ಕಲಬುರಗಿ : ರಾಜ್ಯದಲ್ಲಿ ವಕ್ಫ್ ಮಂಡಳಿಗೆ ಸೇರಿದ 2.77 ಲಕ್ಷ ಕೋಟಿಯಷ್ಟು ಆಸ್ತಿ ಒತ್ತುವರಿಯಾಗಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ , ಮಾಜಿ ಸಿಎಂ ದಿ. ಧರ್ಮ ಸಿಂಗ್,ಮಾಜಿ ಸಚಿವ ಖಮರುಲ್ ಇಸ್ಲಾಂ , ಕೇಂದ್ರದ ಮಾಜಿ ಸಚಿವ ಸಿಎಂ ಇಬ್ರಾಹಿಂ ಅವರೂ ವಕ್ಫ್ ಆಸ್ತಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬುದು ಅನ್ವರ್ ಮಣಿಪ್ಪಾಡಿ ವರದಿಯಲ್ಲಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು.
ವಕ್ಫ್ ಭೂಕಬಳಿಕೆ ವಿರೋಧಿ ಜನಜಾಗೃತಿ ಹೋರಾಟದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿ, ನನ್ನ ಹೇಳಿಕೆಯನ್ನು ವಿರೋಧಿಸಿ ಸಿಎಂ ಇಬ್ರಾಹಿಂ ಅವರು ನನಗೆ ಮಾನಹಾನಿ ನೋಟಿಸ್ ನೀಡಿ, ಕ್ಷಮೆಗೆ ಒತ್ತಾಯಿಸಿದ್ದಾರೆ. ನಾನು ಯಾರಿಗೂ ಹೆದರುವ ಮಗನಲ್ಲ ಎಂದು ಹೇಳಿದರು.
ಸಚಿವ ಪ್ರಿಯಾಂಕ್ ಖರ್ಗೆ ಅವರ ಅಜ್ಜಿ ಹಾಗೂ ಅತ್ತೆಯನ್ನು ರಜಾಕಾರರು ಸುಟ್ಟು ಹಾಕಿದ್ದರು. ರಜಾಕಾರರು ಮುಸ್ಲಿಮರಲ್ಲ ಎಂದು ಹೇಳಿಕೆ ನೀಡಿದರು.ಪ್ರಿಯಾಂಕ್ ಅವರು ಮೆದುಳಿಲ್ಲದ ಗಿರಾಕಿ. ದೇಶದಲ್ಲಿ ಇಂತಹ ಗಿರಾಕಿ ರಾಹುಲ್ ಗಾಂಧಿ ಮಾತ್ರ ಎಂದುಕೊಂಡಿದ್ದೆ. ಅಂತಹ ಗಿರಾಕಿ ಕಲಬುರಗಿಯಲ್ಲೂ ಇದ್ದಾರೆ ಎಂದರು.