಕೆ ಮಾಡಲಾಯಿತು. ಶೈಕ್ಷಣಿಕ ನೇರ ಸಾಲಕ್ಕೆ ಗುರಿ-02 ನಿಗಧಿಯಾಗಿದ್ದು, ಅರ್ಜಿಗಳು ಬಂದಿರುವುದು-04, ಇದರಲ್ಲಿ 02 ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು.
ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮಕ್ಕೆ ಗುರಿ-10 ನಿಗಧಿಯಾಗಿದ್ದು, ಅರ್ಜಿಗಳು ಬಂದಿರುವುದು ಒಟ್ಟು-625 ಇದರಲ್ಲಿ 10-ಫಲಾನುಭವಿಯನ್ನು ಆಯ್ಕೆ ಮಾಡಲಾಯಿತು. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೇರ ಸಾಲಕ್ಕೆ ಗುರಿ-04, ಅರ್ಜಿಗಳು ಬಂದಿರುವುದು-05, 04 ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು.
ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮಕ್ಕೆ ಗುರಿ-14 ನಿಗಧಿಯಾಗಿದ್ದು, ಅರ್ಜಿಗಳು ಬಂದಿರುವುದು ಒಟ್ಟು-133, ಇದರಲ್ಲಿ 14 ಫಲಾನುಭವಿಯನ್ನು ಆಯ್ಕೆ ಮಾಡಲಾಯಿತು.
ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮಕ್ಕೆ ಗುರಿ-25 ನಿಗಧಿಯಾಗದ್ದು, ಅರ್ಜಿಗಳು ಬಂದಿರುವುದು ಒಟ್ಟು-553 ಇದರಲ್ಲಿ 25-ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು.
ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮಕ್ಕೆ ಗುರಿ-17 ನಿಗಧಿಯಾಗಿದ್ದು, ಅರ್ಜಿಗಳು ಬಂದಿರುವುದು ಒಟ್ಟು-219 ಇದರಲ್ಲಿ 17 ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು.
ಕರ್ನಾಟಕ ಅಲೆಮಾರಿ ಮತ್ತು ಅರೆಅಲೆಮಾರಿ ಅಭಿವೃದ್ಧಿ ನಿಗಮಕ್ಕೆ ಗುರಿ-27 ನಿಗಧಿಯಾಗಿದ್ದು, ಅರ್ಜಿಗಳು ಬಂದಿರುವುದು ಒಟ್ಟು-2718 ಇದರಲ್ಲಿ 27-ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೇರ ಸಾಲಕ್ಕೆ ಗುರಿ-04 ನಿಗಧಿಯಾಗಿದ್ದು, ಅರ್ಜಿಗಳು ಬಂದಿರುವುದು-25 ಇದರಲ್ಲಿ 04 ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು.
ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಗುರಿ-21 ನಿಗಧಿಯಾಗಿದ್ದು, ಅರ್ಜಿಗಳು ಬಂದಿರುವುದು ಒಟ್ಟು-1420, ಇದರಲ್ಲಿ 21 ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೇರ ಸಾಲಕ್ಕೆ ಗುರಿ-25 ನಿಗಧಿಯಾಗಿದ್ದು, ಅರ್ಜಿಗಳು ಬಂದಿರುವುದು-40, ಇದರಲ್ಲಿ 25 ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು
ಕರ್ನಾಟಕ ಒಕ್ಕಲಿಗ ಸಮುದಾಯಗಳ ಅಭಿವೃದ್ಧಿ ನಿಗಮಕ್ಕೆ ಗುರಿ-31 ನಿಗಧಿಯಾಗಿದ್ದು, ಅರ್ಜಿಗಳು ಬಂದಿರುವುದು ಒಟ್ಟು-396, ಇದರಲ್ಲಿ 31 ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೇರ ಸಾಲಕ್ಕೆ ಗುರಿ-10 ನಿಗಧಿಯಾಗಿದ್ದು, ಅರ್ಜಿಗಳು ಬಂದಿರುವುದು-15, ಇದರಲ್ಲಿ 10 ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು.
ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮಕ್ಕೆ ಗುರಿ-49 ನಿಗಧಿಯಾಗಿದ್ದು, ಅರ್ಜಿಗಳು ಬಂದಿರುವುದು ಒಟ್ಟು-35, ಇದರಲ್ಲಿ 35 ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೇರ ಸಾಲಕ್ಕೆ ಗುರಿ-06 ನಿಗಧಿಯಾಗಿದ್ದು, ಇಬ್ಬರು ಅರ್ಜಿ ಸಲ್ಲಿಸಿದ್ದು, ಅರ್ಜಿ ಸಲ್ಲಿಕೆ ಮಾಡಿದ ಇಬ್ಬರು ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು.
ಕರ್ನಾಟಕ ಆರ್ಯ ವೈಶ್ಯ ಸಮುದಾಯಗಳ ಅಭಿವೃದ್ಧಿ ನಿಗಮಕ್ಕೆ ಗುರಿ-23 ನಿಗಧಿಯಾಗಿದ್ದು, 81 ಅರ್ಜಿಗಳು ಸಲ್ಲಿಕೆಯಾಗಿದ್ದು, ಇದರಲ್ಲಿ 23 ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. 2024-25ನೇ ಸಾಲಿಗೆ ಗಂಗಾಕಲ್ಯಾಣ ಯೋಜನೆಯಡಿ ಸೌಲಭ್ಯ ಕೋರಿ ಸ್ವೀಕೃತಗೊಂಡ ಅರ್ಹ ಫಲಾಪೇಕ್ಷಿಗಳಿಗೆ ಕೊಳವೆ ಬಾವಿ ಸೌಲಭ್ಯ ಒದಗಿಸಲು ಆಯ್ಕೆ ಸಮಿತಿ ಮೂಲಕ ಆಯ್ಕೆ ಮಾಡಿಲಾಯಿತು. ಮಂಜೂರಾತಿಗಾಗಿ ಆಯ್ಕೆ ಸಮಿತಿಯಿಂದ ಅನುಮೋದನೆ ಪಡೆಯಲಾಯಿತು.
ಸಭೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಸುಬ್ರನಾಯಕ, ಸಹಕಾರ ಸಂಘಗಳ ಉಪನಿಬಂಧಕ ದಿಲೀಪ್ ಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಪವಿತ್ರ, ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಆನಂದ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ ಕಾಳೇಸಿಂಘೆ ಸೇರಿದಂತೆ ವಿವಿಧ ಇಲಾಖೆಯ ಆಯ್ಕೆ ಸಮಿತಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.