ಚಿತ್ರದುರ್ಗ: ಭ್ರಷ್ಠಾಚಾರ ಮುಕ್ತ ಚಿತ್ರದುರ್ಗವನ್ನಾಗಿ ಮಾಡುವ ಸಲುವಾಗಿ ಆಮ್ ಆದ್ಮಿ ಪಾರ್ಟಿ ಚಿತ್ರದುರ್ಗ ಘಟಕದವತಿಯಿಂದ ಇಂದಿನಿಂದ ಮೂರು ದಿನಗಳ ಕಾಲ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಂಡಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಆಮ್ ಆದ್ಮಿ ಪಾರ್ಟಿಯ ಜಿಲ್ಲಾಧ್ಯಕ್ಷರಾದ ಬಿ.ಇ.ಜಗದೀಶ್ ಇತ್ತೀಚಿನ ದಿನಮಾನದಲ್ಲಿ ಎಲ್ಲಡೆ ಭ್ರಷ್ಠಾಚಾರ ತುಂಬಿ ತುಳುಕಾಡುತ್ತಿದೆ, ಇಂದಿನ ದಿನಮಾನದಲ್ಲಿ ಸಮಾಜಿಕ ನ್ಯಾಯ ಸರಿಯಾದ ರೀತಿಯಲ್ಲಿ ಸಿಕ್ಕಲ್ಲ, ಸಂವಿಧಾನದ ಆಶಯಗಳು ಪೂರ್ಣಗೊಂಡಿಲ್ಲ, ಸರ್ಕಾರದ ಸೌಲಭ್ಯಗಳು ಸಿಕ್ಕವರಿಗೆ ಸಿಗುತ್ತಿವೆ, ಬಡವ ಬಡವನಾಗಿಯೇ ಇರುತ್ತಿದ್ದಾರೆ ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ, ಇಂದಿನ ದಿನಮಾನದಲ್ಲಿ ಎಲ್ಲಡೆ ಭ್ರಷ್ಠಾಚಾರ ಎನ್ನುವುದು ತುಂಬಿದೆ ಯಾವ ಸರ್ಕಾರಿ ಕಚೇರಿಯಾದರೂ ಸಹಾ ಲಂಚ ಇಲ್ಲದೆ ಕೆಲಸವಾಗುವುದಿಲ್ಲ, ಆಸ್ಪತ್ರೆಯಲ್ಲಿ ಇದರ ಪ್ರಮಾಣ ಹೆಚ್ಚಾಗಿದೆ, ಬಡವರು ಚಿಕಿತ್ಸೆಗಾಗಿ ಹೋದರೆ ಲಂಚ ಇಲ್ಲದೆ ಚಿಕಿತ್ಸೆ ಸಿಗುವುದಿಲ್ಲ ಕಾರ್ಯಾಂಗ ಶಾಸಕಾಂಗ ಭ್ರಷ್ಠಾಚಾರದಿಂದ ಕೊಡಿದೆ. ಇದರಲ್ಲಿ ಮತದಾರನು ಸಹಾ ಭ್ರಷ್ಠಚಾರನಾಗಿದ್ದಾನೆ ಇವರಿಂದ ಮತವನ್ನು ಖರೀದಿ ಮಾಡಿದ ಚುನಾಯುತ ವ್ಯಕ್ತಿಯೂ ಸಹಾ ಭ್ರಷ್ಠಚಾರನಾಗಿದ್ದಾನೆ ಎಂದು ದೂರಿದರು.
ಈ ಸತ್ಯಾಗ್ರಹದಲ್ಲಿ ಪ್ರಧಾನ ಕಾರ್ಯದರ್ಶಿ ಲೋಕೇಶ್ ಕಾರ್ಯದರ್ಶಿ ರಾಮಪ್ಪ, ಮಹಿಳಾ ಘಟಕದ ಅಧ್ಯಕ್ಷರಾದ ಜ್ಯೋತಿ ಲಕ್ಷ್ಮೀ, ಪ್ರಧಾನ ಕಾರ್ಯದರ್ಶಿ ವಿನೋದಮ್ಮ, ಸಂಘಟನಾ ಕಾರ್ಯದರ್ಶಿ ಶಿವಮ್ಮ. ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಸೈಯದ್ ತನ್ವೀರ್, ಕಾರ್ಯದರ್ಶಿ ಸೈಯದ್ ದಾವೂದ್, ಹೊಳಲ್ಕರೆ ಘಟಕದ ಅಧ್ಯಕ್ಷ ಮಲ್ಲಿಕಾರ್ಜನಪ್ಪ, ಜಂಟಿ ಕಾರ್ಯದರ್ಶಿ ಲೋಕೇಶಪ್ಪ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ರವಿ, ಜಿಲ್ಲಾ ಮಾಧ್ಯಮ ಸಲಹೆಗಾರ ಲೋಹಿತ್, ಯುವ ಘಟಕದ ಅಧ್ಯಕ್ಷ ರವಿ, ಚಂದ್ರಮ್ಮ, ಪರಮೇಶ್ವರಪ್ಪ, ಸೇರಿದಂತೆ ಇತರರು ಭಾಗವಹಿಸಿದ್ದರು.