ಮಂಗಳೂರು: ಸರ್ಕಾರಿ ಶಾಲೆಗಳಲ್ಲಿ ರಾಜ್ಯದ ಎಲ್ಲ ಜನಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳ ಮಕ್ಕಳು ಕಡ್ಡಾಯವಾಗಿ ಕಲಿಯುವಂತಾಗ- ಬೇಕು. ಇಲ್ಲದಿದ್ದರೆ ಸರ್ಕಾರಿ ಶಾಲೆಗಳು ಉದ್ಧಾರ ಆಗುವುದಿಲ್ಲ ಎಂದು ಆದಿಚುಂಚನಗಿರಿ ಕ್ಷೇತ್ರದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಆದಿಚುಂಚನಗಿರಿ ಮಹಾಸಂಸ್ಥಾನದ ಮಂಗಳೂರು ಶಾಖಾ ಮಠದ ಮಹೋತ್ಸವ ಅಂಗವಾಗಿ ಈ ಹಮ್ಮಿಕೊಂಡಿದ್ದ ಬಿಜಿಎಸ್ ಕರಾವಳಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಿದಾಗ ಸಚಿವರಿಗೆ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಆ ಶಾಲೆಯ ಅಭಿವೃದ್ಧಿ ಕುರಿತ ಉತ್ತ- ರದಾಯಿತ್ವ ಹೆಚ್ಚುತ್ತದೆ. ಶಾಲೆಯ ಅವಶ್ಯಕತೆಗಳನ್ನು ಈಡೇರಿಸುವ ಬದ್ಧತೆ ಇರುತ್ತದೆ ಹಾಗೂ ಇದಕ್ಕಾಗಿ – ರಾಜ್ಯದಾದ್ಯಂತ ಚಳವಳಿ ಆರಂಭಿಸಬೇಕಿದೆ’ ಎಂದು ಸ್ವಾಮೀಜಿ ಹೇಳಿದರು.