ಚಿತ್ರದುರ್ಗ : ಭ್ರಷ್ಠಾಚಾರ ಎನ್ನುವುದು ಇಂದಿನಿಂದಲ್ಲ ಹಿಂದಿನಿಂದಲೂ ಇದೆ ಆದರೆ ಅಗ ಕದ್ದು ಮುಚ್ಚಿ ನಡೆಯುತ್ತಿತ್ತು ಆದರೆ ಈಗ ರಾಜರೋಷವಾಗಿ ನಡೆಯುತ್ತಿದೆ ಇದಕ್ಕೆ ತಡೆಯನ್ನು ಹಾಕಬೇಕಿದೆ. ಇದನ್ನು ನಿಲ್ಲಿಸುವುದಕ್ಕೆ ಆಗುವುದಿಲ್ಲ ಆದರೆ ಎಲ್ಲರು ಸೇರಿ ಇದನ್ನು ಕಡಿಮೆ ಮಾಡುವ ಕಾರ್ಯವನ್ನು ಮಾಡಬೇಕಿದೆ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯಾಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು ಕರೆ ನೀಡಿದರು.
ಭ್ರಷ್ಠಾಚಾರ ಮುಕ್ತ ಚಿತ್ರದುರ್ಗವನ್ನಾಗಿ ಮಾಡುವ ಸಲುವಾಗಿ ಆಮ್ ಆದ್ಮಿ ಪಾರ್ಟಿ ಚಿತ್ರದುರ್ಗ ಘಟಕದ ವತಿಯಿಂದ ನಡೆಯುತ್ತಿರುವ ಉಪವಾಸ ಸತ್ಯಾಗ್ರಹ ಇಂದಿಗೆ ಮೂರನೇ ದಿನಕ್ಕೆ ಕಾಲಿಟಿದ್ದು, ಇದರಲ್ಲಿ ಭಾಗವ ಹಿಸಿದ್ದ ಅವರು ಮಾತನಾಡಿ, ದೇಶವೂ ಸಹಾ ಭ್ರಷ್ಠ ಮುಕ್ತವಾದ ದೇಶವಾಗಬೇಕಿದೆ, ಇದಕ್ಕೆ ಎಲ್ಲರು ಸಹಾ ಸಹಕಾರವನ್ನು ನೀಡಬೇಕಿದೆ ಎಂದರು.
ಚಿತ್ರದುರ್ಗ ಘಟಕ ನಡೆಸುವ ಈ ಕಾರ್ಯಕ್ಕೆ ನಮ್ಮ ಪೂರ್ಣವಾದ ಬೆಂಬಲ ಇದೆ, ಇದನ್ನು ಎಲ್ಲರು ಸಹಾ ಬೆಂಬಲಿಸಬೇಕಿದೆ. ಭ್ರಷ್ಠಾಚಾರ ಹೆಚ್ಚಿನ ರೀತಿಯಲ್ಲಿ ತಾಂಡವಾಡುತ್ತಿದೆ ಇದನ್ನು ತಪ್ಪಿಸಲು ಸಾಧ್ಯವಿಲ್ಲ ಆದರೆ ಕಡಿಮೆ ಮಾಡಬಹುದಾಗಿದೆ ಇದಕ್ಕೆ ಎಲ್ಲರೂ ಹೆಚ್ಚಿನ ರೀತಿಯಲ್ಲಿ ಸಹಕರಿಸಬೇಕಿದೆ. ಇದು ನಡೆದಿರುವುದು ಸಾಂಕೇತಿಕವಾಗಿದೆ ಮುಂದಿನ ದಿನಮಾನದಲ್ಲಿ ಇದರ ಹೋರಾಟವನ್ನು ರಾಜ್ಯಾದ್ಯಾಂದತ ನಡೆಸಲಾಗುವುದು ಎಂದರು.
ಆಮ್ ಆದ್ಮಿ ಪಾರ್ಟಿ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಪೃಥ್ವಿರೆಡ್ಡಿ, ರಾಜ್ಯ ಕಾರ್ಯದರ್ಶಿ ಬಸವರಾಜು ಮುದಿಗೌಡ ಹಾಗೂ ಉಷಾ ಮೋಹನ್ ಚಿತ್ರದುರ್ಗ ಘಟಕದ ಅಧ್ಯಕ್ಷರಾದ ಜಗದೀಶ್, ಪ್ರಧಾನ ಕಾರ್ಯದರ್ಶಿ ಲೋಕೇಶ್ ಕಾರ್ಯದರ್ಶಿ ರಾಮಪ್ಪ, ಮಹಿಳಾ ಘಟಕದ ಅಧ್ಯಕ್ಷರಾದ ಜ್ಯೋತಿ ಲಕ್ಷ್ಮೀ, ಪ್ರಧಾನ ಕಾರ್ಯದರ್ಶಿ ವಿನೋದಮ್ಮ, ಸಂಘಟನಾ ಕಾರ್ಯದರ್ಶಿ ಶಿವಮ್ಮ. ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಸೈಯದ್ ತನ್ವೀರ್, ಕಾರ್ಯದರ್ಶಿ ಸೈಯದ್ ದಾವೂದ್, ಹೊಳಲ್ಕೆರೆ ಘಟಕದ ಅಧ್ಯಕ್ಷ ಮಲ್ಲಿಕಾರ್ಜನಪ್ಪ, ಜಂಟಿ ಕಾರ್ಯದರ್ಶಿ ಲೋಕೇಶಪ್ಪ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ರವಿ, ಹೊಸದುರ್ಗ ಅಧ್ಯಕ್ಷ ರಾಜು, ಜಿಲ್ಲಾ ಮಾಧ್ಯಮ ಸಲಹೆಗಾರ ಲೋಹಿತ್, ಯುವ ಘಟಕದ ಅಧ್ಯಕ್ಷ ರವಿ, ಚಂದ್ರಮ್ಮ, ಪರಮೇಶ್ವರಪ್ಪ, ಸೇರಿದಂತೆ ಇತರರು ಭಾಗವಹಿಸಿದ್ದರು.